ಕನ್ನಡಪ್ರಭ ವಾರ್ತೆ ಹನೂರು
ಮುಂಗಾರು ಮಳೆ ತೀರ ವಿರಳ ಸಂಕಷ್ಟದಲ್ಲಿರುವ ರೈತನಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನದಿಯಿಂದ ರಾಮನಗುಡ್ಡ ಕೆರೆಗೆ ನೀರು ಹರಿಸಲು ತಾತ್ಕಾಲಿಕ ಯೋಜನೆಯನ್ನು ರೂಪಿಸಲಾಗಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮನಗುಡ್ಡ ಕೆರೆ ಆವರಣದಲ್ಲಿ ಕಾವೇರಿ ನದಿಯಿಂದ ಪೈಪ್ ಲೈನ್ ಮೂಲಕ ಕೆರೆಗೆ ನೀರು ಬರುವ ಮಾರ್ಗ ರಾಡಿ ಗಿಡಗಂಟೆಗಳು ತೆಗೆದು ನೀರಿನ ಅರಿವು ಕೆರೆಗೆ ಹರಿಸಲು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ರೈತರ ಜಮೀನುಗಳಿಗೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ರಾಮನ ಗುಡ್ಡ ಕೆರೆಗೆ ನೀರಿನ ಮಾರ್ಗ ಇರುವ ಪೈಪ್‌ಲೈನ್ ಇರುವ ಸ್ಥಳದಿಂದ ಕಾಲುವೆ ತೆಗೆದು ಯಂತ್ರಗಳ ಮೂಲಕ ತಾತ್ಕಾಲಿಕವಾಗಿ ನದಿಯಿಂದ ನೀರು ಹರಿಸಿ ಗ್ರಾಮಗಳ ಮೂಲಕ ರಾಮನಗುಡ್ಡ ಕೆರೆಗೆ ನೀರು ತರುವ ಯೋಜನೆಗೆ ಚಾಲನೆ ನೀಡಲಾಗಿದೆ. ಮಲೆ ಮಾದೇಶ್ವರ ಆಶೀರ್ವಾದದಿಂದ ಈ ಮಹತ್ವ ಕಾರ್ಯಕ್ಕೆ ತಾತ್ಕಾಲಿಕ ಪೂಜೆ ಸಲ್ಲಿಸಲಾಗಿದ್ದು, ನೀರಿನ ಅಭಾವದಿಂದ ಸಂಕಷ್ಟದಿಂದ ಬಳಲುತ್ತಿರುವ ರೈತನಿಗೆ ಹಾಗೂ ಮುಂಗಾರು ತೀರ ವಿರಳ ಹೀಗಾಗಿ ಬರದಿಂದ ತತ್ತರಿಸಿರುವ ಜನತೆಗೆ ಈ ಭಾಗದ ರೈತರಿಗೆ ಡೆಲಿವರಿ ಪೈಪ್‌ಲೈನ್ ಸ್ಥಳದಿಂದ ಇಲ್ಲಿಯವರೆಗೆ ತಾತ್ಕಾಲಿಕವಾಗಿ ನೀರಿನ ಮಾರ್ಗ ಕಾಲುವೆ ತೆಗೆದು ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರುರಾಮನ ಗುಡ್ಡ ಕೆರೆ ನಿರ್ಮಾಣ ಆದ ದಿನದಿಂದಲೂ ನೀರಿನ ಮಾರ್ಗಗಳನ್ನು ದುರಸ್ತಿಪಡಿಸಿ ನೀರು ಹರಿಸದೆ ಇರುವುದರಿಂದ ತಾತ್ಕಾಲಿಕ ನೀರಿನ ಮಾರ್ಗವನ್ನು ದುರಸ್ತಿ ಪಡಿಸುವ ವೇಳೆ ರೈತರು ಸ್ಥಳದಲ್ಲಿದ್ದು ಯಂತ್ರದ ಮೂಲಕ ನಡೆಸುವ ಕೆಲಸ ಕಾರ್ಯಗಳಿಗೆ ರೈತರು ಸಂಪೂರ್ಣ ಸಹಕಾರ ನೀಡಬೇಕು ಎಂದರು. ಒಂದೆಡೆ ನೀರಿನ ಮೂಲ ಕಾಲುವೆ ದುರಸ್ತಿ ಕಾರ್ಯ ನಡೆಯುತ್ತಿದೆ. ಜೊತೆಗೆ ರಾಮನಗುಡ್ಡ ಕೆರೆ ಸುತ್ತಲಿನ ಪ್ರದೇಶ ಒತ್ತುವರಿಯಾಗಿರುವುದನ್ನು ಪರಿಶೀಲಿಸಿ ನೀರಾವರಿ ಅಧಿಕಾರಿಗಳು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೆರೆಗೆ ನೀರು ಬರುವಷ್ಟರಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಕಾವೇರಿ ಕುಡಿಯುವ ನೀರು ಸರಬರಾಜು ಇಲಾಖೆ ಎ.ಇ. ಇ ಕರುಣಮಯಿ ,ಮುಖಂಡರಾದ ರಾಜು ನಾಯ್ಡು ,ಗುರುಮಲ್ಲಪ್ಪ, ವಿಜಯ್ ಕುಮಾರ್, ರೈತ ಮುಖಂಡರಾದ ಚಂಗಡಿ ಕರಿಯಪ್ಪ, ಮಾದಪ್ಪ ಹಾಗೂ ಅಮೋಘ ರಾವ್, ಮಣಿಗೌಂಡರ್, ಹನೂರು, ರಾಮನಗುಡ್ಡ, ,ಚಿಂಚಳ್ಳಿ, ರಾಯರು ದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತ ಮುಖಂಡರು ಉಪಸಿತರಿದ್ದರು.