ಡೊನೇಷನ್ ಹಾವಳಿ ಕಡಿವಾಣ ಹಾಕಲು ಒತ್ತಾಯ

KannadaprabhaNewsNetwork |  
Published : May 17, 2026, 01:15 AM IST
೧೬ಕೆಎಲ್‌ಆರ್-೯ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ನಿಯಂತ್ರಣಕ್ಕೆ ವಿಶೇಷ ನಿವೃತ್ತ ನ್ಯಾಯಾಧೀಶರ ತಂಡ ರಚೆನ ಮಾಡಿ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌರ್ಕಯ ಒದಗಿಸಿ ಸಕಾಲಕ್ಕೆ ಪಠ್ಯ ಪುಸ್ತಕ ಸಮವಸ್ತ್ರ ವಿತರಿಸಬೇಕೆಂದು ರೈತ ಸಂಘದಿಂದ ಕೋಲಾರದ ಶಿಕ್ಷಣ ಇಲಾಖೆ ಅಧಿಕಾರಿಗೆ ಮನವಿಸಲ್ಲಿಸುತ್ತಿರುವುದು. | Kannada Prabha

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಬೋಧನೆ ಇಲ್ಲ ಖಾಸಗಿ ಶಾಲೆಗಳ ಸಿಬಿಎಸ್ಸಿ, ಐಸಿಎಸ್ಸಿ ನಿಯಂತ್ರಣಕ್ಕೆ ಶಿಕ್ಷಣ ಇಲಾಖೆಗೆ ತಾಕತ್ತು ಇಲ್ಲ. ಬಡವರ ಮಕ್ಕಳ ಶಿಕ್ಷಣ ರೂಪಿಸಲು ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ.

ಕನ್ನಡಪ್ರಭ ವಾರ್ತೆ ಕೋಲಾರಖಾಸಗಿ ಶಾಲೆಗಳ ಡೊನೇಷನ್ ಹಾವಳಿ ನಿಯಂತ್ರಣಕ್ಕೆ ವಿಶೇಷ ನಿವೃತ್ತ ನ್ಯಾಯಾಧೀಶರ ತಂಡ ರಚೆನ ಮಾಡಿ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌರ್ಕಯ ಒದಗಿಸಿ ಸಕಾಲಕ್ಕೆ ಪಠ್ಯ ಪುಸ್ತಕ ಸಮವಸ್ತ್ರ ವಿತರಿಸಬೇಕೆಂದು ರೈತ ಸಂಘದಿಂದ ಶಿಕ್ಷಣ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು.ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಬೋಧನೆ ಇಲ್ಲ ಖಾಸಗಿ ಶಾಲೆಗಳ ಸಿಬಿಎಸ್ಸಿ, ಐಸಿಎಸ್ಸಿ ನಿಯಂತ್ರಣಕ್ಕೆ ಶಿಕ್ಷಣ ಇಲಾಖೆಗೆ ತಾಕತ್ತು ಇಲ್ಲ. ಬಡವರ ಮಕ್ಕಳ ಶಿಕ್ಷಣ ರೂಪಿಸಲು ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಸರ್ಕಾರಿ ನೌಕರಿಲ್ಲ ರಾಜಕಾರಣ ಮಕ್ಕಳಿಗೂ ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುವ ಜಾರಿಯಾಗವರೆಗೂ ಬಹು ರಾಷ್ಟೀಯ ಕಂಪನಿಗಳ ಕಪಿಮುಷ್ಠಿಯಿಂದ ಶಿಕ್ಷಣ ಹೊರ ಬರುವುದಿಲ್ಲವೆಂದು ಕೂಲಿ ಕಾರ್ಮಿಕ ಮಹಿಳೆ ಶೈಲಜ ಶಿಕ್ಷಣ ಅವ್ಯವಸ್ಥೆಯ ವಿರುದ್ದ ಕಿಡಿಕಾರಿದರು.ಮನವಿ ಸ್ವೀಕರಿಸಿ ಮಾತನಾಡಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಅನಾಧಿಕೃತ ಖಾಸಗಿ ಶಾಲೆಗಳು ಹಾಗೂ ದುಬಾರಿ ಶುಲ್ಕದ ಬಗ್ಗೆ ಪೋಷಕರು ದೂರು ನೀಡಿದರೆ ಕ್ರಮ ಕೈಗೊಳ್ಳುವ ಜೊತೆಗೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಂತೆ ಜಾಗೃತಿ ಮೂಡಿಸುತ್ತೇವೆ ಹಾಗೂ ಸಕಾಲಕ್ಕೆ ಮಕ್ಕಳಿಗೆ ಪಠ್ಯ ಪುಸ್ತಕ ಸಮವಸ್ತ್ರ ನೀಡುವ ಭರವಸೆಯನ್ನು ನೀಡಿದರು. ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ರಾಜ್ಯ ಮುಖಂಡ ಕಮ್ಮದಟ್ಟಿ ಚಲಪತಿ, ಆನಂದರೆಡ್ಡಿ, ಸುಪ್ರಿಂ ಚಲ, ರಾಜ್ಯ ಮುಖಂಡ ಪಾರುಕ್ ಪಾಷ, ರಾಜೇಶ ಚಂದ್ರಪ್ಪ, ತಿಮ್ಮಣ್ಣ, ಕುವಣ್ಣ, ಶೈಲಜ, ರತ್ನಮ್ಮ ವಿಜಿ, ಮುನಿರಾಜು ಶಶಿ, ಪುತ್ತೇರಿ ರಾಜು ಯಾರಂಘಟ್ಟ ಗಿರೀಶ್, ನಯನ ವೆಂಕಟಮ್ಮ ಗೌರಮ್ಮ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಠ್ಯೇತರ ಚಟುವಟಿಕೆಗಳು ನಾಯಕತ್ವ ಗುಣ ಬೆಳೆಸುತ್ತದೆ
ರೈತರಲ್ಲಿ ಸಂತಸ ತಂದ ಬೀನ್ಸ್, ಸೌತೆಕಾಯಿ