ಸಂಡೂರು: ಪಟ್ಟಣದಲ್ಲಿಯ ಪ್ರಮುಖ ವೃತ್ತವೊಂದರಲ್ಲಿ ವಿಶ್ವಗುರು, ಸಾಂಸ್ಕೃತಿಕ ನಾಯಕ ಶ್ರೀಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ ಅನಾವರಣಗೊಳಿಸಿ, ಆ ವೃತ್ತಕ್ಕೆ ಬಸವೇಶ್ವರ ವೃತ್ತವೆಂದು ನಾಮಕರಣ ಮಾಡುವಂತೆ ಒತ್ತಾಯಿಸಿ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಶುಕ್ರವಾರ ತಾಲೂಕು ಕಚೇರಿಯಲ್ಲಿ ನಡೆದ ಶ್ರೀಬಸವೇಶ್ವರ ಜಯಂತಿ ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಸಭೆಯಲ್ಲಿ ಶ್ರೀಬಸವೇಶ್ವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲು ತೀರ್ಮಾನಿಸಲಾಯಿತು. ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಚಿತ್ರಿಕಿ ಸತೀಶ್‌ಕುಮಾರ್, ಪಿ. ರವಿಕುಮಾರ್, ಮೇಲುಸೀಮೆ ಶಂಕ್ರಪ್ಪ, ಹಗರಿ ಬಸವರಾಜಪ್ಪ, ನಾಗರಾಜ ಗುಡೆಕೋಟೆ, ಗಡಂಬ್ಲಿ ಚೆನ್ನಪ್ಪ, ಕಿನ್ನೂರೇಶ್ವರ, ಬಿ.ಜಿ. ಸಿದ್ದೇಶ್, ಜಿ. ವೀರೇಶ್, ಎಸ್.ವಿ. ಹಿರೇಮಠ, ಎಂ. ಚರಂತಯ್ಯ, ಎಚ್.ಎಂ. ಮಂಜುನಾಥ, ಶಿವಪ್ರಕಾಶ್, ಎ.ಎಂ. ಶರಣಯ್ಯ, ಅವಿನಾಶ್, ಎ. ಮಲ್ಲಪ್ಪ, ಬಿ.ಜಿ ಮಂಜುಳಾ ಮುಂತಾದವರು ಉಪಸ್ಥಿತರಿದ್ದರು.