ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ
ಕರ್ನಾಟಕದಲ್ಲಿ ಶೇ.೮೫ರಷ್ಟು ಸಣ್ಣ ಹಿಡುವಳಿ ಹೊಂದಿದ ರೈತರಿದ್ದು, ಎಲ್ಲ ರಾಜಕೀಯ ಪಕ್ಷಗಳು ರೈತಪರ ಯೋಜನೆ ಜಾರಿಗೆ ತರುತ್ತೇವೆ ಎಂದು ಹೇಳುತ್ತಿವೆ. ಆದರೆ ಕಳೆದ ೧೫ ತಿಂಗಳಲ್ಲಿ ರಾಜ್ಯದಲ್ಲಿ ೧೧೮೫ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆತ್ಮಹತ್ಯೆ ಏಕೆ ಆಗುತ್ತಿವೆ ಎಂಬ ಬಗ್ಗೆ ತಿಳಿಯುತ್ತಿಲ್ಲ, ಈ ಕುರಿತು ಚಿಂತಿಸಬೇಕು ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಹೇಳಿದರುಶಿರಾಳಕೊಪ್ಪ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಗಳು ಶೂನ್ಯ ಬಡ್ಡಿ ದರದಲ್ಲಿ ೩ ಲಕ್ಷ ಸಾಲ ಕೊಡುತ್ತಿವೆ. ಇವೆಲ್ಲ ಇದ್ದರೂ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ. ಅಧಿಕಾರದಲ್ಲಿ ಇರುವ ಜವಾಬ್ದಾರಿಯುತ ಸರ್ಕಾರ ಪರಿಹಾರ ಕೊಡುವುದು ನಮ್ಮ ಕೆಲಸ ಎಂದು ಹೇಳುತ್ತವೆ. ಪರಿಹಾರ ಕೊಡುವುದನ್ನು ಅಧಿಕಾರಿ ಗಳು ಮಾಡುತ್ತಾರೆ. ಆದರೂ ಸಹ ರೈತರ ಆತ್ಮಹತ್ಯೆ ಏಕೆ ಆಗುತ್ತಿವೆ ಎಂಬ ಬಗ್ಗೆ ಸರ್ಕಾರ ಚಿಂತಿಸುತ್ತಿಲ್ಲ. ಎಲ್ಲಿ ರೈತ ದಾರಿ ತಪ್ಪುತ್ತಿದ್ದಾನೆ ಎಂಬ ಬಗ್ಗೆ ಅಧ್ಯಯನ ಆಗುತ್ತಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ೬೯ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿ ಪ್ರಶ್ನೆ ಏನೆಂದರೆ ಎಷ್ಟೋ ಮನೆಗಳಿಗೆ ಭೇಟಿ ಕೊಟ್ಟಾಗ ಅವರಿಗೆ ಹಣ ಬಂದಿದೆ ಎಂಬುದೇ ಮಾಹಿತಿ ಇಲ್ಲ. ರೈತರಿಗೆ ಯಾರನ್ನು ಸಂಪಕಿರ್ಸಬೇಕು ಎಲ್ಲಿ ಹಣ ಪಡೆಬೇಕು ಎಂಬ ಸಂಗತಿಯೂ ಗೊತ್ತಿಲ್ಲದಿರುವ ಸಂಗತಿ ಬೆಳಕಿಗೆ ಬಂದಿದೆ ಎಂದರು.
ಗ್ರಾಮ ಲೆಕ್ಕಾಧಿಕಾರಿಯನ್ನು ಕೇಳಿದಾಗ ಅವನು ನನ್ನ ಕೆಲಸ ಮಾಡಿದ್ದೇನೆ ಎಂದು ಹೇಳುತ್ತಾನೆ. ಈ ರೀತಿ ಇದ್ದಾಗ ಕೆಡಿಪಿ ಸಭೆ ಏಕೆ ಮಾಡಬೇಕು ಎಂದು ಪ್ರಶ್ನಿಸಿದ ಅವರು, ಯಾವುದೇ ರಾಜಕೀಯ ಪಕ್ಷದವರು ರಾಜಕೀಯರಹಿತವಾಗಿ ಚಿಂತಿಸಬೇಕು.ಇನ್ನು, ರಾಜ್ಯ ಸರ್ಕಾರ ತಾನು ಮಾಡುವ ಕೆಲಸವನ್ನು ಮಾಡದೇ ಕೇವಲ ಕೇಂದ್ರದ ಕಡೆ ಬೊಟ್ಟು ಮಾಡುವುದು ಎಷ್ಟು ಸರಿ? ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರಿಗೆ ಇದು ಶೋಭೆ ತರುವುದಿಲ್ಲ ಎಂದರು.
ರೈತ ಮಕ್ಕಳಿಗೆ ಅನಕೂಲವಾಗಲಿ ಎಂದು ಮಾಡಲಾದ ರೈತ ವಿದ್ಯಾನಿಧಿಯನ್ನು ನಿಲ್ಲಿಸುವ ಅವಶ್ಯಕತೆ ಏನಿತ್ತು. ರೈತ ಹಲವಾರು ಸಮಸ್ಯೆಗಳಿಗೆ ಸಿಕ್ಕಿಹಾಕಿಕೊಂಡು ಮೃತ ಪಟ್ಟಾಗ ರೈತ ಮಕ್ಕಳಿಗೆ ಅನಕೂಲವಾಗುವಂತಹ ಕಿಸಾನ್ ಸಮ್ಮಾನ್ ನಿಧಿಯಂತಹ ಯೋಜನೆ ಏಕೆ ನಿಲ್ಲಿಸಿದರು ಎಂಬುದನ್ನು ತಿಳಿಸಬೇಕು. ಬಿಜೆಪಿ ಅವರು ಉತ್ತಮ ಕೆಲಸ ಮಾಡಿದ್ದರು. ಆದರೆ ಅವರು ಮಾಡಿದ್ದಾರೆ ಎಂದು ರೈತಪರ ಯೋಜನೆ ಅವುಗಳನ್ನು ನಿಲ್ಲಿಸುವ ಕೆಲಸವನ್ನು ಸರ್ಕಾರ ನಿಲ್ಲಿಸಬೇಕು ಎಂದರು.ಗೋಷ್ಠಿಯಲ್ಲಿ ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷ ಯೋಗಿಶ್, ನಗರ ಬಿಜೆಪಿ ಅಧ್ಯಕ್ಷ ಚೆನ್ನವೀರಶೆಟ್ಟಿ ಇದ್ದರು. ರೈತ ವಿರೋಧಿ ಸರ್ಕಾರ: ಸಿದ್ದಲಿಂಗಪ್ಪ
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹಾಲು ಉತ್ಪಾದಕರಿಗೆ ಕೊಡಬೇಕಾದ ಸಹಾಯ ಹಣ ವನ್ನು ಸಾವಿರದ ೮೦ ಕೋಟಿ ರು.ಗೂ ಹೆಚ್ಚು ಹಣ ಬಾಕಿ ಇದೆ. ರೈತರು ಬಿತ್ತುವ ಬೀಜದ ದರ ಕಡಿಮೆ ಮಾಡಬೇಕು ಎಂದು ಪ್ರತಿಭಟನೆ ಮಾಡಿದೆವು, ಎಲ್ಲ ವಿಷಯಗಳಲ್ಲೂ ರೈತ ವಿರೋಧಿ ಸರ್ಕಾರಗಳು ತಕ್ಷಣ ರೈತರ ಹಿತ ಕಾಯಬೇಕು. ಪೆಟ್ರೋಲ್ ಡೀಸೆಲ್ ಬೆಲೆ ಸೇರಿದಂತೆ ಎಲ್ಲ ಬೆಲೆಗಳನ್ನು ಇಳಿಸಬೇಕು ಎಂದರು.