ಅತ್ಯಾಚಾರಿಗಳನ್ನು ಗಲ್ಲಿಗೇರಿಸುವಂತೆ ಒತ್ತಾಯ

KannadaprabhaNewsNetwork |  
Published : Sep 12, 2024, 01:57 AM IST
ಸುರಪುರ ನಗರದಲ್ಲಿ ಟೋಕ್ರಿ ಕೋಲಿ ಸಮುದಾಯದ ಯುವತಿ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಮಂಗಳವಾರ ಅಖಿಲ ಕರ್ನಾಟಕ ಕೋಲಿ, ಕಬ್ಬಲಿಗ, ಅಂಬಿಗ, ಭೋಯಿ, ಬೆಸ್ತ ಬುಡಕಟ್ಟು ಹೋರಾಟ ಸಂಘದ ಸದಸ್ಯರು ಪತ್ರಿಭಟಿಸಿ ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

Demanding execution of rapists

- ಕೋಲಿ, ಕಬ್ಬಲಿಗ ಸಮುದಾಯದಿಂದ ಪ್ರತಿಭಟನಾ ಮೆರವಣಿಗೆ

------

ಕನ್ನಡಪ್ರಭ ವಾರ್ತೆ ಸುರಪುರ

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗ್ರಾಮವೊಂದರಲ್ಲಿ ಟೋಕ್ರಿ ಕೋಲಿ ಸಮುದಾಯದ ಯುವತಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಘಟನೆ ಖಂಡಿಸಿ ಅಖಿಲ ಕರ್ನಾಟಕ ಕೋಲಿ, ಕಬ್ಬಲಿಗ, ಅಂಬಿಗ, ಭೋಯಿ, ಬೆಸ್ತ ಬುಡಕಟ್ಟು ಹೋರಾಟ ಸಂಘದ ಸದಸ್ಯರು ಪತ್ರಿಭಟಿಸಿ ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ದುರುಳರನ್ನು ಬಂಧಿಸಿ ಗಲ್ಲಿಗೇರಿಸಬೇಕು. ಅತ್ಯಾಚಾರಿಗಳಿಗೆ ತಕ್ಕ ಪಾಠ ಕಲಿಸಲು ಆಂಧ್ರಪ್ರದೇಶದ ಮಾದರಿಯಲ್ಲೇ ಎನ್‌ಕೌಂಟರ್ ಮಾಡಲು ಸರ್ಕಾರ ಆದೇಶ ನೀಡಬೇಕು. ಯುವತಿಯ ಬಡ ಕುಟುಂಬಕ್ಕೆ 20 ಲಕ್ಷ ರು.ಗಳ ಪರಿಹಾರ ನೀಡಬೇಕು. ಮನೆಯಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಕುಟುಂಬಕ್ಕೆ ರಕ್ಷಣೆ ನೀಡಬೇಕು. ರಾಜ್ಯದಲ್ಲಿ ಇಂತಹ ಘಟನೆ ಮರುಕಳಿಸಿದಂತೆ ಎಚ್ಚರವಹಿಸಬೇಕು. ಇಲ್ಲದಿದ್ದರೆ, ಇಡೀ ರಾಜ್ಯದಲ್ಲಿರುವ ಕೋಲಿ, ಕಬ್ಬಲಿಗ, ಅಂಬಿಗ, ಭೋಯಿ, ಬೆಸ್ತ ಸಮುದಾಯದಿಂದ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ನಗರದ ಭೋವಿಗಲ್ಲಿಯ ಅಂಬಿಗರ ಚೌಡಯ್ಯ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಅತ್ಯಾಚಾರ ಘಟನೆ ಖಂಡಿಸಿ ಘೋಷಣೆ ಕೂಗಲಾಯಿತು. ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ ಗುರುಬಸಪ್ಪ ಪಾಟೀಲ್ ಅವರು ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಸ್ವೀಕರಿಸಿದರು.

ಸಂಘಟನೆಯ ದೇವೇಂದ್ರಪ್ಪಗೌಡ ಬಿ. ಮಾಲಿ ಪಾಟೀಲ್, ವೆಂಕಟರಡ್ಡಿ ಭೋವಿಗಲ್ಲಿ, ಮಾನಪ್ಪ ಸುಗೂರ, ಯಂಕಣ್ಣ ಕಟ್ಟಿಮನಿ, ಸಂತೋಷ ಬಾಗಲಿ, ಮರೆಪ್ಪ ದಾಯಿ, ಪಾರಪ್ಪ ಗುತ್ತೇದಾರ, ಹಣಮಂತ ಯಕ್ತಾಪುರ, ಮಲ್ಲು ವಿಷ್ಣು ಸೇನಾ, ಶಿವಪ್ಪ ಕಟ್ಟಿಮನಿ, ವಿಶ್ವಮಿತ್ರ ಕಟ್ಟಿಮನಿ, ಯಲ್ಲಪ್ಪ ರತ್ತಾಳ, ಶ್ರೀಕಾಂತ ರತ್ತಾಳ, ಮರೆಪ್ಪ ವೆಂಕಟಾಪುರ, ಲಕ್ಷ್ಮಣ ಹೆಗ್ಗಣದೊಡ್ಡಿ, ನಾಗರಡ್ಡಿ ರತ್ತಾಳ, ಆನಂದ ಮಾಚಗೊಂಡಾಳ ಸೇರಿದಂತೆ ಮತ್ತಿತರರಿದ್ದರು.

----

ಫೋಟೊ:

11ವೈಡಿಆರ್17: ಸುರಪುರ ನಗರದಲ್ಲಿ ಟೋಕ್ರಿ ಕೋಲಿ ಸಮುದಾಯದ ಯುವತಿ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಅಖಿಲ ಕರ್ನಾಟಕ ಕೋಲಿ, ಕಬ್ಬಲಿಗ, ಅಂಬಿಗ, ಭೋಯಿ, ಬೆಸ್ತ ಬುಡಕಟ್ಟು ಹೋರಾಟ ಸಂಘದ ಸದಸ್ಯರು ಪತ್ರಿಭಟಿಸಿ ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...