- ಸುರಪುರ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
ಕೆಬಿಜೆಎನ್‌ಎಲ್ ಭೀಮರಾಯನಗುಡಿ (ಶಹಾಪುರ) ಸಿಎಒ ಗುತ್ತಿಗೆದಾರರಿಂದ ಪರ್ಸೆಂಟ್ ವಸೂಲಿ ಮಾಡುತ್ತಿರುವವರ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟಿಸಿ ಕಂದಾಯ ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಕೆಬಿಜೆಎನ್‌ಎಲ್ ಅಧಿಕಾರಿ ಮಹೇಶ ಮಾಲಗತ್ತಿ ಅವರು ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರಿಂದ ಪರ್ಸೆಂಟ್ ವಸೂಲಿ ಮಾಡುತ್ತಿದ್ದಾರೆ. ಕಾರ್ಯಾಲಯದ ಯಾವುದೇ ಕೆಲಸಕ್ಕೆ ಹಣ ಕೊಡಲೇಬೇಕು. ಇಲ್ಲದಿದ್ದರೆ ಕೆಲಸ ಮಾಡುವುದಿಲ್ಲ. ನನಗೆ ಶಾಸಕರು, ಸಚಿವರು, ಮುಖಂಡರ ಸಹಕಾರವಿದೆ. ಈ ಮೂಲಕ ಗುತ್ತೆದಾರರನ್ನು ಶೋಷಿಸುತ್ತಿದ್ದಾರೆ ಎಂದು ದೂರಿದರು.ಭೀಮರಾಯನಗುಡಿಯಲ್ಲಿಯೇ ಕಾಡಾ, ಕೆಬಿಜೆಎನ್‌ಎಲ್ ನಲ್ಲಿಯೇ ರಾಜಕೀಯ ಬಳಸಿಕೊಂಡು ಸುಮಾರು ವರ್ಷಗಳಿಂದ ಇಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಶಹಾಪುರ ಕೆಬಿಜೆಎನ್‌ಎಲ್ ಮತ್ತು ಕಾಡಾ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಿದರೆ ವಸೂಲಿಯ ಅಸಲಿ ತಿಳಿಯುತ್ತಿದೆ. ತನಿಖೆ ಮಾಡಲು ಆಗದಿದ್ದರೆ ರಸ್ತೆ ರುಖೋ ನಡೆಯುತ್ತಿದೆ ಎಂದು ಎಚ್ಚರಿಸಿದರು.
-----
18ವೈಡಿಆರ್5: ಸುರಪುರ ನಗರದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ವತಿಯಿಂದ ಕಂದಾಯ ಅಧಿಕಾರಿಗೆ ಮನವಿ ಸಲ್ಲಿಸಿದರು.