ಜಾತಿ ಗಣತಿ ಸಮೀಕ್ಷೆ ದಿನಾಂಕ ವಿಸ್ತರಿಸಲು ಒಳಮೀಸಲು ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಾಲಕೃಷ್ಣ ಆಗ್ರಹ

KannadaprabhaNewsNetwork |  
Published : Oct 04, 2025, 12:00 AM IST
ಜಾತಿಗಣತಿ ಸಮೀಕ್ಷೆ ದಿನಾಂಕ ವಿಸ್ತರಿಸಲು ಒಳಮೀಸಲು ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಾಲಕೃಷ್ಣ ಮಧುಗಿರಿಯಲ್ಲಿ ಸುದ್ದಿಗೋಷ್ಠಿ.ಲ್ಲಿ ಮಾತನಾಡಿದರು.  | Kannada Prabha

ಸಾರಾಂಶ

ರಾಜ್ಯ ಸರ್ಕಾರ ಸಾಮಾಜಿಕ,ಶೈಕ್ಷಣಿಕ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಲು ಅನುಕೂಲವಾಗುವಂತೆ ಗಣತಿ ದಿನಾಂಕವನ್ನು ವಿಸ್ತರಿಸುವಂತೆ ಒಳ ಮೀಸಲು ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ವೈ.ಕೆ.ಬಾಲಕೃಷ್ಣ ಸರ್ಕಾರವನ್ನು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ರಾಜ್ಯ ಸರ್ಕಾರ ಸಾಮಾಜಿಕ,ಶೈಕ್ಷಣಿಕ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಲು ಅನುಕೂಲವಾಗುವಂತೆ ಗಣತಿ ದಿನಾಂಕವನ್ನು ವಿಸ್ತರಿಸುವಂತೆ ಒಳ ಮೀಸಲು ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ವೈ.ಕೆ.ಬಾಲಕೃಷ್ಣ ಸರ್ಕಾರವನ್ನು ಆಗ್ರಹಿಸಿದರು.

ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿರಾ, ಪಾವಗಡ, ಮಧುಗಿರಿ ಹಾಗೂ ಕೊರಟಗೆರೆ ತಾಲೂಕುಗಳಲ್ಲಿ ನಡೆಸುತ್ತಿರುವ ಜಾತಿ ಗಣಿತ ಅವೈಜ್ಞಾನಿಕವಾಗಿದೆ. ಗಣತಿದಾರರಿಗೆ ಸೂಕ್ತ ತರಬೇತಿ, ಮಾರ್ಗ ದರ್ಶನ ನೀಡಬೇಕು. ಸದಾಶಿವ ಆಯೋಗ ಮತ್ತು ನಾಗಮೋಹನ್ ದಾಸ್ ಆಯೋಗ ಸೂಚಿಸಿರುವಂತೆ ಜಾತಿಯನ್ನು ನಮೂದಿಸಬೇಕಿದೆ. ಈಗಾಗಲೇ ನಡೆಯುತ್ತಿರುವ ಜಾತಿಗಣತಿಯಿಂದ ನಾವು ಮತ್ತೆ ಮೂಲೆಗುಂಪಾಗುವ ಸಾಧ್ಯತೆಗಳಿವೆ. ಆದ್ದರಿಂದ ಸರ್ಕಾರ ನೇಮಿಸಿರುವ ಸಮೀಕ್ಷೆದಾರರು ಸಮುದಾಯದವರಿಂದ ತಪ್ಪು ಮಾಹಿತಿ ಸಂಗ್ರಹಿಸುತ್ತಿದ್ದು, ಆದಷ್ಟು ಬೇಗ ಸಮೀಕ್ಷೆ ಪೂರ್ಣಗೊಳಿಸಬೇಕಿದ್ದು, ಎಡಗೈ ಸಮುದಾಯದವರು ಮಾದಿಗ ಎಂದು ಬಲಗೈ ಸಮುದಾಯದವರು ಚಲವಾದಿ ಅಥವಾ ಹೊಲೆಯ ಎಂದು ನಮುದಿಸಲು ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು. ಈಗಾಗಲೇ ಸರ್ಕಾರ ಎಕೆ.ಎಡಿ, ಮತ್ತು ಕೆಲವೂಂದು ಜಾತಿ ಸೂಚಕ ಪದಗಳಲ್ಲವೆಂದು ತಿಳಿದು ಅವುಗಳನ್ನು ತೆಗೆದು ಹಾಕಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದೆ. ಜೊತೆಗೆ ಸಮೀಕ್ಷೆ ಕಲಂನಲ್ಲಿ ಕೆಲವೂಂದು ಕಲಂಗಳನ್ನು ಉಳಿಸಿರುವುದು ಗೊಂದಲಕ್ಕೆ ಎಡೆಮಾಡಿ ಕೊಟ್ಟಿದೆ. ಆದ್ದರಿಂದ ಸರ್ಕಾರ ಸಮೀಕ್ಷೆ ದಿನಾಂಕವನ್ನು ವಿಸ್ತರಿಸಿ ಸಮೀಕ್ಷೆಯನ್ನು ಪರಿಪೂರ್ಣಗೊಳಿಸುವಂತೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿಮಯ್ಯ,ನೌಕರರ ಸಂಘದ ಜಿಲ್ಲಾಧ್ಯಕ್ಷ ರಂಗಪ್ಪ, ರಂಗಧಾಮಯ್ಯ, ವಕೀಲ ನರಸಿಂಹಮೂರ್ತಿ,ಎಸ್‌.ಡಿ.ಕೃಷ್ಣಪ್ಪ, ತೊಂಡೋಟಿ ರಾಮಾಂಜಿ, ದೊಡ್ಡಹೊಶಹಳ್ಳಿ ನರಸಿಂಹಮೂರ್ತಿ,ಎಚ್‌ಎಂಟಿ ನರಸೀಯಪ್ಪ, ನರಸಿಂಹಯ್ಯ, ಡಿ.ಟಿ.ವೆಂಕಟೇಶ್, ಶಿವಲಿಂಗರಾಜು, ನರಸೀಯಪ್ಪ, ಮುಕಂದಪ್ಪ,ಜೀವಿಕ ಮಂಜು,ಕೋಟೆಕಲ್ಲಪ್ಪ,ರಂಗಧಾಮಯ್ಯ,ಹನುಮಂತರಾಯಪ್ಪ,ಗಂಗಾಧರ್‌, ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ