ದೊಡ್ಡಬಳ್ಳಾಪುರ: ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ, ಹಾಡೋನಹಳ್ಳಿ ಸಂಯುಕ್ತ ಆಶ್ರಯದಲ್ಲಿ ತೊಗರಿಯಲ್ಲಿ ಹವಾಮಾನ ಸ್ಥಿತಿಸ್ಥಾಪಕ ಪದ್ಧತಿಗಳು ಪ್ರಾತ್ಯಕ್ಷಿಕೆಯ ಕುರಿತು ಕ್ಷೇತ್ರೋತ್ಸವವನ್ನು ತಾಲೂಕಿನ ಕೊಟ್ಟಿಗೆಮಾಚೇನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ದೊಡ್ಡಬಳ್ಳಾಪುರ: ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ, ಹಾಡೋನಹಳ್ಳಿ ಸಂಯುಕ್ತ ಆಶ್ರಯದಲ್ಲಿ ತೊಗರಿಯಲ್ಲಿ ಹವಾಮಾನ ಸ್ಥಿತಿಸ್ಥಾಪಕ ಪದ್ಧತಿಗಳು ಪ್ರಾತ್ಯಕ್ಷಿಕೆಯ ಕುರಿತು ಕ್ಷೇತ್ರೋತ್ಸವವನ್ನು ತಾಲೂಕಿನ ಕೊಟ್ಟಿಗೆಮಾಚೇನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರದ ಮುಖ್ಯಸ್ಥ ಡಾ. ಬಿ.ಜಿ.ಹನುಮಂತರಾಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಉಂಟಾಗುತ್ತಿರುವ ಹವಾಮಾನ ವೈಪರೀತ್ಯಕ್ಕೆ ತಕ್ಕಂತೆ ತೊಗರಿಯಲ್ಲಿ ಬಿ.ಆರ್.ಜಿ-3 ತಳಿಯ ಪ್ರಾತ್ಯಕ್ಷಿಕೆಯನ್ನು ಹತ್ತು ರೈತರ ತಾಕಿನಲ್ಲಿ ತೆಗೆದುಕೊಳ್ಳಲಾಗಿತ್ತು. ಬಿತ್ತನೆ ಸಮಯದಲ್ಲಿ ಸೊರಗು ಮತ್ತು ಬಂಜೆ ರೋಗಕ್ಕೆ ನಿರೋಧಕತೆ ಹೊಂದಿರುವ ಬಿ.ಆರ್.ಜಿ-3 ತಳಿಯನ್ನು ಬಳಸಿದ್ದು, ರೈಜೋ಼ಬಿಯಂ ಜೀವಾಣುವಿನಿಂದ ಬೀಜೋಪಚಾರ ಮಾಡಿ ಜೂನ್ ತಿಂಗಳಿನಲ್ಲಿ ಬಿತ್ತನೆ ಮಾಡಿ, 60 ದಿನಗಳ ನಂತರ ಕುಡಿ ಚಿವುಟುವುದು ಹಾಗೂ ಪಲ್ಸ್ ಮ್ಯಾಜಿಕ್ ಸಿಂಪರಣೆ ಮಾಡಿದ್ದರಿಂದ ಉತ್ತಮ ಕವಲುಗಳು ಮತ್ತು ಇಳುವರಿಯನ್ನು ಪಡೆಯಬಹುದು ಎಂದರು.
ಡಾ.ಸುಪ್ರಿಯಾ ಮಾತನಾಡಿ, ತೊಗರಿಯಲ್ಲಿ ಕಾಯಿಕೊರಕದ ಸಮಸ್ಯೆಗೆ ಮೋಹಕ ಬಲೆಗಳ ಬಳಕೆ ಹಾಗೂ ಸ್ಪೆನೋಸ್ಯಾಡ್ ಸಿಂಪರಣೆ ಮಾಡುವುದು ಹಾಗೂ ಕೊಯ್ಲೋತ್ತರ ಶೇಖರಣೆ ಮತ್ತು ಸಂಸ್ಕರಣೆಗಾಗಿ ಅಲ್ಯೂಮಿನಿಯಂ ಪಾಸ್ಫೇಡ್ ಬಳಕೆ ಮಾಡಬೇಕೆಂದು ಮಾಹಿತಿ ನೀಡಿದರು.
ಡಾ. ವೈ.ಎಂ.ಗೋಪಾಲ್ ಮಾತನಾಡಿ, ರೈತರು ನೂತನ ತಾಂತ್ರಿಕತೆಗಳ ಬಗ್ಗೆ ಮಾಹಿತಿ ಪಡೆದು ಕ್ಷೇತ್ರದಲ್ಲಿ ಅಳವಡಿಸಿಕೊಂಡಾಗ ಉತ್ಪಾದಕತೆ ಹೆಚ್ಚುವುದರ ಜೊತೆಗೆ ಬೇಸಾಯದ ಖರ್ಚನ್ನೂ ಸಹ ಕಡಿಮೆ ಮಾಡಬಹುದೆಂದು ತಿಳಿಸಿದರು.
22ಕೆಡಿಬಿಪಿ2- ದೊಡ್ಡಬಳ್ಳಾಪುರ ತಾಲೂಕಿನ ಕೊಟ್ಟಿಗೆಮಾಚೇನಹಳ್ಳಿಯಲ್ಲಿ ತೊಗರಿ ಬೆಳೆ ಪ್ರಾತ್ಯಕ್ಷಿಕೆ ಕ್ಷೇತ್ರೋತ್ಸವ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.