ಜನಗಣತಿಗೆ ತಾಂತ್ರಿಕ ದೋಷ ಸರಿಪಡಿಸಲು ಆಗ್ರಹ

KannadaprabhaNewsNetwork |  
Published : Sep 26, 2025, 01:00 AM IST
ಮಾಗಡಿ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಜನಗಣತಿಯಲ್ಲಿ ಆ್ಯಪ್ ಸಮಸ್ಯೆ ಸರಿಪಡಿಸುವಂತೆ ತಹಶೀಲ್ದಾರ್ ಶರತ್ ಕುಮಾರ್ ರವರಿಗೆ ಶಿಕ್ಷಕರು ಮನವಿ ಸಲ್ಲಿಸುತ್ತಿರುವುದು. | Kannada Prabha

ಸಾರಾಂಶ

ಮಾಗಡಿ: ರಾಜ್ಯ ಸರ್ಕಾರ ನಿಗದಿಪಡಿಸಿರುವ ಜನಗಣತಿ ಸಮೀಕ್ಷೆಗೆ ಇರುವ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ತಹಸೀಲ್ದಾರ್‌ ಶರತ್ ಕುಮಾರ್‌ಗೆ ಶಿಕ್ಷಕರು ಮನವಿ ಸಲ್ಲಿಸಿದರು.

ಮಾಗಡಿ: ರಾಜ್ಯ ಸರ್ಕಾರ ನಿಗದಿಪಡಿಸಿರುವ ಜನಗಣತಿ ಸಮೀಕ್ಷೆಗೆ ಇರುವ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ತಹಸೀಲ್ದಾರ್‌ ಶರತ್ ಕುಮಾರ್‌ಗೆ ಶಿಕ್ಷಕರು ಮನವಿ ಸಲ್ಲಿಸಿದರು.

ಪಟ್ಟಣದ ತಾಲೂಕು ಕಚೇರಿ ಸಮೀಕ್ಷಾ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಪತ್ರಿಭಟನೆ ನಡೆಸಿ, ರಾಜ್ಯ ಸರ್ಕಾರ ಆದೇಶಿಸಿರುವ ಸಾಮಾಜಿಕ ಮತ್ತ ಶೈಕ್ಷಣಿಕ ಸಮೀಕ್ಷೆಗೆ ಸರ್ಕಾರ ಸಿದ್ಧ ಪಡಿಸಿರುವ ಆ್ಯಪ್ ಸಕ್ರಮವಾಗಿ ಕೆಲಸ ಮಾಡದ ಕಾರಣ ಶಿಕ್ಷಕರು ತಮ್ಮ ಕರ್ತವ್ಯಕ್ಕೆ ತೊಂದರೆಯಾಗುತ್ತಿದೆ. ಕೂಡಲೆ ಸರಿಪಡಿಸುವಂತೆ ತಹಸೀಲ್ದಾರರು ಹಾಗೂ ತಾಪಂ ಇಒ ಜೈಪಾಲ್‌ಗೆ ಮನವಿ ಸಲ್ಲಿಸಿದರು.

ತಾಲೂಕಿನ ಕೆಲವು ಗ್ರಾಮಗಳಲ್ಲಿ ಇಂಟರ್‌ನೆಟ್ ಸಮಸ್ಯೆ ಇದ್ದು ಮೊಬೈಲ್ ಆ್ಯಪ್ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದಿರುವ ಕಾರಣ ಅವುಗಳನ್ನು ಆಪ್‌ಲೈನ್‌ನಲ್ಲಿ ನಮೂದಿಸುವಂತೆ ಅನುಕೂಲ ಮಾಡಿಕೊಡಬೇಕು. ಗಣತಿದಾರರು ಸಮೀಕ್ಷೆ ಸಮಯದಲ್ಲಿ ಒಟಿಪಿ ಸಮಸ್ಯೆ, ಜತೆಗೆ ಸಮೀಕ್ಷೆಯ ಮನೆಗಳ ಪಟ್ಟಿ ನೀಡುವುದು, ವಿಕಲಚೇತನ ಶಿಕ್ಷಕರಿಗೆ ವಿನಾಯಿತಿ ಹಾಗೂ 55 ವರ್ಷ ದಾಟಿದ ಶಿಕ್ಷಕರಿಗೂ ವಿನಾಯಿತಿ ಮತ್ತು ಆಯಾ ಕ್ಲಸ್ಟರ್‌ಗಳ ಮೇಲ್ವಿಚಾರಕರ ಮಾಹಿತಿ ಮತ್ತು ಕಾರ್ಯ ನಿರ್ವಹಣೆಗೆ ಸೂಚನೆ ಹಾಗೂ ಬಿಎಲ್ ಒ ಆಗಿ ಸಮೀಕ್ಷೆ ಸಮಿತಿಯಿಂದ ಕೈಬಿಡುವಂತೆ ಮನವಿ ಸಲ್ಲಿಸಿದರು.

ತಹಸೀಲ್ದಾರ್‌ ಶರತ್ ಕುಮಾರ್ ಮಾತನಾಡಿ, ಇದು ರಾಜ್ಯದ ಸಮಸ್ಯೆಯಾಗಿದ್ದು ಆ್ಯಪ್ ನಲ್ಲಿ ದೋಷ ಕಂಡು ಬಂದಿರುವುದರಿಂದ ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳ ತಂಡ ವಿಶೇಷ ಸಭೆ ಕರೆದು ಸಮಸ್ಯೆ ಬಗೆಹರಿಸಿ ನಾಳೆಯಿಂದ ಜನಗಣತಿ ಎಂದಿನಂತೆ ನಡೆಯುವಂತೆ ಮಾಡಲಾಗುತ್ತದೆ. ಯಾವುದೇ ರೀತಿ ತೊಂದರೆ ಬಂದರೂ ಅದನ್ನು ಸರಿಪಡಿಸಿ ಸರ್ಕಾರ ನೀಡಿರುವ ಜನಗಣತಿಯನ್ನು ತಾಲೂಕಿನಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸರ್ವೆ ಕಾರ್ಯದಲ್ಲಿ ತೊಡಗಿರುವ ತಾಲೂಕಿನ ಬಹುತೇಕ ಶಿಕ್ಷಕರು ಭಾಗವಹಿಸಿದ್ದರು.

(ಫೋಟೋ ಕ್ಯಾಪ್ಷನ್‌)

ಮಾಗಡಿ ತಾಲೂಕು ಕಚೇರಿ ಮುಂದೆ ಜನಗಣತಿಯಲ್ಲಿ ಆ್ಯಪ್ ಸಮಸ್ಯೆ ಸರಿಪಡಿಸುವಂತೆ ತಹಸೀಲ್ದಾರ್ ಶರತ್ ಕುಮಾರ್‌ಗೆ ಶಿಕ್ಷಕರು ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ