ನರೇಗಾದಡಿ ಕೆಲಸ ನೀಡಲು ಆಗ್ರಹ

KannadaprabhaNewsNetwork |  
Published : Sep 23, 2024, 01:27 AM IST
ಪೊಟೋ ಸೆ.22ಎಂಡಿಎಲ್ 2. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡಬೇಕೆಂದು ಒತ್ತಾಯಿಸಿ ಮೆಳ್ಳಿಗೇರಿ ಗ್ರಾಮದ ಕೂಲಿ ಕಾರ್ಮಿಕರು ಶುಕ್ರವಾರ ಗ್ರಾಮ ಪಂಚಾಯತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡಬೇಕೆಂದು ಒತ್ತಾಯಿಸಿ ತಾಲೂಕಿನ ಮೆಳ್ಳಿಗೇರಿ ಗ್ರಾಮದ ಕೂಲಿ ಕಾರ್ಮಿಕರು ಗ್ರಾಮ ಪಂಚಾಯತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡಬೇಕೆಂದು ಒತ್ತಾಯಿಸಿ ತಾಲೂಕಿನ ಮೆಳ್ಳಿಗೇರಿ ಗ್ರಾಮದ ಕೂಲಿ ಕಾರ್ಮಿಕರು ಗ್ರಾಮ ಪಂಚಾಯತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹಲವಾರು ದಿನಗಳಿಂದ ಕೂಲಿ ಕೆಲಸಕ್ಕಾಗಿ ಗ್ರಾಮ ಪಂಚಾಯತಿಗೆ ಎಡತಾಕುತ್ತಿದ್ದರೂ ಅಧಿಕಾರಿಗಳು ಕೆಲಸ ನೀಡುತ್ತಿಲ್ಲ. ಸರಿಯಾದ ರೀತಿಯಲ್ಲಿ ಜಾಬ್ ಕಾರ್ಡ್ ನೀಡುತ್ತಿಲ್ಲ. ಈ ಕೂಡಲೇ ನಮಗೆ ಕೂಲಿ ಕೆಲಸ ನೀಡಬೇಕೆಂದು ಒತ್ತಾಯಿಸಿದರು. ದಿನಗೂಲಿ ಸಿಗದೇ ಬೇರೆ ಊರಿಗೆ ಕೆಲಸ ಅರಸಿ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಇದ್ದ ಊರಿನಲ್ಲಿಯೇ ಕೆಲ‌ಸ ಮಾಡಬೇಕೆಂದರೆ ಪಂಚಾಯತಿ ಆಡಳಿತ ಮಂಡಳಿ ಹಾಗೂ ಅಧಿಕಾರಿ ವರ್ಗದವರು ನರೇಗಾ ಕೆಲಸ ನೀಡುತ್ತಿಲ್ಲ. ಇನ್ನು ಮುಂದೆ ಕೂಲಿ ಕೆಲಸ ನೀಡದೆ ಹೋದರೆ ಮುಂದಿನ ದಿನದಲ್ಲಿ ಹೋರಾಟ ತೀವ್ರಗೊಳಿಸಲಾಗುವುದೆಂದು ಎಚ್ಚರಿಸಿದರು.ಏಕವಚನ, ಏರುಧ್ವನಿಯಲ್ಲಿ ಮಾತು ಬೆಳೆಸಿದ ಇಒ:

ಗ್ರಾಮಸ್ಥರು ಕೆಲಸ ಕೇಳಿಕೊಂಡು ಪಂಚಾಯತಿ ಕಚೇರಿ ಎದುರು ಪ್ರತಿಭಟನೆಗೆ ಕುಳಿತ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಇಒ ಪ್ರತಿಭಟನೆ ನೇತೃತ್ವ ಹೊತ್ತಿದ್ದ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಂಚಾಲಕ ಶಂಕರ ಅವರೊಂದಿಗೆ ಏಕವಚನದಲ್ಲಿ, ಏರುಧ್ವನಿಯಲ್ಲಿ ಮಾತು ಬೆಳೆಸಿದರು. ಘಟನೆಯನ್ನು ವಿಡಿಯೋ ಮಾಡುತ್ತಿದ್ದ ಮಹಿಳೆಯೋರ್ವಳಿಗೆ ವಿಡಿಯೋ ಮಾಡದಂತೆ ತಾಕೀತು ಮಾಡಿರುವುದು ಕಂಡುಬಂದಿತು. ಇಒ ಉಮೇಶ ಸಿದ್ನಾಳ ನಡೆಗೆ ಕೋಪಗೊಂಡ ಗ್ರಾಮಸ್ಥರು ನೀವು ಬಡವರಿಗೆ ಕೆಲಸ ಕೊಡಿಸಲು ಬಂದಿದ್ದೀರೋ ? ಅಥವಾ ನಮ್ಮನ್ನು ಹೆದರಿಸಲು ಬಂದಿದ್ದೀರೋ ಎಂದು ಇಒ ಉಮೇಶ ಸಿದ್ನಾಳಗೆ ಅವರಿಗೆ ಪ್ರಶ್ನಿಸಿದರು. ಮೊದಲು ನಮಗೆ ಕೆಲಸ ನೀಡುವಂತೆ ಪಟ್ಟು ಹಿಡಿದರು. ಆಗ ಗ್ರಾಮಸ್ಥರೊಂದಿಗೆ ಮಾತನಾಡಿದ ಇಒ ಶೀಘ್ರದಲ್ಲಿಯೇ ಗ್ರಾಮಸ್ಥರಿಗೆ ಕೂಲಿ ಕೆಲಸ‌ ನೀಡುವುದಾಗಿ ಭರವಸೆ ನೀಡಿದರು.ಗ್ರಾಮಸ್ಥರಾದ ಈರಮ್ಮ, ಶ್ರೀದೇವಿ, ಸಿದ್ದವ್ವ, ಗೀತಾ, ರಾಧಿಕಾ, ಸಿದ್ದಪ್ಪ, ಶಿವು, ಸವಿತಾ, ಶಿಲ್ಪಾ, ರವಿ, ಬಸವರಾಜು ಗ್ರಾಕೂಸ್ ಜಿಲ್ಲಾ ಸಂಚಾಲಕ ಶಂಕರ ಸೇರಿದಂತೆ ಇತರರು ಇದ್ದರು.

ಮೆಳ್ಳಿಗೇರಿ ಗ್ರಾಮದಲ್ಲಿ ಸದ್ಯ ಜಾಬ್ ಕಾರ್ಡ್ ಇರುವ ಜನರಿಗೆ ಶೀಘ್ರವೇ ಉದ್ಯೋಗ ನೀಡಲಾಗುವುದು. ಜಾಬ್ ಕಾರ್ಡ್ ಇಲ್ಲದಿರುವ ಜನರನ್ನು ಗುರುತಿಸಿ ಅವರಿಗೆ ಜಾಬ್ ಕಾರ್ಡ್ ವ್ಯವಸ್ಥೆ ಮಾಡಿ ಆ ನಂತರದಲ್ಲಿ ಕೆಲಸ ನೀಡಲಾಗುವುದು.

-ಉಮೇಶ ಸಿದ್ನಾಳ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮುಧೋಳ.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ