ಹೊಳಲ್ಕೆರೆ ತಾಲೂಕಿನ ಕೆರೆಗಳಿಗೆ ಭದ್ರೆ ನೀರು ಹರಿಸಲು ಒತ್ತಾಯ

KannadaprabhaNewsNetwork |  
Published : Sep 19, 2026, 01:30 AM IST
ಹೊಳಲ್ಕೆರೆ ತಾಲ್ಲೂಕಿನ ಕೆರೆಗಳಿಗೆ ಭದ್ರೆ ನೀರು ಹರಿಸುವಂತೆ ಹೋರಾಟಗಾರರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಹೊಳಲ್ಕೆರೆ ತಾಲೂಕಿನ ಕೆರೆಗಳಿಗೆ ಭದ್ರೆ ನೀರು ಹರಿಸುವಂತೆ ಹೋರಾಟಗಾರರು ಮನವಿ ಸಲ್ಲಿಸಿದರು.

ಭದ್ರಾ ಮೇಲ್ಡಂಡೆ ನೀರಾವರಿ ಹೋರಾಟ ಸಮಿತಿ ಧರಣಿ ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಭದ್ರಾ ಮೇಲ್ಡಂಡೆ ಯೋಜನೆಯಡಿ ಪ್ರಾಯೋಗಿಕವಾಗಿ ಹರಿಸುತ್ತಿರುವ ನೀರು ಚಿತ್ರದುರ್ಗ ಜಿಲ್ಲೆಗೆ ಕಾಲಿಟ್ಟು ೧೩ ದಿನಗಳು ಕಳೆದರೂ ಹೊಳಲ್ಕೆರೆ ತಾಲೂಕಿನ ೨೧ ಕೆರೆಗಳಿಗೆ ನೀರು ಬರುತ್ತಿಲ್ಲ. ಅದಕ್ಕಾಗಿ ಭದ್ರಾ ಮೇಲ್ಡಂಡೆ ನೀರಾವರಿ ಹೋರಾಟ ಸಮಿತಿ ಧರಣಿ ನಡೆಸುತ್ತಿದೆ.

ರಾಮಗಿರಿ ಕಾವಲು, ತಾಳಿಕಟ್ಟೆ, ರಂಗಾಪುರ, ಬಸಾಪುರ, ಆರ್.ನುಲೆನೂರು, ದುಮ್ಮಿ, ಹನುಮಲಿ, ಗುಂಡೇರಿ ಕೆರೆಗಳಿಗೆ ಅಲ್ಪ ಪ್ರಮಾಣದಲ್ಲಿ ನೀರು ಬರುತ್ತಿದೆ. ಬುಧವಾರ ಜಕ್ಕನಹಳ್ಳಿಯ ಬಳಿಯ ಚಾನಲ್‌ನ್ನು ರೈತರು ಒಡೆದಿರುವ ಕಾರಣ ಗಂಗಸಮುದ್ರಕ್ಕೆ ನೀರು ಹೋಗುತ್ತಿದೆ. ಆದರೆ ಇನ್ನೂ 21 ಕೆರೆಗಳಿಗೆ ಒಂದು ಹನಿ ನೀರು ಬಂದಿಲ್ಲ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಳಲ್ಕೆರೆ ಶಿವನಕೆರೆಯಿಂದ ತಾಳ್ಯ ಹೋಬಳಿಯ ಏಳು ಕೆರೆಗಳಿಗೆ ನೀರು ತುಂಬಿಸಬೇಕು. ಚಿಕ್ಕ ಯಗಟಿ ಬಳಿ ಕಾಮಗಾರಿ ಅವೈಜ್ಞಾನಿಕವಾಗಿದೆ. ಜಕ್ಕನಹಳ್ಳಿಯ ತೊಟ್ಟಿ ನಿರ್ಮಾಣ ಮಾಡಿರುವ ಗುತ್ತಿಗೆದಾರ ಹನುಂತಪ್ಪ, ಹೊಳಲ್ಕೆರೆ ತಾಲೂಕಿನ ಭದ್ರಾ ಮೇಲ್ದಂಡೆ ಎ.ಇ.ಇ ನಾಗರಾಜ್, ಎಂಜಿನಿಯರ್ ರಾಘವೇಂದ್ರ, ಗುರುಮೂರ್ತಿ 13 ದಿನ ಕಳೆದರೂ ಸರಿಪಡಿಸಲು ಆಗಿಲ್ಲ. ಹೀಗೆಯೇ ಮುಂದುವರೆದರೆ ತಾಲೂಕಿನ ಚಿಕ್ಕ ಗುಂಡಿ ತುಂಬಿಸಲು ಆಗುವುದಿಲ್ಲ. ಅಕ್ಕ ಪಕ್ಕದ ಗ್ರಾಮದ ನಡುವೆ ಸಂಘರ್ಷ ತಂದಿಟ್ಟು ಇಲಾಖೆಯವರು, ಜನಪ್ರತಿನಿಧಿಗಳು ತಮಾಷೆ ನೋಡುತ್ತಿದ್ದಾರೆ. ಪಕ್ಕದ ಹೊಸದುರ್ಗ, ಚಿತ್ರದುರ್ಗದಲ್ಲಿ ಕೆಲವು ಕೆರೆಗಳು ಕೋಡಿ ಬಿದ್ದಿವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಸೆ.24ರಂದು ಮುಖ್ಯಮಂತ್ರಿಗಳು ಚಿತ್ರದುರ್ಗಕ್ಕೆ ಬರುತ್ತಿದ್ದಾರೆ, ಏನಾದರೂ ತಾಂತ್ರಿಕ ಸಮಸ್ಯೆ ಇದ್ದರೆ ತಿಳಿಸಿ ಅವರ ಹತ್ತಿರ ಕೂಲಂಕುಷ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ನಾವು ಸಜ್ಜಾಗುತ್ತೇವೆ. ರೈತ ಬಾಂಧವರನ್ನೆಲ್ಲ ಅವರ ಜೊತೆ ವಿಶೇಷ ಚರ್ಚೆಗೆ ಬಿಡುತ್ತೇವೆ ಎಂದರು.

ಹೊಳಲ್ಕೆರೆ ತಾಲೂಕಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಬೇಕೆಂದು ಕೆರೆಗಳ ಗೇಟ್‌ಗಳ ಹತ್ತಿರ ಆರಕ್ಷಕ ಸಿಬ್ಬಂದಿಗಳನ್ನು ನೇಮಿಸಬೇಕೆಂದು ಸಮಸ್ತ ರೈತ ಬಾಂಧವರು ತಾಲೂಕು ದಂಡಾಧಿಕಾರಿಗಳು ಮತ್ತು ಭದ್ರಾ ಎಂಜಿನಿಯರ್ ನಾಗರಾಜ್ ರವರಿಗೆ ತಿಳಿಸಿದರು.

ಪ್ರತಿಭಟನೆಯಲ್ಲಿ ಹೊಳಲ್ಕೆರೆ ತಾಲೂಕಿನ ಪಟ್ಟಣ, ಹೊಳಲ್ಕೆರೆ ಕಸಬಾ, ತಾಳ್ಯ ಹೋಬಳಿ, ರಾಮಗಿರಿ, ಬಿ.ದುರ್ಗದ ಸಾವಿರಕ್ಕೂ ಹೆಚ್ಚು ರೈತರು ಸೇರಿ ನಗರಾಧ್ಯಕ್ಷ ಸಿದ್ದರಾಮಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎನ್.ಅಜಯ್, ತಾಲೂಕ ಅಧ್ಯಕ್ಷ ಶಿವಕುಮಾರ್, ಭಾರತೀಯ ಕಿಸಾನ್ ಸಂಘದ ತಾಲೂಕ ಅಧ್ಯಕ್ಷ ಸುರೇಶ್, ಚಿದಾನಂದ್,ರಾಜ್ಯ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ರಘು, ಕೆ,ಆರ್ ರಾಜಪ್ಪ, ಪರಮೇಶ್ವರಪ್ಪ, ಮೋಹನ್, ಯತೀಶ್, ಶಿವಕುಮಾರ್, ಶ್ರೀನಿವಾಸ್, ಸಂತೋಷ ತಾಲೂಕಿನ ಸಮಸ್ತ ರೈತ ಬಾಂಧವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುನಿದ ವರುಣ: ಸಂಕಷ್ಟಕ್ಕೆ ಸಿಲುಕಿದ ಅನ್ನದಾತರು
ಕ್ರಷರ್‌ ಮಾಲೀಕರ ಪ್ರತಿಭಟನಗೆ ರೈತಸಂಘ ವಿರೋಧ