ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಆವರಣದಲ್ಲಿ ಮಂಗಳವಾರ ಕುವೆಂಪು ವಿಶ್ವವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಿದ್ದ ಯುವ ಸಾಂಸ್ಕೃತಿಕ ವೈವಿಧ್ಯ, ಯುವಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ಪ್ರಸ್ತುತ ಅಸ್ತ್ರವಾಗಿ ಬಳಕೆ ಆಗುತ್ತಿದೆ. ಜಾತಿ, ಧರ್ಮವನ್ನು ಮೀರಿ ಪ್ರಜಾಪ್ರಭುತ್ವವನ್ನು ಒಪ್ಪಿಕೊಳ್ಳಬೇಕು. ಆಗ ಮಾತ್ರ ಅದನ್ನು ದಿವ್ಯಶಕ್ತಿಯಾಗಿ ಕಾಣಬಹುದು. ಇಲ್ಲವಾದರೆ, ವ್ಯವಸ್ಥೆಯಲ್ಲಿ ವ್ಯಂಗ್ಯಭಾವ ಮೂಡುತ್ತದೆ ಎಂದರು.ವಿದ್ಯಾರ್ಥಿಗಳಲ್ಲಿ ಜಾತಿ- ಧರ್ಮಗಳ ಕುರಿತ ಗೊಂದಲ ದೂರ ಮಾಡಲು ನಮ್ಮ ವ್ಯವಸ್ಥೆ ವಿಫಲವಾಗಿದೆ. ದೇಶದ ಪ್ರಗತಿಗೆ ಜಾತಿ, ಧರ್ಮದ ಹಿಡಿತದಿಂದ ಯುವಪೀಳಿಗೆ ಹೊರಬಾರದ ಹೊರತು, ಮಾದರಿಯ ವ್ಯಕ್ತಿ ಹಾಗೂ ರಾಜಕಾರಣಿಯನ್ನು ಆರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಎಂ.ಕೆ. ವೀಣಾ ಮಾತನಾಡಿ, ನಾವು ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಷ್ಟ್ರ ಕಲ್ಪನೆ ಹೊಂದಿದ್ದೇವೆ. ಆದರೆ, ಸೈದ್ಧಾಂತಿಕವಾಗಿ ಮಾತನಾಡುವಷ್ಟು ಮುಕ್ತ ಸಮಾನತೆ ನಾವು ಹೊಂದಿಲ್ಲ. ಇದರಿಂದ ಪ್ರಜಾಪ್ರಭುತ್ವಕ್ಕೆ ಹಿನ್ನಡೆ ಆಗಿದೆ ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜನಾ ಅಧಿಕಾರಿಗಳಾದ ಕುಂದನ್ ಬಸವರಾಜ್, ಶುಭಾ ಮರವಂತೆ, ವಿದ್ಯಾರ್ಥಿ ಕ್ಷೇಮಾಧಿಕಾರಿ ಎ.ಶಿವಮೂರ್ತಿ, ಎಂ.ಪರಶುರಾಮ್ ಇದ್ದರು.
- ಸ್ನೇಹಲ್ ಸುಧಾಕರ್ ಲೋಖಂಡೆ, ಸಿಇಒ, ಜಿಪಂ
ಕುವೆಂಪು ವಿಶ್ವವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಇಲ್ಲಿನ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಯುವ ಸಾಂಸ್ಕೃತಿಕ ವೈವಿಧ್ಯ, ಯುವ ಸಂವಾದ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ಅವರನ್ನು ಅಭಿನಂದಿಸಲಾಯಿತು.