ಸಿದ್ದಿ ಅಭಿವೃದ್ಧಿ ನಿಗಮ ಸ್ಥಾಪಿಸಿ ₹100 ಕೋಟಿ ಅನುದಾನ ಮೀಸಲಿಡಲು ಆಗ್ರಹ

KannadaprabhaNewsNetwork |  
Published : Mar 25, 2025, 12:47 AM IST
24ಎಚ್.ಎಲ್.ವೈ-1: ಬುಡಕಟ್ಟು ಸಿದ್ಧಿ ಸಮುದಾಯದವರಿಗೆ ನೀಡಿರುವ ಅರಣ್ಯ ಹಕ್ಕುಪತ್ರಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಬೇಕು ಹಾಗೂ ಸಿದ್ಧಿ ಸಮುದಾಯದ ಅಭಿವೃದ್ಧಿಗಾಗಿ ಸಿದ್ಧಿ ಅಭಿವೃದ್ಧಿ ನಿಗಮ ಸ್ಥಾಪಿಸಿ 100ಕೋಟಿ ಅನುದಾನವನ್ನು ಮೀಸಲಾಗಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಿದ್ಧಿ ಬುಡಕಟ್ಟು ಜನಪದ ಸಂಘ ಮುಂದಾಳತ್ವದಲ್ಲಿ ಹಳಿಯಾಳ ತಾಲೂಕಿನ ಸಿದ್ಧಿ ಸಮುದಾಯದವರ ನಿಯೋಗವು ತಾಲೂಕಾಡಳಿತ ಸೌಧಕ್ಕೆ ತೆರಳಿ ರಾಜ್ಯ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು. | Kannada Prabha

ಸಾರಾಂಶ

ಬುಡಕಟ್ಟು ಸಿದ್ದಿ ಸಮುದಾಯದವರಿಗೆ ನೀಡಿರುವ ಅರಣ್ಯ ಹಕ್ಕುಪತ್ರಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಬೇಕು

ಹಳಿಯಾಳ: ಬುಡಕಟ್ಟು ಸಿದ್ದಿ ಸಮುದಾಯದವರಿಗೆ ನೀಡಿರುವ ಅರಣ್ಯ ಹಕ್ಕುಪತ್ರಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಬೇಕು ಹಾಗೂ ಸಿದ್ಧಿ ಸಮುದಾಯದ ಅಭಿವೃದ್ಧಿಗಾಗಿ ಸಿದ್ಧಿ ಅಭಿವೃದ್ಧಿ ನಿಗಮ ಸ್ಥಾಪಿಸಿ ₹100 ಕೋಟಿ ಅನುದಾನ ಮೀಸಲಾಗಿಡಬೇಕು ಎಂದು ರಾಜ್ಯ ಸಿದ್ದಿ ಬುಡಕಟ್ಟು ಜನಪದ ಸಂಘ ಆಗ್ರಹಿಸಿದೆ.ಸೋಮವಾರ ಹಳಿಯಾಳ ಪಟ್ಟಣದಲ್ಲಿ ರಾಜ್ಯ ಸಿದ್ದಿ ಬುಡಕಟ್ಟು ಜನಪದ ಸಂಘದ ಮುಂದಾಳತ್ವದಲ್ಲಿ ಹಳಿಯಾಳ ತಾಲೂಕಿನ ಸಿದ್ದಿ ಸಮುದಾಯದವರ ನಿಯೋಗವು ತಾಲೂಕಾಡಳಿತ ಸೌಧಕ್ಕೆ ತೆರಳಿ ರಾಜ್ಯ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ಸಲ್ಲಿಸಿ ಅತೀ ಜರೂರಾಗಿರುವ ಸಮುದಾಯದ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕ ನಿರ್ಧಾರವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಿದ್ಧಿ ಸಮುದಾಯವನ್ನು ಪರಿಶಿಷ್ಟ ಪಂಗಡದ ವ್ಯಾಪ್ತಿಗೊಳಪಡಿಸಿದರೂ ಇನ್ನುವರೆಗೂ ಬಹುತೇಕ ಸಿದ್ದಿ ಸಮುದಾಯ ಮುಖ್ಯವಾಹಿನಿಗೆ ಬರಲಿಲ್ಲ. ಅರಣ್ಯ ಹಕ್ಕು ಕಾಯ್ದೆ ಅಡಿ ಕೆಲವು ಕುಟುಂಬಗಳಿಗೆ ಮಾತ್ರ ಹಕ್ಕುಪತ್ರ ದೊರೆತಿದೆ. ಸಮುದಾಯದ ಯುವಪೀಳಿಗೆಯು ಸೂಕ್ತ ಮಾರ್ಗದರ್ಶನವಿಲ್ಲದೇ ದುಶ್ಚಟಗಳ ದಾಸರಾಗುತ್ತಿದ್ದು, ಶಿಕ್ಷಣ ತೊರೆಯುವ ಮಕ್ಕಳ ಸಂಖ್ಯೆಯು ಶೇ.60 ಬೆಳೆದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕ್ರೀಡಾ ಸಾಮರ್ಥ್ಯಗಳನ್ನು ಹೊಂದಿರುವ ಸಿದ್ದಿ ಸಮುದಾಯದ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ ಕೊಡಬೇಕು. ಅದಕ್ಕಾಗಿ ಜಿಲ್ಲೆಯಲ್ಲಿ ಪದವಿ ಪೂರ್ವ ತರಗತಿಯವರೆಗೆ ವಸತಿ ಶಾಲೆಯ ಜೊತೆ ಕ್ರೀಡಾ ತರಬೇತಿ ನೀಡಬೇಕು. ಸಿದ್ದಿ ಕುಟುಂಬಗಳು ನೆಲೆಸಿರುವ ಮಜಿರೆಗಳನ್ನು ಕಂದಾಯ ಗ್ರಾಮವೆಂದು ಘೋಷಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಅಭಿವೃದ್ಧಿ ಪಡಿಸಬೇಕು. ಸಿದ್ದಿಗಳ ಉದ್ಯೋಗಕ್ಕಾಗಿ ವಿಶೇಷ ನೇಮಕಾತಿ ನಿಯಮ ರೂಪಿಸಬೇಕು. ಪೌಷ್ಠಿಕ ಆಹಾರ ಸೌಲಭ್ಯಗಳಿಂದ ವಂಚಿತರಾಗಿರುವ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ನೆಲೆಸಿರುವ ಸಿದ್ಧಿ ಕುಟುಂಬಗಳಿಗೆ ಪೌಷ್ಠಿಕ ಆಹಾರ ನೀಡಬೇಕು ಸಿದ್ದಿಗಳ ಕಲೆ ಮತ್ತು ಸಂಸ್ಕೃತಿ ರಕ್ಷಣೆಗಾಗಿ ಅಧ್ಯಯನ ಮತ್ತು ಸಂಸೋಧನಾ ಕೇಂದ್ರವನ್ನು ಪ್ರಾರಂಭಿಸಬೇಕು. ಸಿದ್ದಿ ಸಮುದಾಯದವರಿಗೆ ಕನಿಷ್ಠ ಶೇ.3 ಒಳಮೀಸಲಾತಿ ಸೌಲಭ್ಯವನ್ನು ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ರಾಜ್ಯ ಸಿದ್ದಿ ಬುಡಕಟ್ಟು ಜನಪದ ಸಂಘದ ಕಾರ್ಯಾಧ್ಯಕ್ಷ ಲಾರೆನ್ಸ್ ಕೈತಾನ ಸಿದ್ದಿ, ಪ್ರಮುಖರಾದ ಅಲ್ಲಾಭಕ್ಷ್ಯ ಪಾಟೀಲ, ಮೊನು ದೊಡ್ಮಣಿ, ಅಂತೋನ ಸಿದ್ದಿ, ಪ್ರೇಮನಾಥ ಸಿದ್ದಿ, ರೋಜಿ ಲೂಯಿಸ್ ದಬಾಲಿ ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ