ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗರಾಜು ರಾಜಿನಾಮೆಗೆ ಆಗ್ರಹ

KannadaprabhaNewsNetwork |  
Published : Aug 05, 2025, 12:30 AM IST
ಪೊಟೋ೪ಸಿಪಿಟಿ೧: ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರು ಹಾಗೂ ಜೆಡಿಎಸ್ ಮುಖಂಡರು ಇದ್ದರು. | Kannada Prabha

ಸಾರಾಂಶ

ಚನ್ನಪಟ್ಟಣ: ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಗೋವಿಂದಹಳ್ಳಿ ನಾಗರಾಜು ರಾಜೀನಾಮೆ ನೀಡಬೇಕು. ಅವರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳುವ ಮುನ್ನ ಅವರಾಗಿ ಅಧ್ಯಕ್ಷ ಸ್ಥಾನವನ್ನು ತೊರೆಯಬೇಕು ಎಂದು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಇಗ್ಗಲೂರು ಡಿಎಂಕೆ ಕುಮಾರ್ ಒತ್ತಾಯಿಸಿದರು.

ಚನ್ನಪಟ್ಟಣ: ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಗೋವಿಂದಹಳ್ಳಿ ನಾಗರಾಜು ರಾಜೀನಾಮೆ ನೀಡಬೇಕು. ಅವರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳುವ ಮುನ್ನ ಅವರಾಗಿ ಅಧ್ಯಕ್ಷ ಸ್ಥಾನವನ್ನು ತೊರೆಯಬೇಕು ಎಂದು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಇಗ್ಗಲೂರು ಡಿಎಂಕೆ ಕುಮಾರ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಗೋವಿಂದಹಳ್ಳಿ ನಾಗರಾಜು ಎರಡು ಬಾರಿ ಅಧ್ಯಕ್ಷಗಿರಿ ಅನುಭವಿಸಿದ್ದಾರೆ. ಪಕ್ಷದ ಎರಡನೇ ಸಾಲಿನ ಮುಖಂಡರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಅಗ್ರಹಿಸಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರ ಚುನಾವಣೆ ವೇಳೆ ಅಧಿಕಾರ ಹಂಚಿಕೆ ಕುರಿತಂತೆ ಮಾತುಕತೆಯಾಗಿತ್ತು. ತಲಾ ಒಂದು ವರ್ಷದಂತೆ ೫ ಜನರಿಗೆ ಅಧ್ಯಕ್ಷ ಸ್ಥಾನ ಹಾಗೂ ೫ಜನರಿಗೆ ಉಪಾಧ್ಯಕ್ಷ ಸ್ಥಾನ ನೀಡುವಂತೆ ತೀರ್ಮಾನವಾಗಿತ್ತು. ಆದರೆ, ಅಧ್ಯಕ್ಷ ಸ್ಥಾನಕ್ಕೆ ಏರಿ ಎರಡು ವರ್ಷವಾದರೂ ಸಹ ಗೋವಿಂದಹಳ್ಳಿ ನಾಗರಾಜು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಗೊಂದಲವಿದ್ದು, ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧ್ಯಕ್ಷರು ಮುಂದಾಗಬೇಕು ಎಂದರು.

ಅಧ್ಯಕ್ಷರಾದ ನಂತರ ಗೋವಿಂಹಳ್ಳಿ ನಾಗರಾಜು, ಕಂಡಕಂಡಲ್ಲಿ ತಮಗೆ ನಮ್ಮ ಪಕ್ಷದ ನಿರ್ದೇಶಕರೇ ಸಹಕಾರ ನೀಡುತ್ತಿಲ್ಲ. ನಾನು ಬೇರೆಯವರ ಬೆಂಬಲದಲ್ಲಿ ಅಧ್ಯಕ್ಷನಾಗಿದ್ದೇನೆ. ಎಂಬುದಾಗಿ ಪಕ್ಷದ ನಿರ್ದೇಶಕರ ವಿರುದ್ಧವೇ ಮಾತನಾಡಿರುವುದು ಸಮಂಜಸವಲ್ಲ. ಅಧಿಕಾರ ಅನುಭವಿಸಿದವರೇ ಅಧಿಕಾರದಲ್ಲಿ ಮುಂದುವರಿದರೆ ಹೇಗೆ ಎಂದು ಪ್ರಶ್ನಿಸಿದರು.

ಟಿಎಪಿಸಿಎಂಎಸ್ ನಲ್ಲಿ ಇರುವ ಸಮನ್ವಯತೆ ಪಿಎಲ್‌ಡಿ ಬ್ಯಾಂಕ್ ವಿಚಾರದಲ್ಲಿ ಇಲ್ಲದಿರುವುದು ಕೂಡ ಗೊಂದಲಕ್ಕೆ ಕಾರಣವಾಗಿದೆ. ನಿಖಿಲ್ ಕುಮಾರಸ್ವಾಮಿ ಅವರು ರಾಜೀನಾಮೆ ನೀಡುವಂತೆ ಗೋವಿಂದಹಳ್ಳಿ ನಾಗರಾಜು ಅವರಿಗೆ ಸ್ಪಷ್ಟವಾಗಿ ನಿರ್ದೇಶನ ನೀಡಿದ್ದರೂ, ಯಾರ ಮಾತನ್ನೂ ಗಣನೆಗೆ ತೆಗೆದುಕೊಳ್ಳದೇ ಇರುವುದನ್ನು ನೋಡಿದರೆ, ಅವರದು ಎಂತಹ ಪಕ್ಷ ನಿಷ್ಠೆ ಎಂದರು.

ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಮಾಗನೂರು ಗಂಗರಾಜು ಮಾತನಾಡಿ, ತಾಲೂಕಿನಲ್ಲಿ ಪಕ್ಷದ ಅಸ್ತಿತ್ವಕ್ಕಾಗಿ ಹಾಗೂ ಬೆಳವಣಿಗೆಗಾಗಿ ಅವಿರತವಾಗಿ ದುಡಿದ ಅಸಂಖ್ಯಾತ ಕಾರ್ಯಕರ್ತರಿಗೆ ನಿರಾಶೆ ಹಾಗೂ ಭ್ರಮನಿರಸನ ಆಗಬಾರದು ಎಂಬ ದೃಷ್ಟಿಯಿಂದ ಈ ಸಂಬಂಧ ಧ್ವನಿ ಎತ್ತಿದ್ದೇವೆ. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಗೋವಿಂದಹಳ್ಳಿ ನಾಗರಾಜು ತತ್‌ಕ್ಷಣವೇ ರಾಜೀನಾಮೆ ನೀಡಬೇಕು. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದಲ್ಲಿ ನಾವು ಏನು ತೀರ್ಮಾನ ತೆಗೆದುಕೊಳ್ಳುತ್ತೀವೋ ನಮಗೆ ಗೊತ್ತಿಲ್ಲ ಎಂದು ತಿಳಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಮೈಲನಾಯಕನ ಹೊಸಹಳ್ಳಿ ಸಿದ್ದಪ್ಪ ಮಾತನಾಡಿ, ಅಧಿಕಾರ ಹಂಚಿಕೆಯ ತಾರತಮ್ಯ ನಿವಾರಣೆ ಮಾಡದಿದ್ದಲ್ಲಿ ತಾಲೂಕಿನಲ್ಲಿ ಜೆಡಿಎಸ್ ಸ್ಥಿತಿ ಅಧೋಗತಿಯತ್ತ ಸಾಗುತ್ತದೆ. ಈಗಾಗಲೇ ಅಧಿಕಾರ ಅನುಭವಿಸಿದ ಪಕ್ಷದ ಮುಖಂಡರು ಸ್ವಯಂ ಪ್ರೇರಿತರಾಗಿ ತಮ್ಮ ಸ್ಥಾನಗಳನ್ನು ಕಿರಿಯರಿಗೆ ಬಿಟ್ಟುಕೊಡಬೇಕು ಎಂದು ಮನವಿ ಮಾಡಿದರು.

ಪಿಎಲ್ ಡಿ ಬ್ಯಾಂಕ್ ನಿರ್ದೇಶಕರಾದ ಮೋಹನ್, ಸಿದ್ದರಾಜು, ಬೈರನರಸಿಂಹಯ್ಯ, ಎ.ವಿ.ವೆಂಕಟೇಶ್, ಮಹಿಳಾ ಜೆಡಿಎಸ್ ಜಿಲ್ಲಾಧ್ಯಕ್ಷೆ ರೇಖಾ ಉಮಾಶಂಕಕರ್, ಮುಖಂಡರಾದ ಇ.ತಿ.ಶ್ರೀನಿವಾಸ್, ಎಲೆಕೇರಿ ನಂದೀಶ್, ವಕೀಲ ಕದರಮಂಗಲ ರವಿಕುಮಾರ್ ಇತರರಿದ್ದರು.

ಪೊಟೋ೪ಸಿಪಿಟಿ೧: ಚನ್ನಪಟ್ಟಣದಲ್ಲಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಇಗ್ಗಲೂರು ಡಿಎಂಕೆ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ