ಕನ್ನಡಪ್ರಭ ವಾರ್ತೆ ಉಳ್ಳಾಲ
ಬ್ಯಾರೀಸ್ ಗ್ರೂಪ್‌ನ ಕನಸಿನ ಯೋಜನೆಯಂತೆ ನಿರ್ಮಾಣಗೊಂಡಿರುವ ನೂತನ ವೈಶಿಷ್ಟ್ಯಪೂರ್ಣ ಅಪಾರ್ಟ್‌ಮೆಂಟ್, ಶಾಪಿಂಗ್ ಮಾಲ್, ೪ ಪರದೆಗಳ ಮಲ್ಟಿಪ್ಲೆಕ್ಸ್ ಥಿಯೇಟರ್, ಫುಡ್ ಕೋರ್ಟ್ ಸೇರಿದಂತೆ ವಿವಿಧ ರೀಟೈಲ್ ಮಳಿಗೆಗಳನ್ನು ಒಳಗೊಂಡಿರುವ ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ಉದ್ಘಾಟನೆಯು ಶನಿವಾರ ನಡೆಯಿತು.ಬ್ಯಾರಿಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮಹಮ್ಮದ್ ಬ್ಯಾರಿ ಮಾತನಾಡಿ, ಶಿವಮೊಗ್ಗದ ‘ಬ್ಯಾರೀಸ್ ಸಿಟಿ ಸೆಂಟರ್’ ಮಾಲ್‌ನಲ್ಲಿ ಸಾಧಿಸಿರುವ ಅಪೂರ್ವ ಯಶಸ್ಸಿನ ನಂತರ ದೇರಳಕಟ್ಟೆಯಲ್ಲೂ ಇಂಥದ್ದೇ ಮಾಲ್ ಸ್ಥಾಪಿಸುವ ಕನಸು ಇತ್ತು. ಒಂದೇ ಕಡೆಯಲ್ಲಿ ಎಲ್ಲವೂ ಲಭ್ಯವಾಗಬೇಕು ಅನ್ನುವ ದೃಷ್ಟಿಕೋನದಿಂದ ಅತ್ಯಾಧುನಿಕ ವ್ಯವಸ್ಥೆಯುಳ್ಳ 320 ಅಧಿಕ ಪ್ಲಾಟ್‌ಗಳು,ನೂತನ ಫುಡ್ ಕೋರ್ಟ್, ಜೊತೆಗೆ ಇಂಟರಾಕ್ಟಿವ್ ಆಟಗಳು, 4 ಲೇನ್ ಬೌಲಿಂಗ್ ಅಲೆ, ದೊಡ್ಡ ಮಟ್ಟದ ಕೈಮಿಂಗ್ ವಾಲ್, ಬಂಪರ್ ಕಾರುಗಳು, ಇಂಡೋರ್ ಕ್ರಿಕೆಟ್ ಮತ್ತು ಮಕ್ಕಳಿಗಾಗಿ ಸಾಫ್ಟ್ ವೇ ಏರಿಯಾ, ನಾಲ್ಕು ಪರದೆಯ ಮಲ್ಟಿಪ್ಲೆಕ್ಸ್, ಹೀಗೆ ಎಲ್ಲವೂ ಒಂದೆ ಜಾಗದಲ್ಲಿ ಸಿಗಬೇಕು ಎಂಬ ಕಲ್ಪನೆಯ ಕನಸಿನ ಯೋಜನೆ ಇದಾಗಿದೆ ಎಂದರು.ಬ್ರ್ಯಾಂಡ್‌ಗೆ ಹೆಚ್ಚಿನ ಮಹತ್ವವನ್ನು ನೀಡುವ ದೃಷ್ಟಿಯಿಂದ ಇಲ್ಲಿಯೂ ಕೂಡ ನ್ಯಾಷನಲ್ ಹಾಗೂ ಇಂಟರ್ ನ್ಯಾಷನಲ್ ಗುಣಮಟ್ಟದ ಬ್ರ್ಯಾಂಡ್ ಕಾಣಸಿಗಬಹುದು. ಹಾಗೂ ಈ ಯೋಜನೆಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.ಯೆನೆಪೋಯ ಗ್ರೂಪ್ ನಿರ್ದೇಶಕ ಯೆನೆಪೋಯ ಜಾವೇದ್ ಫುಡ್ ಕೋರ್ಟ್ ಉದ್ಘಾಟಿಸಿ, ನಗರದ ಕೇಂದ್ರ ಬಿಂದುವಾಗಿರುವ ದೇರಳಕಟ್ಟೆಯಲ್ಲಿ ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ಉದ್ಘಾಟನೆಗೊಳ್ಳುವುದರ ಮೂಲಕ ಸಯ್ಯದ್ ಮಹಮ್ಮದ್ ಬ್ಯಾರಿ ಅವರ ಕನಸು ನನಸಾಗಿದೆ ಎಂದರು.ಭಾರತ್ ಬೀಡಿ ನಿರ್ದೇಶಕ ಆನಂದ್ ಜಿ. ಪೈ ಮಲ್ಟಿಪ್ಲೆಕ್ಸ್ ಥಿಯೇಟರ್ ಉದ್ಘಾಟಿಸಿ, ಇಂದಿನ ಯುವ ಸಮುದಾಯಕ್ಕೆ ಪೂರಕವಾಗಿ ಸೌಲಭ್ಯಗಳಿರುವ ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ಯಶ್ಸಸ್ಸಾಗಿ ಮುಂದುವರಿಯಲಿ ಎಂದರು.ಫಾದರ್ ಮುಲ್ಲರ್ಸ್ ಆಸ್ಪತ್ರೆಯ ನಿರ್ದೇಶಕ ಫಾಸ್ಟಿಲ್ ಲೋಬೊ ಫೋರ್ ಲೇನ್ ಬೌಲಿಂಗ್ ಅಲೆ ಉದ್ಘಾಟಿಸಿ ಮಾತನಾಡಿ,ಉತ್ತಮವಾದ ಕೇಂದ್ರ ಪ್ರದೇಶದಲ್ಲಿ ಈ ಕಟ್ಟಡ ನಿರ್ಮಾಣಗೊಂಡಿದ್ದು, ಕುಟುಂಬದೊಂದಿಗೆ ಸಮಯವನ್ನು ಕಳೆಯುವುದಕ್ಕೆ ಉತ್ತಮವಾದ ವಾತಾವರಣವಾಗಿದೆ ಎಂದರು.ಮಾಜಿ ಮ್ಯಾನೆಂಜಿಂಗ್ ಡೈರೆಕ್ಟರ್ ರೋಹಿತ್ ಭಟ್ ವೀಡಿಯೋ ಗೇಮ್ಸ್ ಉದ್ಘಾಟಿಸಿ, ಮಂಗಳೂರು ಇಂದು ಆಧುನಿಕತೆಗೆ ಪೂರಕವಾಗಿ ಬೆಳೆಯುತ್ತಿದ್ದು, ಅದರಲ್ಲೂ ದೇರಳಕಟ್ಟೆಯಲ್ಲಿ ಇಂತಹ ಪ್ರಾಜೆಕ್ಟ್ ಆರಂಭಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.ಸಾಪ್ಟ್ ಪ್ಲೇಯನ್ನು ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮಹಮ್ಮದ್ ಬ್ಯಾರಿ ಉದ್ಘಾಟಿಸಿದರು. ಉದ್ಯಮಿ ಸಿದ್ದೀಕ್ ಹಾಜಿ ಡ್ಯಾಶಿಂಗ್ ಕಾರ್ ಗೇಮ್ಸ್, ರಾಕ್ ಕ್ಲೈಮಿಂಗ್ ಗೋಡೆಯನ್ನು ಉದ್ಯಮಿ ಮಹಮ್ಮದ್ ಕುಂಞಿ, ಟಾಯ್ ಟ್ರೈನನ್ನು ಬ್ಯಾರೀಸ್ ಗ್ರೂಪ್ ಟ್ರಸ್ಟಿ ಸಿದ್ದೀಕ್ ಬ್ಯಾರಿ ಹಾಗೂ ವರ್ಲ್ಡ್ ಫೈರ್ ಫೈಟರ್ಸ್ ಗೇಮ್‌ನ ಚಿನ್ನದ ಪದಕ ವಿಜೇತ ಅಶ್ವಿನ್ ಸನಿಲ್ ಅವರು ಕ್ರಿಕೆಟ್ ಗೇಮ್ಸ್ ಉದ್ಘಾಟಿಸಿದರು.ಟ್ರಸ್ಟಿಗಳಾದ ಮಹಮ್ಮದ್ ಅಶ್ರಫ್ ಬ್ಯಾರಿ, ಮಝರ್ ಸಯ್ಯದ್ ಬ್ಯಾರಿ, ಅಬುಲ್ ಹಸನ್ ಬ್ಯಾರಿ, ಜಮೀನು ಮಾಲಕರಾದ ಮಹಮ್ಮದ್ ಹನೀಫ್, ಇಂಟೀರಿಯರ್ ಮತ್ತು ಫಿಟ್ ಔಟ್ಸ್‌ನ ಸೀನಿಯರ್ ಮ್ಯಾನೇಜರ್ ಕೋಡಿ ಮೊಹಮ್ಮದ್ ಇಕ್ಬಾಲ್, ಮಾರ್ಕೆಟಿಂಗ್ ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ಪ್ರಫುಲ್ಲಾ ಪುಷ್ಪರಾಜ್, ಪಬ್ಲಿಕ್ ರಿಲೇಷನ್ಸ್ ಆಫೀಸರ್ ಬಾಬು ನಯನಾರ್ ಉಪಸ್ಥಿತರಿದ್ದರು.ಸಂಸ್ಥೆಯ ರಿಟೈಲ್ ಹೆಡ್ ಕೆ.ನಂದಕುಮಾರ್ ವಂದಿಸಿದರು.ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಜಾಯ್ಸನ್ ಮಿರಾಂದ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಆಕರ್ಷಣೆಯ ಕೇಂದ್ರ:೪ ಪರದೆಗಳ ಮಲ್ಟಿಪ್ಲೆಕ್ಸ್ ಥಿಯೇಟರ್, ಫುಡ್ ಕೋರ್ಟ್ ಹಾಗೂ ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಇರುವ ವಿವಿಧ ರೀತಿಯ ಗೇಮ್ಸ್ ಇಲ್ಲಿನ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಉದ್ಘಾಟನೆಯ ದಿನ ಶನಿವಾರ ಸಾರ್ವಜನಿಕರಿಗೆ ಗೇಮ್ಸ್ ಸಂಪೂರ್ಣ ಉಚಿತ ಅವಕಾಶ ನೀಡಲಾಗಿತ್ತು.