ಕನ್ನಡಪ್ರಭ ವಾರ್ತೆ ಮದ್ದೂರು
ಈ ಬಾರಿ ಮುಂಗಾರು ಮಳೆ ಅಭಾವದಿಂದ ಕೆಆರ್‌ಎಸ್ ಜಲಾಶಯ ಹಾಗೂ ಜಿಲ್ಲೆಯ ಕೆರೆಕಟ್ಟೆಗಳು ಬರಿದಾಗಿದೆ. ಇದರಿಂದ ರೈತರ ಬೆಳೆದ ಕಬ್ಬು, ರಾಗಿ, ತೆಂಗು, ಬಾಳೆ ಹಾಗೂ ಹಿಪ್ಪ ನೇರಳೆ ಬೆಳೆಗಳು ನೀರಿನ ಅಭಾವದಿಂದ ಒಣಗುವ ಹಂತಕ್ಕೆ ಬಂದಿದೆ ಎಂದು ಕಾರ್ಯಕರ್ತರು ರೈತರ ಪರವಾಗಿ ಅಳಲು ತೋಡಿಕೊಂಡರು.
ಸಕಾಲದಲ್ಲಿ ಮುಂಗಾರು ಮಳೆ ಆರಂಭವಾಗಿದ್ದರೆ ರೈತರ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳವ ಎಲ್ಲಾ ಅವಕಾಶಗಳು ಇತ್ತು. ಆದರೆ, ಮಳೆ ಕೊರತೆಯಿಂದಾಗಿ ಬೆಳೆ ನಷ್ಟವಾಗಿ ಆರ್ಥಿಕ ನಷ್ಟ ಎದುರಿಸುವಂತಾಗಿದೆ. ಹೀಗಾಗಿ ತಾವು ಸರ್ಕಾರ ಹಾಗೂ ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆಸಿ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವ ಜೊತೆಗೆ ಬೆಳೆ ನಷ್ಟ ಪರಿಹಾರ ನೀಡುವಂತೆ ಒತ್ತಾಯ ಪಡಿಸುವಂತೆ ಕಾರ್ಯಕರ್ತರು ಮನವಿ ಮಾಡಿದರು.ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕೊಡಬೇಕಾದ 50 ರು. ಸಹಾಯಧನ ಇನ್ನೂ ನೀಡಿಲ್ಲ ಹಾಗೂ ಕಾರ್ಖಾನೆಗಳ ಮಾಲೀಕರು ಕಾರ್ಖಾನೆ ಪ್ರಾರಂಭಿಸದೇ ಕಾರಣ ಬೆಳೆದು ನಿಂತ ಕಬ್ಬು ಒಣಗುವಂತಕ್ಕೆ ಬಂದಿದೆ. ಆದರೆ, ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆ ಸಕ್ಕರೆ ಆಯುಕ್ತರ ಆದೇಶವಿಲ್ಲದೆ ಕಾರ್ಖಾನೆ ಆರಂಭಿಸಿದಂತೆ ಮಾಲೀಕರಿಗೆ ಪತ್ರ ಬರೆದಿರುವುದು ಖಂಡನೀಯ ಎಂದು ದೂರು ನೀಡಿದರು.
ಈ ವೇಳೆ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ಮುಖಂಡರಾದ ರಮೇಶ್, ಮಹೇಶ್, ವೀರಪ್ಪ, ನಾಗಣ್ಣ, ನಿರಂಜನ್ ಮತ್ತಿತರರು ಇದ್ದರು.