ಮೂಡಿಗೆರೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶ್ರೀನಿವಾಸ್‌ರೆಡ್ಡಿಗೆ ಮನವಿ ಸಲ್ಲಿಕೆ
ಕನ್ನಡಪ್ರಭ ವಾರ್ತೆ, ಮೂಡಿಗೆರೆಸಾಮಾಜಿಕ ಜಾಲತಾಣದಲ್ಲಿ ಅಂಬೇಡ್ಕರ್ ಹಾಗೂ ದಲಿತ ಸಂಘಟನೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ವ್ಯಕ್ತಿಯ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭೀಮಾ ಕೋರೇಗಾವ್ ಆಚರಣಾ ಸಮಿತಿ ಮುಖಂಡರು ಮೂಡಿಗೆರೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶ್ರೀನಿವಾಸ್‌ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ಆಚರಣಾ ಸಮಿತಿ ಅಧ್ಯಕ್ಷ ಕೆ.ಇ.ಸುಂದ್ರೇಶ್, ಪೇಸ್ ಬುಕ್‌ನಲ್ಲಿ ಪ್ರವೀಣ್ ಮದ್ದಡ್ಕ ಎಂಬುವವರು ನೀಲಿ ಶಾಲು ಧರಿಸುವ ದಲಿತ ಸಂಘಟನೆಗಳು ಅಪ್ರಾಮಾಣಿಕರು ಹಾಗೂ ಅಂಬೇಡ್ಕರ್ ಅವಮಾನಿಸುವ ರೀತಿ ಹೇಳಿಕೆ ನೀಡಿ ಜಾತಿನಿಂದನೆ ಮಾಡಿದ್ದಾರೆ ಎಂದು ಹೇಳಿದರು.ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಲು ಸಂವಿಧಾನ ರಚಿಸಿರುವ ಅಂಬೇಡ್ಕರ್ ಬಗ್ಗೆ ಜಾಲತಾಣದಲ್ಲಿ ಇಲ್ಲಸಲ್ಲದ ಹೇಳಿಕೆ ನೀಡಿ ಅವಮಾನಿಸಲಾಗಿದೆ. ಸರ್ವರಿಗೂ ಸಮಾನತೆ ಸಾರುವ ಹಾಗೂ ಸಮ ಬಾಳು ಕಲ್ಪಿಸಿದ ಅವರಿಗೆ ಕೀಳುಮಟ್ಟದ ಪದ ಬಳಕೆ ಮಾಡಿರುವುದು ತೀವ್ರವಾಗಿ ಖಂಡಿಸುತ್ತೇವೆ ಎಂದರು. ಡಾ. ಬಿ.ಆರ್.ಅಂಬೇಡ್ಕರ್ ಅವರ ಸಿದ್ದಾಂತ ಮತ್ತು ಸಂವಿಧಾನ ಪರ ಪ್ರಾಮಾಣಿಕತೆಯಿಂದ ನೀಲಿ ಶಾಲು ಧರಿಸಿ ತತ್ವ ಸಿದ್ದಾಂತಗಳನ್ನು ಕಾಪಾಡುತ್ತಿರುವ ಪ್ರತಿ ದಲಿತ ಸಂಘಟನೆಗಳಿಗೂ ಜಾಲತಾಣದಲ್ಲಿ ಬೇಕಾಬಿಟ್ಟಿ ಹೇಳಿಕೆ ಸಹಿಸುವುದಿಲ್ಲ. ಕೂಡಲೇ ಪ್ರವೀಣ್ ಮದ್ದಡ್ಕ ವಿರುದ್ಧ ಕಾನೂನು ಕ್ರಮ ವಹಿಸಬೇಕು ಎಂದು ತಿಳಿಸಿದರು.ಸಮಾಜದಲ್ಲಿ ಶಾಂತಿ, ಸೌಹಾರ್ದತೆಯಿಂದ ಬಾಳುತ್ತಿರುವ ಜನಾಂಗಕ್ಕೆ ಈ ರೀತಿ ಹೇಳಿಕೆ ನೀಡಿ ಹತ್ತಿಕ್ಕುವ ಪ್ರಯತ್ನ ನಡೆಸುವವರ ವಿರುದ್ಧ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಮುಂದಾಗಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಗಿರೀಶ್, ಆಚರಣಾ ಸಮಿತಿ ಮುಖಂಡರಾದ ಹರೀಶ್, ಚಂದನ್, ಭಾನು ಪ್ರಕಾಶ್, ಯೋಗೀಶ್, ಮಂಜುನಾಥ್, ಕಿರಣ್, ಶಿವಪ್ರಸಾದ್, ಮಂಜುನಾಥ್, ತೀರ್ಥೇಶ್, ವಿಶ್ವನಾಥ್, ದೇವರಾಜ್, ರುದ್ರೇಶ್, ಪ್ರದೀಪ್ ಹಾಜರಿದ್ದರು.25 ಕೆಸಿಕೆಎಂ 2ಸಾಮಾಜಿಕ ಜಾಲತಾಣದಲ್ಲಿ ಅಂಬೇಡ್ಕರ್ ಹಾಗೂ ದಲಿತ ಸಂಘಟನೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ವ್ಯಕ್ತಿಯ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭೀಮಾ ಕೋರೇಗಾವ್ ಆಚರಣಾ ಸಮಿತಿ ಮುಖಂಡರು ಮೂಡಿಗೆರೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶ್ರೀನಿವಾಸ್‌ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.