ನರಗುಂದ: ಕಳೆದ ಎರಡು ತಿಂಗಳಗಳಿಂದ ಬಡವರ ಆಧಾರಕ್ಕೆ ಆಧಾರವಾಗಿರುವ ಸಂಧ್ಯಾಸುರಕ್ಷಾ, ವೃದ್ಧಾಪ್ಯ ವೇತನವನ್ನು ಸರ್ಕಾರ ಬಿಡುಗಡೆ ಮಾಡದಿರುವುದರಿಂದ ತೀವ್ರ ತೊಂದರೆಯಾಗಿದೆ. ಸರ್ಕಾರ ಈ ವೇತನವನ್ನು ಬಿಡುಗಡೆ ಮಾಡಬೇಕೆಂದು ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ವೀರನಗೌಡ್ರ ಮೂತನೂರ ಆಗ್ರಹಿಸಿದರು.
ತಹಸೀಲ್ದಾರ್ ಶ್ರೀಶೈಲ ತಳವಾರ ಮನವಿ ಸ್ವೀಕರಿಸಿದರು. ರುದ್ರಯ್ಯ ಮಠದ, ನಿಂಗಪ್ಪ ಆದಪ್ಪನವರ, ಚೆನ್ನಪ್ಪ ಶಾನವಾಡ, ಭೀಮಪ್ಪ ತಳವಾರ, ನಾಗಪ್ಪ ಬಾರಕೇರ, ಹನುಮಪ್ಪ ನಾಗನೂರ, ಶಾಂತವ್ವ ಹಿರೇಗೌಡ್ರ, ಕಲ್ಲವ್ವ ಬುಳ್ಳನ್ನವರ, ರುದ್ರಪ್ಪ ತಳವಾರ, ಮಲ್ಲವ್ವ ಮಠದ, ಫಕೀರಸಾಬ ನದಾಫ್, ಅಬ್ದುಲಸಾಬ ನದಾಫ್ ಸೇರಿದಂತೆ ಮುಂತಾದವರು ಇದ್ದರು.ಅಂಗನವಾಡಿ ಮಕ್ಕಳಿಗೆ ಬಟ್ಟೆ ದೇಣಿಗೆ
ನರಗುಂದ: ಅಂಗನವಾಡಿ ಕೇಂದ್ರಗಳ ಪ್ರಗತಿಗೆ ಸರ್ಕಾರದ ಜತೆ ದಾನಿಗಳ ಸಹಕಾರ ನೀಡಬೇಕು. ಇದರಿಂದ ಅಂಗನವಾಡಿಗಳ ಇನ್ನಷ್ಟು ಅಭಿವೃದ್ಧಿ ಸಾಧ್ಯ ಎಂದು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ವೆಂಕಪ್ಪ ಗಿರಿತಿಮ್ಮಣ್ಣವರ ತಿಳಿಸಿದರು.ಶುಕ್ರವಾರ ಪಟ್ಟಣದ 119ನೇ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಬಟ್ಟೆ ಕೊಡುಗೆ ನೀಡಿದ ದಾನಿಗಳನ್ನು ಸನ್ಮಾನಿಸಿ ಮಾತನಾಡಿ, ಪಟ್ಟಣದ ಶಿಕ್ಷಕಿ ಸುವರ್ಣ ನಾಗನೂರ ಅವರು ನಮ್ಮ ಅಂಗನವಾಡಿ ಕೇಂದ್ರದ 35 ಮಕ್ಕಳಿಗೆ ಬಟ್ಟೆ ದಾನ ಮಾಡುವ ಮೂಲಕ ಮಕ್ಕಳಲ್ಲಿ ಪ್ರೀತಿ ಕಾಣುತ್ತಿರುವುದು ಹೆಮ್ಮೆ ತಂದಿದೆ ಎಂದರು.ಇದೇ ಸಂದರ್ಭದಲ್ಲಿ ಮಕ್ಕಳಿಗೆ ಬಟ್ಟೆ ಕೊಡುಗೆ ನೀಡಿದ ದಂಪತಿಗಳಾದ ಬಸನಗೌಡ ಚನ್ನವೀರನಗೌಡ್ರ ಹಾಗೂ ಸುವರ್ಣ ನಾಗನೂರ ಅವರನ್ನು ಸನ್ಮಾನಿಸಲಾಯಿತು. ಶಕುಂತಲಾ ಗಣಿ, ಲಕ್ಷ್ಮೀ ಗಾಯಕವಾಡ, ಸುಜಾತಾ ನಾಗನೂರ, ಪದ್ಮಾ ಡಾವಣಗೇರಿ, ಸಾವಿತ್ರಿ ಭಜಂತ್ರಿ, ಪಾರ್ವತಿ ಮಾಳಣ್ಣವರ, ಗಿರಿಜಾ ಬೆಳವಟಿಗಿ, ನಾಗಮ್ಮ ಕಾಲವಾಡಮಠ, ಅಂಗನವಾಡಿ ಮಕ್ಕಳು ಮುಂತಾದವರು ಇದ್ದರು.