ಪುರಸಭೆ ಸದಸ್ಯತ್ವ ಮುಂದುವರಿಸುವ ಬೇಡಿಕೆ ಅಸಮಂಜಸ

KannadaprabhaNewsNetwork |  
Published : Oct 31, 2025, 02:45 AM IST
ಪೊಟೋ- ಪುರಸಭೆ ಆಡಳಿತ ಮಂಡಳಿಯ ಅವಧಿ ಮುಕ್ತಾಯವನ್ನು ಮುಂದೂಡುವAತೆ ಸದಸ್ಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವದನ್ನು ವಿರೋಧಿಸಿ ಸಾರ್ವಜನಿಕರು ಲಕ್ಷೆö್ಮÃಶ್ವರ ಪುರಸಭೆ ಮುಖ್ಯಾಧಿಕಾರಿ, ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮತ್ತು ನ್ಯಾಯಾಲಯಕ್ಕೆ ಮನವಿ ಅರ್ಪಿಸಿದರು. | Kannada Prabha

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದ ಪುರಸಭೆ ಸದಸ್ಯರ ಅವಧಿ ವಿಸ್ತರಿಸುವಂತೆ ನ್ಯಾಯಾಲಯದ ಮೊರೆ ಹೋಗಿರುವುದು ಯೋಗ್ಯವಾದ ವಿಚಾರವಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಅಧ್ಯಕ್ಷ ಮಹೇಶ ಕಲಘಟಗಿ ಮತ್ತು ಯುವ ಮುಖಂಡ ನಾಗರಾಜ ಚಿಂಚಲಿ ಹೇಳಿದ್ದಾರೆ.

ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ಸದಸ್ಯರ ಅವಧಿ ವಿಸ್ತರಿಸುವಂತೆ ನ್ಯಾಯಾಲಯದ ಮೊರೆ ಹೋಗಿರುವುದು ಯೋಗ್ಯವಾದ ವಿಚಾರವಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಅಧ್ಯಕ್ಷ ಮಹೇಶ ಕಲಘಟಗಿ ಮತ್ತು ಯುವ ಮುಖಂಡ ನಾಗರಾಜ ಚಿಂಚಲಿ ಹೇಳಿದ್ದಾರೆ.

ಪುರಸಭೆ ಆಡಳಿತ ಮಂಡಳಿಯ ಅವಧಿ ಮುಂದೂಡುವಂತೆ ಸದಸ್ಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದನ್ನು ವಿರೋಧಿಸಿ ಸಾರ್ವಜನಿಕರೊಂದಿಗೆ ಗುರುವಾರ ಪುರಸಭೆ ಮುಖ್ಯಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಪಟ್ಟಣದ ಪುರಸಭೆ ಸದಸ್ಯರ ಅವಧಿ ನವೆಂಬರ್‌ ತಿಂಗಳ ಮೊದಲ ವಾರದಲ್ಲಿ ಮುಕ್ತಾಯಗೊಳ್ಳಲಿದ್ದು, ಇದೀಗ ಪ್ರಸಕ್ತ ಅವಧಿಯ ಪುರಸಭೆ ಸದಸ್ಯರ ಅಧಿಕಾರಾವಧಿ ೩೦ ತಿಂಗಳು ಪೂರ್ಣಗೊಳ್ಳದಿರುವ ಹಿನ್ನೆಲೆಯಲ್ಲಿ ಅವಧಿ ಪೂರ್ಣಗೊಳಿಸುವಂತೆ ಸದಸ್ಯರಿಗೆ ಅವಕಾಶ ಮಾಡಿಕೊಡಬೇಕು ಮತ್ತು ಪುರಸಭೆ ಚುನಾವಣೆ ನಡೆಸಬಾರದು ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪುರಸಭೆಯ ಕೆಲವು ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರ ೩೦ ತಿಂಗಳ ಅವಧಿ ಪೂರ್ಣಗೊಂಡಿಲ್ಲವೆಂಬ ನೆಪ ಇಟ್ಟುಕೊಂಡು ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿರುವುದು ಎಷ್ಟು ಸಮಂಜಸ ಎನ್ನುವುದನ್ನು ಸದಸ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸದಸ್ಯರ ಅವಧಿ ನ. ೪, ೨೦೨೦ರಂದು ಪ್ರಾರಂಭಗೊಂಡಿದ್ದು, ಅಲ್ಲಿಂದ ಇಲ್ಲಿಯವರೆಗೂ ಸರ್ಕಾರದಿಂದ ಬರುವ ಗೌರವಧನ ಪಡೆದಿದ್ದಾರೆ. ಅಲ್ಲದೆ ಮೀಸಲಾತಿ ಘೋಷಣೆಯಾಗದ ಸಮಯದಲ್ಲಿಯೂ ಗೌರವಧನ ಪಡೆದುಕೊಂಡಿದ್ದಾರೆ. ಜತೆಗೆ ಪುರಸಭೆ ಸದಸ್ಯರು ಎಂದು ಎಲ್ಲ ಕಾರ್ಯಕ್ರಮಗಳಿಗೆ ಹಾಜರಾಗಿದ್ದಾರೆ. ಆದರೂ ಸಹ ಅವಧಿ ಹೆಚ್ಚಿಸುವಂತೆ ಕೇಳಿಕೊಳ್ಳುವುದು ಖಂಡನೀಯ ಎಂದು ಟೀಕಿಸಿದರು.

ಈಗೀರುವ ಪುರಸಭೆ ಸದಸ್ಯರು ಪಟ್ಟಣದಲ್ಲಿ ಯಾವುದೇ ರೀತಿ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿಲ್ಲ. ಕಳೆದ ೫-೬ ವರ್ಷಗಳಿಂದ ಇರುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿಯೂ ಯಾವುದೇ ಕ್ರಮಗಳಿಲ್ಲ. ಅವರ ಆಡಳಿತದ ಬಗ್ಗೆ ಜನ ಬೇಸತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರು ಮತ್ತೆ ಸ್ಪರ್ಧಿಸಿ ಆಯ್ಕೆಯಾಗಿ ಜನಸೇವೆಗೆ ಮುಂದಾಗಲಿ, ಆದರೆ ಕೋರ್ಟ್‌ಗೆ ಹೋಗಿರುವ ನಿರ್ಧಾರ ನಾಚಿಕೆಗೇಡುತನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮನವಿ ಸ್ವೀಕರಿಸಿದರು. ಮಂಜುನಾಥ ಗಾಂಜಿ, ಮಲ್ಲನಗೌಡ ಪಾಟೀಲ, ಶ್ರೇಯಾಂಕ ಹಿರೇಮಠ, ವೀರೇಶ ಹಗ್ಗರದ, ತೇಜನಗೌಡ ಉದ್ದನಗೌಡ್ರ, ಚಂದ್ರಕಾಂತ ಮುಳಗುಂದ, ಅಭಿ ಬೂದಿಹಾಳ, ಮಂಜು ಕಮತದ, ಪ್ರಕಾಶ ಉದ್ದನಗೌಡ್ರ, ಮಂಜು ಪಾಣಿಗಟ್ಟಿ, ಹಾಲಪ್ಪ ಸಂಕದಾಳ, ದ್ಯಾಮನಗೌಡ ರಾಯರ್, ರವಿ ಉದ್ದನಗೌಡ್ರ, ತೇಜಸ್ವೀನಿ ಬಡಿಗೇರ ಇದ್ದರು.

PREV

Recommended Stories

ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ