ಹೈನುಗಾರಿಕೆ ಪ್ರೋತ್ಸಾಹ ಧನ ಹೆಚ್ಚಳಕ್ಕೆ ಆಗ್ರಹ

KannadaprabhaNewsNetwork |  
Published : Jul 08, 2026, 01:45 AM IST
01 | Kannada Prabha

ಸಾರಾಂಶ

ದೇವನಹಳ್ಳಿ: ಹಾಲಿನ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ, ರೈತರಿಗೆ ಸಿಗುತ್ತಿರುವ ಆದಾಯ ಕಡಿಮೆಯೆ. ಆದ್ದರಿಂದ ಪ್ರೋತ್ಸಾಹ ಧನ ೫ ರು.ಗಳಿಂದ ೧೦ ರು.ಗಳಿಗೆ ಹೆಚ್ಚಿಸುವಂತೆ ಆಗ್ರಹಿಸಿ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಂಜುನಾಥ್ ತಿಳಿಸಿದರು

ದೇವನಹಳ್ಳಿ: ಹಾಲಿನ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ, ರೈತರಿಗೆ ಸಿಗುತ್ತಿರುವ ಆದಾಯ ಕಡಿಮೆಯೆ. ಆದ್ದರಿಂದ ಪ್ರೋತ್ಸಾಹ ಧನ ೫ ರು.ಗಳಿಂದ ೧೦ ರು.ಗಳಿಗೆ ಹೆಚ್ಚಿಸುವಂತೆ ಆಗ್ರಹಿಸಿ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಂಜುನಾಥ್ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಕಚೇರಿಯಲ್ಲಿ ಹಾಲು ಉತ್ಪಾಧಕರ ಸಹಕಾರ ಸಂಘದ ಸದಸ್ಯರು ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಪಶು ಆಹಾರದ ಬೆಲೆ, ಮೇವಿನ ದರ, ಪಶುವೈದ್ಯಕೀಯ ಖರ್ಚು ಮತ್ತು ಸಾರಿಗೆ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದನೆ ರೈತರಿಗೆ ಹೊರೆಯಾಗಿ ಪರಿಣಮಿಸಿದೆ. ಸರ್ಕಾರ ಹೈನುಗಾರಿಕೆ ಅವಲಂಬಿತರ ಮೇಲೆ ಸರ್ಕಾರ ಕಾಳಜಿ ವಹಿಸಬೇಕು ಎಂದರು.

ಬಮೂಲ್ ನಿರ್ದೇಶಕ ಮುನಿರಾಜು, ಮಾತನಾಡಿ, ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ದರ ಗಮನದಲ್ಲಿಟ್ಟುಕೊಂಡು, ತಮ್ಮ ಹಾಲಿನ ಪ್ರೋತ್ಸಾಹ ಧನ ಏರಿಸಬೇಕು. ಒಂದು ಲೀಟರ್ ಹಾಲು ಉತ್ಪಾದನೆಗೆ ಸುಮಾರು ೫೦ ರುಗಳವರೆಗೆ ಖರ್ಚು ಬರುತ್ತದೆ. ಆದರೆ ರೈತರಿಗೆ ಸಿಗುವ ಬೆಲೆ ಅದಕ್ಕಿಂತ ಬಹಳ ಕಡಿಮೆ. ಜಿಲ್ಲಾವಾರು ಹಾಲು ಒಕ್ಕೂಟಗಳು ನೀಡುವ ಖರೀದಿ ದರದಲ್ಲಿ ವ್ಯತ್ಯಾಸವಿದೆ ಎಂದರು.

ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ನೌಕರರ ಸಂಘದ ಅಧ್ಯಕ್ಷ ಚನ್ನಕೇಶವ, ಮುಖಂಡರಾದ ಕೋಡುಗುರ್ಕಿ ನಾಗರಾಜು, ಸುರೇಶ್, ಇಲತೊರೆ ವಿಜಯ್‌ಕುಮಾರ್, ಮಲ್ಲೇಪುರ ಮಂಜುನಾಥ್, ಚಿನ್ನಕೆಂಪನಹಳ್ಳಿ ಆನಂದ್, ಸಾವಕನಹಳ್ಳಿ ವಿಮಲ, ಶ್ವೇತ ಮತ್ತಿತರರಿದ್ದರು.

೦೭ ದೇವನಹಳ್ಳಿ ಚಿತ್ರಸುದ್ದಿ: ೦೨

ದೇವನಹಳ್ಳಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು ವಿವಿಧ ಬೇಡಿಕೆ ಈಡೇರಿಸುವಂತೆ ಜಿಲ್ಲಾಡಳಿತ ಕಚೇರಿಯಲ್ಲಿ ತಹಸೀಲ್ದಾರ್ ರಾಜೀವ್ ಸುಲೋಚನಾ ಅವರಿಗೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀರಂಗಪಟ್ಟಣ: ಕಾವೇರಿ ನದಿಗಿಳಿದು ರೈತ ಮುಖಂಡರಿಂದ ಪ್ರತಿಭಟನೆ
ಬೈಕ್‌ಗಳ ನಡುವೆ ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ