ಕೋಲಾರ ನಗರಕ್ಕೆ ಸೌಲಭ್ಯ ಕಲ್ಪಿಸಲು ಆಗ್ರಹ

KannadaprabhaNewsNetwork |  
Published : Aug 01, 2025, 12:00 AM IST
೩೧ಕೆಎಲ್‌ಆರ್-೭ಕರವೇ ಪ್ರವೀಣ್ ಶೆಟ್ಟಿ ಸಾರಥ್ಯದ ಜಿಲ್ಲಾ ಘಟಕದಿಂದ ಕೋಲಾರದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ನಗರಸಭೆ ಆಯುಕ್ತ ನವೀನ್‌ಚಂದ್ರರಿಗೆ ಮನವಿಸಲ್ಲಿಸಿದರು. | Kannada Prabha

ಸಾರಾಂಶ

ಜಿಲ್ಲಾ ಕೇಂದ್ರದಲ್ಲಿ ಸರಿಯಾಗಿ ಮೂಲಭೂತ ಸೌರ್ಕಯಗಳಿಲ್ಲ. ಕೋಲಾರಕ್ಕೆ ಬರುತ್ತಿರುವ ಯರಗೋಳ್ ಕುಡಿಯುವ ನೀರು ಸರಿಯಾಗಿ ಶುದ್ಧೀಕರಣವಾಗದ ಕಾರಣ ಕಪ್ಪು ಮಸಿಯಂತೆ ನೀರು ಬರುತ್ತಿದೆ. ಕೂಡಲೇ ಈ ನೀರನ್ನು ಮೂರು ಬಾರಿ ಶುದ್ಧೀಕರಣ ಮಾಡಿ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಕೊಡಬೇಕು.

ಕನ್ನಡಪ್ರಭ ವಾರ್ತೆ ಕೋಲಾರ ನಗರದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಕರವೇ ಪ್ರವೀಣ್ ಶೆಟ್ಟಿ ಸಾರಥ್ಯದ ಕರವೇ ಜಿಲ್ಲಾ ಘಟಕ ನಗರಸಭೆ ಆಯುಕ್ತ ನವೀನ್‌ಚಂದ್ರ ಅವರಿಗೆ ಮನವಿ ಸಲ್ಲಿಸಿತು. ಜಿಲ್ಲಾ ಕೇಂದ್ರದಲ್ಲಿ ಸರಿಯಾಗಿ ಮೂಲಭೂತ ಸೌರ್ಕಯಗಳಿಲ್ಲ. ಕೋಲಾರಕ್ಕೆ ಬರುತ್ತಿರುವ ಯರಗೋಳ್ ಕುಡಿಯುವ ನೀರು ಸರಿಯಾಗಿ ಶುದ್ಧೀಕರಣವಾಗದ ಕಾರಣ ಕಪ್ಪು ಮಸಿಯಂತೆ ನೀರು ಬರುತ್ತಿದೆ. ಕೂಡಲೇ ಈ ನೀರನ್ನು ಮೂರು ಬಾರಿ ಶುದ್ಧೀಕರಣ ಮಾಡಿ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಕೊಡಬೇಕು. ನಗರದ ಕೆಲವು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದರು.

ನಾಮಫಲಕದಲ್ಲಿ ಕನ್ನಡ ಇಲ್ಲ

ಕೋಲಾರದಲ್ಲಿ ಅಂಗಡಿ ಮತ್ತು ಕಾರ್ಖಾನೆಗಳು, ಖಾಸಗಿ ಶಾಲೆ, ಮಸೀದಿ, ಮದ್ರಾಸ ಹಾಗೂ ನರ್ಸಿಂಗ್ ಹೋಂಗಳಲ್ಲಿ ಹಾಗೂ ಎಲ್ಲಾ ವಹಿವಾಟಿನ ಮಳಿಗೆಗಳ ಮೇಲೆ ಕಡ್ಡಾಯವಾಗಿ ಕನ್ನಡ ನಾಮಫಲಕ ನವೆಂಬರ್ ಒಂದರೊಳಗೆ ಅಳವಡಿಸಬೇಕು. ಇಲ್ಲದ ಪಕ್ಷದಲ್ಲಿ ಕರವೇಯಿಂದ ಮಸಿ ಬಳಿಯುವ ಹೋರಾಟ ಹಮ್ಮಿಕೊಳ್ಳಾಗುವುದೆಂದು ಎಚ್ಚರಿಸಿದರು.ಉದ್ಯಾನದಲ್ಲಿ ದೀಪ ಅಳವಡಿಸ

ಅಂತರಗಂಗೆ ರಸ್ತೆಯಲ್ಲಿರುವ ಕುವೆಂಪು ಉದ್ಯಾನವನದಲ್ಲಿ ರಾಷ್ಟ್ರಕವಿ ಕುವೆಂಪು ಪುತ್ಥಳಿ ಹಾಗೂ ಹೊರನಟ ಡಾ.ರಾಜ್‌ಕುಮಾರ ಪುತ್ಥಳಿ ಬಳಿ ವಿದ್ಯುತ್ ದೀಪ ವ್ಯವಸ್ಥೆ ಇಲ್ಲದೇ ರಾತ್ರಿವೇಳೆ ಪಾರ್ಕಿನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಉದ್ಯಾನವನದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕು.ಕರವೇ ಜಿಲ್ಲಾಧ್ಯಕ್ಷ ಚಂಬೆರಾಜೇಶ್, ತಾಲೂಕು ಅಧ್ಯಕ್ಷ ದಿಂಬನಾಗರಾಜಗೌಡ, ಶೇಷಾದ್ರಿ ಶಾಸ್ತ್ರಿ, ನಲ್ಲಂಡಹಳ್ಳಿ ರಮೇಶ್, ಮಂಗಸಂದ್ರ ನಾಗೇಶ್, ಛತ್ರಕೋಡಿಹಳ್ಳಿ ರಮೇಶ್, ಎಸ್.ಎಂ.ಎಸ್. ಸಂತೋಷ್, ಲೋಕೇಶ್ ಅಗರ ಮುನಿಸ್ವಾಮಿ, ಪಾರ್ವತಮ್ಮ, ನಾಗವೇಣಿ, ಸೌಮ್ಯಗೌಡ, ಆರ್.ಕೆ.ಗೌಡ, ನಾಗರಾಜ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''