ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ
ನಗರ ಹೊರವಲಯ ಜಿಲ್ಲಾಡಳಿತ ಭವನದ ಮುಂದೆ ನಗರಪಾಲಿಕೆ, ನಗರಸಭೆ ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಮನವಿ ಸಲ್ಲಿಕೆ ಮತ್ತು ಸಾಂಕೇತಿಕ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಫಾಯಿ ಕರ್ಮಚಾರಿಗಳ ಜಾಗೃತಿ ಸಮಿತಿಯಲ್ಲಿ ಪೌರಕಾರ್ಮಿಕರ ಪ್ರತಿನಿಧಿಯಾಗಿ ಸುರೇಶ್‌ಬಾಬು ಅವರನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹ ಮಾಡುತ್ತೇವೆ. ಒಟ್ಟಾರೆ ಜಿಲ್ಲೆಯಲ್ಲಿರುವ ಸ್ಥಳಿಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಾದ ಚಾಲಕರು, ಲೋಡರ್ಸ್, ವಾಲ್‌ಮನ್ಸ್ ಸೇರಿ ಎಲ್ಲರನ್ನೂ ಸರ್ಕಾರ ನೇರ ಪಾವತಿಗೆ ತರಬೇಕು. ಹೊರಗುತ್ತಿಗೆ ಪದ್ಧತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಹೊರಗುತ್ತಿಗೆ ನೌಕರರಾಗಿ ಕನಿಷ್ಠ ವೇತನ ಪಡೆದು ಕರ್ತವ್ಯ ನಿರ್ವಹಿಸುತ್ತಿರುವವರು ಒಟ್ಟು 16 ಸಾವಿರ ಕಾರ್ಮಿಕರಿದ್ದು, ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಜನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರು ಮತ್ತು ಸ್ವಚ್ಛತೆ ವಿಭಾಗದಲ್ಲಿ ನಿರ್ವಹಿಸುತ್ತಿದ್ದಾರೆ. ಇವರನ್ನು ಕೂಡಲೇ ಗುತ್ತಿಗೆ ಪದ್ಧತಿಯಿಂದ ಕೈಬಿಟ್ಟು ಪೌರಕಾರ್ಮಿಕರ ರೀತಿ ನೇರವೇತನ ಪಾವತಿಗೆ ಒಳಪಡಿಸಬೇಕು ಮತ್ತು ನಮ್ಮ ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಒತ್ತಾಯಿಸಿದರು.ಹೊರಗುತ್ತಿಗೆ ನೌಕರರ ಸಂಘಟನೆ ಜಿಲ್ಲಾಧ್ಯಕ್ಷ ಎಸ್. ಸುರೇಶ್‌ಬಾಬು, ಉಪಾಧ್ಯಕ್ಷ ಎಸ್.ಡಿ, ಲಕ್ಷ್ಮೀಪತಿ, ಪದಾಧಿಕಾರಿಗಳಾದ ಜಿ. ಆನಂದ್, ಗಂಗಯ್ಯ, ಆಲಿಸಾಬ್, ಪಿ.ಆರ್. ಶ್ರೀನಿವಾಸ್, ಜಿ.ನಾಗರಾಜ್, ಶಿವಕುಮಾರ್ ಬಿ.ಎನ್. ಚಾಲಕರಾದ ರಾಜಪ್ಪ, ನಾಗರಾಜ್, ಶಿವಕುಮಾರ್ ಎಂ.ಎನ್, ನರಸಿಂಹಮೂರ್ತಿ, ವೆಂಕಟೇಶಪ್ಪ, ಮಂಜುನಾಥ್, ರವಿಕುಮಾರ್ ಮತ್ತಿತರರು ಇದ್ದರು.
ಜಿಲ್ಲಾಡಳಿತ ಭವನದ ಮುಂದೆ ಕರ್ನಾಟಕ ರಾಜ್ಯ ನಗರಪಾಲಿಕೆ ನಗರಸಭೆ ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು