ಕರ್ತವ್ಯ ಲೋಪ: ತಹಸೀಲ್ದಾರ್ ಅರುಂಧತಿ ಅಮಾನತು

KannadaprabhaNewsNetwork | Published : Dec 31, 2023 1:30 AM

ಸಾರಾಂಶ

ದಾಬಸ್‌ಪೇಟೆ: ನೆಲಮಂಗಲ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಅರುಂಧತಿ ಅವರನ್ನು ಅಧಿಕಾರ ದುರುಪಯೋಗ, ಕರ್ತವ್ಯ ಲೋಪದ ಆಧಾರದ ಮೇಲೆ ಅಮಾನತುಗೊಳಿಸಿ ಸರ್ಕಾರದ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಮುಖ್ತಾರ್‌ ಪಾಷಾ ಆದೇಶ ಹೊರಡಿಸಿದ್ದಾರೆ.

ದಾಬಸ್‌ಪೇಟೆ: ನೆಲಮಂಗಲ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಅರುಂಧತಿ ಅವರನ್ನು ಅಧಿಕಾರ ದುರುಪಯೋಗ, ಕರ್ತವ್ಯ ಲೋಪದ ಆಧಾರದ ಮೇಲೆ ಅಮಾನತುಗೊಳಿಸಿ ಸರ್ಕಾರದ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಮುಖ್ತಾರ್‌ ಪಾಷಾ ಆದೇಶ ಹೊರಡಿಸಿದ್ದಾರೆ.

ನೆಲಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 94(ಸಿ) ಅಡಿ ಅನರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿ ಅಧಿಕಾರ ದುರ್ಬಳಸಿಕೊಂದ್ದಾರೆಂದು ಶಾಸಕ ಶ್ರೀನಿವಾಸ್ ಅವರು ತಹಸೀಲ್ದಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಹಾಗೂ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಹಂಚಿಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ಸಂಬಂಧಪಟ್ಟವರು ತಹಸೀಲ್ದಾರ್ ವಿರುದ್ದ ತನಿಖೆ ಮಾಡುವಂತೆ ಅಪರ ಪ್ರಾದೇಶಿಕ ಆಯುಕ್ತರಿಗೆ ತನಿಖಾಧಿಕಾರಿಯನ್ನಾಗಿ ನೇಮಿಸಿ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ನಿರ್ದೇಶಿಸಿತ್ತು. ತಹಸೀಲ್ದಾರ್ ಕೆ.ಆರುಂಧತಿ ಅವರ ಕರ್ತವ್ಯ ಲೋಪದ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಆ ವರದಿಯನ್ನಾಧರಿಸಿ ಸರ್ಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಮುಖ್ತಾರ್‌ ಪಾಷಾ ಅವರು ತಹಸೀಲ್ದಾರ್ ಅರುಂಧತಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಬಾಕ್ಸ್‌..............ಎಚ್.ಆರ್ ಅಮೃತ್‌ ಆತ್ರೇಶ್ ನೆಲಮಂಗಲ ತಹಸೀಲ್ದಾರ್‌ದಾಬಸ್‌ಪೇಟೆ: ಬಿಎಂಆರ್‌ಡಿಎಯಲ್ಲಿ ಗ್ರೇಡ್ 2 ತಹಸೀಲ್ದಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಎಚ್.ಆರ್ ಅಮೃತ್ ಆತ್ರೇಶ್‌ ಅವರನ್ನು ನೆಲಮಂಗಲ ಗ್ರೇಡ್ 1 ತಹಸೀಲ್ದಾರರಾಗಿ ನೇಮಕ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಮುಖ್ತಾರ್ ಪಾಷಾ ಆದೇಶ ಮಾಡಿದ್ದಾರೆ. ಈ ಹಿಂದೆ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರುಂಧತಿ ಅವರ ಮೇಲೆ ಅಕ್ರಮ ಹಕ್ಕುಪತ್ರ ವಿತರಣೆ, ಕರ್ತವ್ಯಲೋಪದಿಂದ ಅಮಾನತು ಮಾಡಲಾಗಿದೆ. ಅವರ ಸ್ಥಾನಕ್ಕೆ ನೂತನ ತಹಸೀಲ್ದಾರರನ್ನು ನೇಮಕ ಮಾಡಲಾಗಿದೆ.ಪೋಟೋ 10 : ಅಮಾನತ್ತಾದ ತಹಸೀಲ್ದಾರ್ ಅರುಂಧತಿ

ಪೋಟೋ 11 : ಅಮಾನತ್ತಾಗಿರುವ ಆದೇಶ ಪ್ರತಿ.

Share this article