ಬಸವಣ್ಣನವರ ಬಗ್ಗೆ ಅವಹೇಳನ: ಗಜೇಂದ್ರಗಡದಲ್ಲಿ ಪ್ರತಿಭಟನೆ

KannadaprabhaNewsNetwork |  
Published : Nov 25, 2026, 02:15 AM IST
ಗಜೇಂದ್ರಗಡ ಕಾಲಕಾಲೇಶ್ವರ ವೃತ್ತದಲ್ಲಿ ನಡೆದ ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಲೇಖಕ ರವಿ ಹಂಜ್ ಬಂಧಿಸಿ, ಬಸವಮಂಟಪ ಕೃತಿ ಶಾಶ್ವತವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿ ಜಾಗತಿಕ ಲಿಂಗಾಯತ ಮಹಸಭಾದ ತಾಲೂಕು ಘಟಕದಿಂದ ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಲೇಖಕ ರವಿ ಹಂಜ್ ಬಂಧಿಸಿ, ಬಸವಮಂಟಪ ಕೃತಿ ಶಾಶ್ವತವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಜಾಗತಿಕ ಲಿಂಗಾಯತ ಮಹಸಭಾದ ತಾಲೂಕು ಘಟಕದಿಂದ ಆಕ್ರೋಶ

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಲೇಖಕ ರವಿ ಹಂಜ್ ಬಂಧಿಸಿ, ಬಸವಮಂಟಪ ಕೃತಿ ಶಾಶ್ವತವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಶರಣ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಬಸವರಾಜ ಕೊಟಗಿ ಮಾತನಾಡಿ, ಅನುಭವ ಮಂಟಪವನ್ನು ಸ್ಥಾಪಿಸಿ ಎಲ್ಲ ಜಾತಿ, ವರ್ಗದ ಜನರು ಸೇರಿ ಸಾಮಾಜಿಕ ವಿಷಯಗಳನ್ನು ಚರ್ಚಿಸಿ ಶರಣರು ಸಮಾಜ ಸುಧಾರಣೆಗೆ ಶ್ರಮಿಸಿದ್ದರು. ಬಸವಣ್ಣನವರ ಕುರಿತು ಅವಹೇಳನ ಮಾಡುವವರ ಹಾಗೂ ಪ್ರೋತ್ಸಾಹಿಸುವ ದಿಷ್ಟ ಶಕ್ತಿಗಳನ್ನು ಬಸವಾಭಿಮಾನಿಗಳು ಎಂದಿಗೂ ಸಹ ಸಹಿಸುವುದಿಲ್ಲ ಎಂದು ಹೇಳಿದರು.

೧೨ನೇ ಶತಮಾನದಲ್ಲಿ ಜಗತ್ತಿನಲ್ಲಿ ಮೊದಲ ಸಂಸತ್ತು ಎಂದು ಕರೆಯುವ ಅನುಭವ ಮಂಟಪವನ್ನು ಸ್ಥಾಪಿಸಿ ಎಲ್ಲ ಜಾತಿ, ವರ್ಗದ ಜನರು ಸೇರಿ ಸಾಮಾಜಿಕ ವಿಷಯಗಳನ್ನು ಚರ್ಚಿಸಿ ಸಮಾಜ ಸುಧಾರಣೆಗೆ ಶ್ರಮಿಸಿದ್ದರು. ಅಂತಹ ಮಹಾನ್ ನಾಯಕನ ವ್ಯಕ್ತಿತ್ವಕ್ಕೆ ವಿಕೃತ ಮನಸ್ಥಿತಿಯಿಂದ ಮಸಿ ಬಳಿಯಲು ಮುಂದಾದರೂ ಸಹ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ವಿರಕ್ತ ಮಠಾಧೀಶರು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ. ಆದರೆ ಇಂತಹ ಘಟನೆಗಳಲ್ಲಿ ಭಾಗಿಯಾಗುವವರ ಹಾಗೂ ಪ್ರೋತ್ಸಾಹಿಸುವ ದುಷ್ಟಶಕ್ತಿಗಳನ್ನು ಬಸವಾಭಿಮಾನಿಗಳು ಎಂದಿಗೂ ಸಹ ಸಹಿಸುವುದಿಲ್ಲ. ಹೀಗಾಗಿ ಸರ್ಕಾರ ಬಸವಣ್ಣನವರ ಹೆಸರನ್ನು ಕೆಡಸಲು ಮುಂದಾದ ದುಷ್ಕರ್ಮಿಗಳಿಗೆ ತಕ್ಕಪಾಠ ಕಲಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಬಳಿಕ ತಹಸೀಲ್ದಾರ್ ಕಚೇರಿ ಮೂಲಕ ಸಿಎಂಗೆ ಮನವಿ ನೀಡಲಾಯಿತು.

ಜಾಗತಿಕ ಜಾಗತಿಕ ಲಿಂಗಾಯತ ಮಹಸಭಾದ ತಾಲೂಕು ಘಟಕದ ಜಿ.ಸಿ. ಓದುಸುಮಠ, ಬಸವರಾಜ ಅಂಗಡಿ, ಎ.ಎಸ್. ರೋಣದ, ಎಂ.ಎಸ್. ಹಡಪದ, ಬಸವರಾಜ ಹೂಗಾರ, ಯು.ಆರ್. ಚನ್ನಮ್ಮನವರ, ಕೆ.ಎಸ್. ಪತಂಗರಾಯ, ಕಳಕಯ್ಯ ಸಾಲಿಮಠ, ರವಿಕುಮಾರ ಹಾಸಿಗಲ್, ಮಂಜುನಾಥ ಹೂಗಾರ, ರವೀಂದ್ರ ಗಡೇದವರ, ಶರಣು ಪೂಜಾರ, ಉಮೇಶ ಚಿನ್ನೂರ, ನೀಲಪ್ಪ ಗುಡಿಮನಿ, ಬಾಲು ರಾಠೋಡ, ಶಶಿಧರ ಹೂಗಾರ, ಬಿ.ಸಿ. ಗೌರಿಮಠ, ಎಂ.ಬಿ. ಸೋಂಪುರ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಜ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ
ಅಂತೂ ಸುಂಕಸಾಳದ 34 ಮಕ್ಕಳಿಗೆ ಸಿಕ್ಕಿತು ಸುರಕ್ಷಿತ ನೆಲೆ!