ಹಾವೇರಿ: ಬರಿದಾಗಿರುವ ಮಧ್ಯ ಕರ್ನಾಟಕ ಜಿಲ್ಲೆಗಳ ಜೀವನದಿ ತುಂಗಾಭದ್ರಾ ನದಿಗೆ ಭದ್ರಾ ಜಲಾಶಯದಿಂದ ನೀರು ಹರಿಸಿ ಬರಗಾಲದ ಈ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಹಾವೇರಿ ಜಿಲ್ಲಾ ಸಮಿತಿ ವತಿಯಿಂದ ತಹಸೀಲ್ದಾರರ ಮೂಲಕ ಬೃಹತ್ ನೀರಾವರಿ ಇಲಾಖೆ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಗೌರವಾಧ್ಯಕ್ಷ ಎಂ.ಕೆ. ತಿಮ್ಮಾಪುರ ಮಾತನಾಡಿ, ತುಂಗಭದ್ರಾ ನದಿಯು ಬರಿದಾಗಿರುವುದರಿಂದ ಮೀನುಗಳು ಸೇರಿದಂತೆ ಜಲಚರ ಪ್ರಾಣಿಗಳು ಸಾವನ್ನಪ್ಪುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ನದಿಯು ಖಾಲಿಯಾಗಿರುವುದರಿಂದ ಬೃಹತ್ ನೀರಾವರಿ ಇಲಾಖೆಯು ಈ ಕೂಡಲೇ ಸಮೀಕ್ಷೆ ನಡೆಸಿ ಡ್ಯಾಮ್ ಮುಖಾಂತರ ತುಂಗಾಭದ್ರಾ ನದಿಗೆ ಕೂಡಲೇ ನೀರು ಹರಿಸಬೇಕೆಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಸುಮಾ ಪುರದ, ಜಿಲ್ಲಾ ರೈತ ಘಟಕದ ಅಧ್ಯಕ್ಷ ಶರಣಪ್ಪ ಶಾಂತಗಿರಿ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಗೋಣೆಮ್ಮನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವಣ್ಣಯ್ಯ ಬಸಾಪುರ, ಮಂಜುನಾಥ ದಾನಪ್ಪನವರ, ವೀರೇಶ ಹಡಪದ, ಶಾಂತವೀರ ತಟ್ಟಿ, ಕರಬಸಪ್ಪ ಮೇಗಳಮನಿ, ನಿಂಗರಾಜ ಪರಸಣ್ಣನವರ, ಗಾಯತ್ರಿ ಕೋತಂಬ್ರಿ, ಕಮಲಾ ನೀಲನಗೌಡ್ರ, ರೇಣುಕಾ ದೊಪೆಣ್ಣನವರ, ದೀಪಾ ಹುಲ್ಲನವರ, ಮೀನಾಕ್ಷಿ ಭೋಸಳೆ ಸೇರಿದಂತೆ ಇತರರು ಇದ್ದರು.