ಸ್ಮಶಾನ ಜಾಗ ಒದಗಿಸಲು ಆಗ್ರಹ

KannadaprabhaNewsNetwork |  
Published : Jan 20, 2024, 02:00 AM IST
ಹುನಗುಂದ ತಾಲೂಕಿನ ಕರಡಿ ಗ್ರಾಮದಲ್ಲಿ ವಿಶ್ವಕರ್ಮದ ಸಮಾಜದರಿಗೆ ಅಂತ್ಯಸಂಸ್ಕಾರಕ್ಕೆ ಸ್ಮಶಾನ ಜಾಗ ನೀಡುವಂತೆ ಒತ್ತಾಯಿಸಿ ತಹಸೀಲ್ದಾರ್‌ ನಿಂಗಪ್ಪ ಬಿರಾದಾರ ಗುರವಾರ ಮನವಿ ನೀಡಿದರು. ಕಾಶಿನಾಥ ಪತ್ತಾರ, ರಾಜು ಬಡಿಗೇರ ಇದ್ದರು. | Kannada Prabha

ಸಾರಾಂಶ

ಹುನಗುಂದ: ತಾಲೂಕಿನ ಕರಡಿ ಗ್ರಾಮದಲ್ಲಿ ವಿಶ್ವಕರ್ಮ ಸಮಾಜದ ಜನರ ಅಂತ್ಯಸಂಸ್ಕಾರಕ್ಕೆ ಸ್ಮಶಾನ ಜಾಗ ನೀಡುವಂತೆ ಒತ್ತಾಯಿಸಿ ತಹಸೀಲ್ದಾರ್‌ಗೆ ಗುರುವಾರ ಮನವಿ ಸಲ್ಲಿಸಿದರು. ಕಸಮಾಜದವರ ಅಂತ್ಯ ಸಂಸ್ಕಾರಕ್ಕೆ ಸಶ್ಮಾನ ಜಾಗ ಒದಗಿಸಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಸಮಾಜದವರು ಮರಣ ಹೊಂದಿದರೆ ಕರಡಿ ಗ್ರಾಪಂ ಮುಂದೆಯೇ ಅಂತ್ಯಕ್ರಿಯೆ ಮಾಡುತ್ತೇವೆ ಎಂದರು.

ಕನ್ನಡಪ್ರಭ ವಾರ್ತೆ ಹುನಗುಂದ

ತಾಲೂಕಿನ ಕರಡಿ ಗ್ರಾಮದಲ್ಲಿ ವಿಶ್ವಕರ್ಮ ಸಮಾಜದ ಜನರ ಅಂತ್ಯಸಂಸ್ಕಾರಕ್ಕೆ ಸ್ಮಶಾನ ಜಾಗ ನೀಡುವಂತೆ ಒತ್ತಾಯಿಸಿ ತಹಸೀಲ್ದಾರ್‌ಗೆ ಗುರುವಾರ ಮನವಿ ಸಲ್ಲಿಸಿದರು.

ಕರಡಿ ಗ್ರಾಮದ ವಿಶ್ವಕರ್ಮ ಸಮಾಜದ ಮುಖಂಡ ಕಾಶಿನಾಥ ಪತ್ತಾರ ಮಾತನಾಡಿ, ಗ್ರಾಮದಲ್ಲಿ ಹಿಂದಿನಿಂದಲೂ ವಿಶ್ವಕರ್ಮ ಸಮಾಜದವರು ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡುತ್ತಾ ಬಂದಿದ್ದು, ಇದೀಗ ಹಾಲುಮತ ಸಮಾಜದವರು ಇದುವರೆಗೆ ಮೃತರ ಅಂತ್ಯಕ್ರಿಯೆ ಮಾಡುವ ಸಮಯದಲ್ಲಿ ತಕರಾರು ತಂಟೆ ತೆಗೆದು ಸಾಕಷ್ಟು ಬಾರಿ ಅಂತ್ಯಕ್ರಿಯೆ ಸಮಯದಲ್ಲಿ ಅಡ್ಡಿಪಡಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಸರ್ಕಾರದಿಂದ ನಮ್ಮ ಸಮಾಜಕ್ಕೆ ಪ್ರತ್ಯೇಕ ಸ್ಮಶಾನ ಜಾಗ ನೀಡಿಲ್ಲ. ಜಾಗ ತೋರಿಸಿ ಮತ್ತು ಅಂತ್ಯ ಸಂಸ್ಕಾರಕ್ಕೆ ಕಟ್ಟೆ ಕಟ್ಟಿಸಿ ನೀರಿನ ಸೌಲಭ್ಯ ಕಲ್ಪಿಸಬೇಕು. ಕೂಡಲೇ ಸ್ಮಶಾನ ಕಾಮಗಾರಿ ಆರಂಭಿಸಬೇಕು. ಇಲ್ಲವಾದರೆ ಹಾಲುಮತ ಸಮಾಜದವರು ಬಹುಸಂಖ್ಯೆಯಲ್ಲಿ ಇರುವುದರಿಂದ ಅವರ ಜೊತೆಗೆ ವಾದ-ವಿವಾದ ಮಡುವುದು ವಿಶ್ವಕರ್ಮ ಸಮಾಜದವರಿಗೆ ಆಗುವುದಿಲ್ಲ. ಆದ್ದರಿಂದ ಸಮಾಜದವರ ಅಂತ್ಯ ಸಂಸ್ಕಾರಕ್ಕೆ ಸಶ್ಮಾನ ಜಾಗ ಒದಗಿಸಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಸಮಾಜದವರು ಮರಣ ಹೊಂದಿದರೆ ಕರಡಿ ಗ್ರಾಪಂ ಮುಂದೆಯೇ ಅಂತ್ಯಕ್ರಿಯೆ ಮಾಡುತ್ತೇವೆ ಎಂದು ಹೇಳಿದರು.

ವಿಶ್ವಕರ್ಮ ಸಮಾಜದ ಮುಖಂಡರಾದ ರಾಜು ಬಡಿಗೇರ, ಕೆ.ಎ. ಪತ್ತಾರ, ಮೌನೇಶ ಬಡಿಗೇರ, ಬಸವರಾಜ ಬಡಿಗೇರ, ಬಸಪ್ಪ ಕೋಳೂರ, ಓರಪ್ಪ ಬಡಿಗೇರ, ರುದ್ರಪ್ಪ ಬಡಿಗೇರ, ಎಸ್.ಕೆ. ಕೋಲೂರ, ಮೌನೇಶ ಕಮ್ಮಾರ, ಮೌನೇಶ ಪತ್ತಾರ, ಈರಪ್ಪ ಕಿನ್ನಾಳ, ಆದಪ್ಪ ಕಚಗಾರ, ವಿಜಯಕುಮಾರ ಪಾಟೀಲ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

15 ದಿನದ ಹಿಂದೆ ಮದುವೆ ಆಗಿದ್ದ ಜೋಡಿ ಭೀಕರ ಅಪಘಾತಕ್ಕೆ ಬಲಿ
ಶ್ರೀಮಂತರು ಗ್ಯಾರಂಟಿಯಿಂದ ದೂರ ಇರಲಿ: ಎಂ.ಬಿ.ಪಾಟೀಲ್‌