ಕನ್ನಡಪ್ರಭ ವಾರ್ತೆ ದೇವದುರ್ಗ
ಪಟ್ಟಣದ ಪ್ರವಾಸಿ ಮಂದಿರದಿಂದ ಡಾ.ಅಂಬೇಡ್ಕರ್ ವೃತ್ತದಿಂದ ರಸ್ತೆ ಮಾರ್ಗವಾಗಿ ಮಿನಿವಿಧಾನ ಸೌಧ ಆವರಣದಲ್ಲಿ ಪ್ರತಿಭಟನಾ ಧರಣಿ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕಿ ಕರೆಮ್ಮ ಜಿ.ನಾಯಕ, ರಾಜ್ಯದಲ್ಲಿ ಅಧಿಕಾರಿಗಳ ಮೇಲೆ ಸರ್ಕಾರದ ಹಿಡಿತ ತಪ್ಪಿದ ಪರಿಣಾಮ ಅನೇಕ ಅವಾಂತರಗಳು, ಅವ್ಯವಹಾರಗಳು ನಡೆಯುತ್ತಿವೆ.
ಗೌರವಾನ್ವಿತ ರಾಜಕಾರಣಿ, ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಯವರ ಕುರಿತು ಹಗುರವಾಗಿ ಮಾತನಾಡಿ, ಅವಮಾನಿಸಿರುವ ಎಡಿಜಿಪಿ ಚಂದ್ರಶೇಖರ ಮೇಲೆ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮುಖಂಡರಾದ ಶರಣಪ್ಪ ಬಳೆ, ಸಿದ್ದನಗೌಡ ಮೂಡಲಗುಂಡ, ಶಾಲಂ ಉದ್ಧಾರ, ಸಿದ್ದಣ್ಣ ತಾತಾ ಮುಂಡರಗಿ, ರಾಜಾ ರಂಗಪ್ಪ ನಾಯಕ, ದೊಡ್ಡರಂಗಣ್ಣಗೌಡ, ಖಾಜೇಗೌಡ ಗಬ್ಬೂರ, ಶಿವನಗೌಡ ಕಕ್ಕಲದೊಡ್ಡಿ, ಹನುಮಂತ್ರಾಯ ನಾಯಕ ಚಿಂತಲಕುಂಟಿ, ದಾವೂದ್ ಆವಂಟಿ, ರೇಣುಕಾ ಮಯೂರ ಸ್ವಾಮಿ, ಡಿ.ನಿರ್ಮಲಾನಾಯಕ ಇತರರು ಇದ್ದರು.