ಬೆಳಗಾವಿ ಪಾಲಿಕೆಯ ನಾಡದ್ರೋಹಿ ಸದಸ್ಯರ ಸದಸ್ಯತ್ವ ರದ್ದುಪಡಿಸಲು ಒತ್ತಾಯ

KannadaprabhaNewsNetwork |  
Published : Jul 26, 2025, 01:30 AM IST
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಿಡಿಒ ಗೀತಾ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಇತ್ತೀಚೆಗೆ ಬೆಳಗಾವಿ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಎಂಇಎಸ್ ಬೆಂಬಲಿತ ಸದಸ್ಯ ರವಿ ಸಾಳುಂಕೆ ಸೇರಿದಂತೆ ಮೂವರು ಪಾಲಿಕೆ ಸದಸ್ಯರು ಕನ್ನಡ ಕಡ್ಡಾಯ ಆದೇಶ ಹಿಂಪಡೆದು ಮರಾಠಿ ಭಾಷೆಯಲ್ಲಿಯೇ ಎಲ್ಲ ದಾಖಲೆಗಳನ್ನು ವ್ಯವಹರಿಸುವಂತೆ ಆಗ್ರಹಿಸಿದರು. ಇದು ಸರಿಯಲ್ಲ.

ರಾಣಿಬೆನ್ನೂರು: ಬೆಳಗಾವಿ ಪಾಲಿಕೆಯ ನಾಡದ್ರೋಹಿ ಸದಸ್ಯರ ಸದಸ್ಯತ್ವ ರದ್ದುಪಡಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ಕಾರ್ಯಕರ್ತರು ಶುಕ್ರವಾರ ತಾಲೂಕಿನ ನದಿಹರಳಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಗೀತಾ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಕರವೇ ತಾಲೂಕು ಅಧ್ಯಕ್ಷ ಕೊಟ್ರೇಶ ಗುತ್ತೂರ ಮಾತನಾಡಿ, ಇತ್ತೀಚೆಗೆ ಬೆಳಗಾವಿ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಎಂಇಎಸ್ ಬೆಂಬಲಿತ ಸದಸ್ಯ ರವಿ ಸಾಳುಂಕೆ ಸೇರಿದಂತೆ ಮೂವರು ಪಾಲಿಕೆ ಸದಸ್ಯರು ಕನ್ನಡ ಕಡ್ಡಾಯ ಆದೇಶ ಹಿಂಪಡೆದು ಮರಾಠಿ ಭಾಷೆಯಲ್ಲಿಯೇ ಎಲ್ಲ ದಾಖಲೆಗಳನ್ನು ವ್ಯವಹರಿಸುವಂತೆ ಆಗ್ರಹಿಸಿದರು. ಇದಕ್ಕೆ ಆಡಳಿತ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಆಗ ಸದಸ್ಯರ ನಡುವೆ ವಾದ ವಿವಾದ ಹೆಚ್ಚಾಗಿ ಸಭೆಯನ್ನು ಮುಂದೂಡಲಾಯಿತು. ನಂತರ ಸಭೆ ಪ್ರಾರಂಭವಾದಾಗ ಎಂಇಎಸ್ ಬೆಂಬಲಿತ ಸದಸ್ಯರು ಹಾಜರಾಗದೆ ಹೊರಹೋದರು. ಆದ್ದರಿಂದ ಅವರ ಸದಸ್ಯತ್ವ ರದ್ದುಪಡಿಸಿ ಗಡಿಪಾರು ಮಾಡಬೇಕು. ಈ ರೀತಿಯ ಘಟನೆಗಳು ಮರುಕಳಿಸಿದರೆ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಬಿ.ಪಿ. ಚಂದ್ರಶೇಖರ, ಮಹಾಂತೇಶ ಮೆಡ್ಲೇರಿ, ಮಂಜು ಬೇಡರ, ತೇಜಸ ಬೇಡರ, ಸುಧೀಂದ್ರಗೌಡ ಕೊಟಗಿಗೌಡ್ರ, ಬಸನಗೌಡ ಚನ್ನಗೌಡ್ರ, ಮಂಜಪ್ಪ ಬಜಾರಿ, ರಾಜಪ್ಪ ಪೂಜಾರ, ಮುರುಡೇಶ, ನಾಗರಾಜ, ಮಂಜು ಮತ್ತಿತರರಿದ್ದರು.ಹಣಕಾಸಿನ ವ್ಯವಹಾರ: ವ್ಯಕ್ತಿ ಕೊಲೆ

ರಾಣಿಬೆನ್ನೂರು: ಹಣಕಾಸಿನ ವ್ಯವಹಾರ ಕುರಿತು ವ್ಯಕ್ತಿಯೊಬ್ಬನನ್ನು ಹಾಡಹಗಲೇ ಕೊಲೆಗೈದ ಘಟನೆ ಶುಕ್ರವಾರ ತಾಲೂಕಿನ ಚಳಗೇರಿ ಗ್ರಾಮದಲ್ಲಿ ಜರುಗಿದೆ.ತಾಲೂಕಿನ ಕಾಕೋಳ ಗ್ರಾಮದ ದಿಲೀಪ ಉರ್ಫ್‌ ದಿಳ್ಳೆಪ್ಪ ಬೀರಪ್ಪ ಹಿತ್ತಲಮನಿ(30) ಕೊಲೆಯಾದವನು. ಉಮಾ ಸಿದ್ದಲಿಂಗಸ್ವಾಮಿ ಮಠದ, ರಾಜು ಈರಯ್ಯ ಬಿಳಸೂರಮಠ ಹಾಗೂ ಉಮಾ ಅವರ ಇಬ್ಬರು ಮಕ್ಕಳು ಆರೋಪಿತರು. ಮೃತ ದಿಲೀಪನು ಆರೋಪಿ ಉಮಾ ಜತೆ ಹಣಕಾಸಿನ ವ್ಯವಹಾರ ಮಾಡಿದ್ದ.ಆತ ಹಣ ಕೇಳಲು ಹೋದಾಗ ಆರೋಪಿಗಳು ಅವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ