ಲಕ್ಷ್ಮೇಶ್ವರ: ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಸಾಲ ಮರುಪಾವತಿಗೆ ಒತ್ತಡ ಹೇರದಂತೆ ಬ್ಯಾಂಕ್‌ಗಳಿಗೆ ಸೂಚನೆ ಕೊಡಬೇಕು ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಡಿ.ವೈ. ಹುನಗುಂದ ಹಾಗೂ ಶಿರಹಟ್ಟಿ ಮಂಡಲ ತಾಲೂಕು ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಆಗ್ರಹಿಸಿದರು.ಶನಿವಾರ ಶಿರಹಟ್ಟಿ ಬಿಜೆಪಿ ಮಂಡಲದಿಂದ ಗ್ರೇಡ್ 2 ತಹಸೀಲ್ದಾರ್ ಮಂಜುನಾಥ ಅಮಾಸಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮರ್ಪಕ ಮಳೆಯಿಲ್ಲದೆ ಬೆಳೆಗಳು ಒಣಗುತ್ತಿದ್ದು, ಬಿತ್ತನೆ ಮಾಡಿದ ಬೆಳೆಗಳಿಗೆ ನಿರೀಕ್ಷಿತ ಇಳುವರಿ ದೊರೆಯುವ ಸಾಧ್ಯತೆ ಕಡಿಮೆಯಾಗಿದೆ. ಇದರಿಂದ ರೈತರು ಆರ್ಥಿಕವಾಗಿ ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ.
ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕೆಲವು ಬ್ಯಾಂಕ್‌ಗಳ ಅಧಿಕಾರಿಗಳು ರೈತರಿಗೆ ಸಾಲದ ಕಂತು ಹಾಗೂ ಬಾಕಿ ಮೊತ್ತವನ್ನು ತಕ್ಷಣ ಪಾವತಿಸುವಂತೆ ಒತ್ತಡ ಹೇರುತ್ತಿರುವುದು ರೈತರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಬೆಳೆ ನಷ್ಟದ ಕುರಿತು ಗ್ರಾಮವಾರು ಹಾಗೂ ರೈತವಾರು ಸಮೀಕ್ಷೆ ನಡೆಸಿ, ಅರ್ಹ ರೈತರಿಗೆ ಸರ್ಕಾರದ ಬರ ಪರಿಹಾರ ಹಾಗೂ ಇತರೆ ಸೌಲಭ್ಯಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ಕೊಟ್ಟರು.
ಈ ವೇಳೆ ಬಿಜೆಪಿ ಮುಖಂಡ ನೀಲಪ್ಪ ಕರ್ಜಕಣ್ಣವರ, ನಿಂಗಪ್ಪ ಬನ್ನಿ, ನವೀನ ಹಿರೇಮಠ, ನಾಗಯ್ಯ ಮಠಪತಿ, ವೀರೇಶ ಸಾಸಲವಾಡ, ಅನಿಲ ಮುಳಗುಂದ ಮಾತನಾಡಿದರು. ಈ ವೇಳೆ ರೈತ ಮೋರ್ಚಾ ತಾಲೂಕು ಅಧ್ಯಕ್ಷ ಅಜ್ಜಪ್ಪ ಹೂಗಾರ, ಶಿರಹಟ್ಟಿ ಮಂಡಲ ಪ್ರ.ಕಾರ್ಯದರ್ಶಿ ಗಂಗಾಧರ ಮೆಣಸಿನಕಾಯಿ, ತಾಲೂಕು ಯುವ ಘಟಕ ಅಧ್ಯಕ್ಷ ಬಸವರಾಜ ಚಕ್ರಸಾಲಿ, ಎಂ.ಆರ್. ಪಾಟೀಲ, ನಗರ ಅಧ್ಯಕ್ಷ ವಿಜಯ ಕುಂಬಾರ, ಮಂಜನಗೌಡ ಕೆಂಚನಗೌಡ್ರ, ತುಕ್ಕಪ್ಪ ಪೂಜಾರ, ಪ್ರಕಾಶ ಮಾದನೂರ, ಗಿರೀಶ ಚೌರಡ್ಡಿ, ಜಗದೀಶಗೌಡ ಪಾಟೀಲ, ದುಂಡೇಶ ಕೋಟಗಿ, ವಿಜಯ ಮೆಕ್ಕಿ ಬಸವರಾಜ ಮಲ್ಲೂರ, ಅಪ್ಪಣ್ಣ ಮುಳಗುಂದ, ಕಿರಣ ಮಹಾಂತಶೆಟ್ಟರ, ಸಂತೋಷ ಚಕ್ರಸಾಲಿ, ಸಚಿನ ಮೇಲ್ಮುರಿ, ಸಿದ್ದು ಬಿಜ್ಜೂರಮಠ, ರಮೇಶ ಹಾಳದೊಟದ, ಸಂತೋಷ ಜಾವೂರ, ವಿಶಾಲ ಬಟಗುರ್ಕಿ, ಬಸವರಾಜ ಮಜ್ಜಿಗುಡ್ಡ, ಲಕ್ಷ್ಮಣ ಲಮಾಣಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.