ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ತಾಲೂಕು ಪಂಚಾಯ್ತಿ ಕಾರ್ಯಾಲಯದ ಬಳಿ ಸೇರಿದ ಮಾರಗೌಡನಹಳ್ಳಿ ಗ್ರಾಮಸ್ಥರು, ಗ್ರಾಪಂ ಸದಸ್ಯರು ಹಾಗೂ ಕರವೇ ಹೋರಾಟಗಾರರು ಒತ್ತುವರಿ ತೆರವಿಗೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿದರು.
ಮಾರಗೌಡನಹಳ್ಳಿ ಗ್ರಾಮದ ಹಳೇ ಊರು ಗ್ರಾಮಠಾಣಾ ಸ್ವತ್ತಿನ ಪೂರ್ವದಲ್ಲಿ ಖಾತೆ ಸಂಖ್ಯೆ ೬೫೪, ೯೩೧, ೯೪೦, ೯೩೯ರ ಮಾಲೀಕರು ತಮ್ಮ ಬಾಬ್ತು ಖಾತೆಗಿಂತ ಹೆಚ್ಚುವರಿ ವಿಸ್ತೀರ್ಣದ ಖಾತೆಯನ್ನು ಸುಳ್ಳಾಗಿ ಸೃಷ್ಟಿಸಿ ಅದರಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಹೆಚ್ಚುವರಿ ಜಾಗದಲ್ಲಿ ಕಲ್ನಾರ್ ಶೀಟ್‌ನ ಚಪ್ಪರ ನಿರ್ಮಿಸಿದ್ದಾರೆ. ಅತಿಕ್ರಮದಾರರನ್ನು ತೆರವುಗೊಳಿಸುವಂತೆ ತಾಪಂ ಇಒ ಆದೇಶಿಸಿದ್ದರೂ ತೆರವುಗೊಳಿಸುತ್ತಿಲ್ಲ ಎಂದು ಕಿಡಿಕಾರಿದರು.ಪ್ರತಿಭಟನೆಯಲ್ಲಿ ಗ್ರಾ.ಪಂ ಅಧ್ಯಕ್ಷ ಎಂ.ಆರ್.ವರದರಾಜು, ಕುಮಾರ್, ಕರವೇ ಜಯರಾಂ, ಶಿವಲಿಂಗೇಗೌಡ, ರಾಮಕೃಷ್ಣ, ಸೌಭಾಗ್ಯ, ಅನಿತಾ, ಶಾಂತಮ್ಮ, ರಜನಿ ಪಾಲ್ಗೊಂಡಿದ್ದರು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಗಳಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ದಾಖಲೆಗಳನ್ನು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಂಜಮಣಿ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಹಲವು ಸದಸ್ಯರು ಮಾತನಾಡಿ, ಮುಂದಿನ ಸಭೆಗೆ ವಿಧಾನ ಪರಿಷತ್ ಸದಸ್ಯರು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರನ್ನು ಕರೆಸಿ ಕೆಲ ಸಮಸ್ಯೆ ಗಮನಕ್ಕೆ ತರುವಂತೆ ಅಧ್ಯಕ್ಷರನ್ನು ಒತ್ತಾಯಿಸಿದರು. ತಾಲೂಕು ಪಂಚಾಯ್ತಿ ಯೋಜನಾಧಿಕಾರಿ ದೀಪು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.