ಮನು ಕುಲದ ಒಳಿತಿಗೆ ದುಡಿದ ಯೋಗಿ ನಾರೇಯಣರ ಯತೀಂದ್ರರು: ಮಂಜುನಾಥ್

KannadaprabhaNewsNetwork | Published : Mar 26, 2024 1:00 AM

ಸಾರಾಂಶ

ಕೈವಾರ ತಾತಯ್ಯ ಎಂದೇ ಪ್ರಸಿದ್ಧವಾಗಿರುವ ಶ್ರೀ ಯೋಗಿನಾರೇಯಣ ಯತ್ರೀಂದ್ರರು ಪ್ರಾಪಂಚಿಕ ಆಗು-ಹೋಗುಗಳನ್ನು ಅರಿತು, ಮನು ಕುಲದ ಒಳಿತಿಗಾಗಿ ಅಪಾರ ಕೂಡುಗೆ ನೀಡಿದ್ದಾರೆ. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ, ಅಸಮಾನತೆ ಹೋಗಲಾಡಿಸಲು ಕೈಗೊಂಡ ಸಾಮಾಜಿಕ ಸುಧಾರಣೆ ಇಂದಿಗೂ ಮಾದರಿ ಎಂದು ತಹಸೀಲ್ದಾರ್ ಮಂಜುನಾಥ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಕೈವಾರ ತಾತಯ್ಯ ಎಂದೇ ಪ್ರಸಿದ್ಧವಾಗಿರುವ ಶ್ರೀ ಯೋಗಿನಾರೇಯಣ ಯತ್ರೀಂದ್ರರು ಪ್ರಾಪಂಚಿಕ ಆಗು-ಹೋಗುಗಳನ್ನು ಅರಿತು, ಮನು ಕುಲದ ಒಳಿತಿಗಾಗಿ ಅಪಾರ ಕೂಡುಗೆ ನೀಡಿದ್ದಾರೆ. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ, ಅಸಮಾನತೆ ಹೋಗಲಾಡಿಸಲು ಕೈಗೊಂಡ ಸಾಮಾಜಿಕ ಸುಧಾರಣೆ ಇಂದಿಗೂ ಮಾದರಿ ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.

ಅವರು ಕೊರಟಗೆರೆ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಬಲಿಜ ಸಂಘ ಸಂಯುಕ್ತಾಶ್ರ ಯದಲ್ಲಿ ಏರ್ಪಡಿಸಿದ್ದ ಕೈವಾರ ಶ್ರೀ ಯೋಗಿನಾರೇಯಣ ಯತೀಂದ್ರರ 298 ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. ಅಲೌಕಿಕ ವಾದವನ್ನು ಅಳವಡಿಸಿಕೊಂಡು ಜನರಿಗೆ ಸನ್ಮಾರ್ಗ ತೋರಿಸಿದವರು. ಅವರ ತತ್ವಗಳು ಮುಂದಿನ ಪೀಳಿಗೆಗೆ ತಲುಪಿಸಬೇಕಿದೆ ಎಂದರು. ತಾಳೇಗರಿಯಲ್ಲಿ ಕಾಲಜ್ಞಾನ ಎಂಬ ಗ್ರಂಥ ರಚಿಸಿ ದೇಶದ ಮುಂದಿನ ಆಗು ಹೋಗುಗಳ ಬಗ್ಗೆ ಎಚ್ಚರಿಸಿದ್ದು, ಅವರು ದಾಖಲಿಸಿರುವಂತೆ ಅನೇಕ ಘಟನೆಗಳು ನಡೆಯುತ್ತಿವೆ. ಸಮಾಜದ ಶ್ರೇಯೋಭಿವೃದ್ಧಿಗೆ ದುಡಿದವರಲ್ಲಿ ಕೈವಾರ ತಾತಯ್ಯ ಅಗ್ರಗಣ್ಯರು ಎಂದರು.

ತಾಲೂಕು ಬಲಿಜ ಸಂಘದ ಮುಖಂಡ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್ ಮಾತನಾಡಿ, ಶ್ರೀ ಯೋಗಿನಾರಾಯಣ ಯತ್ರೀಂದ್ರರು 1726 ರಲ್ಲಿ ಕೈವಾರ ಎಂಬ ಗ್ರಾಮದಲ್ಲಿ ಬಲಿಜ ವಂಶಸ್ಥರಾದ ಕೋಂಡಪ್ಪ ಮತ್ತು ತಾಯಿ ಮುದ್ದಮ್ಮ ಎಂಬ ದಂಪತಿ ಕುಟುಂಬದಲ್ಲಿ ಜನಿಸಿ, ಬಾಲಕನಾಗಿದ್ದಾಗಲೇ ಅಧ್ಯಾತ್ಮ, ದ್ಯಾನದಲ್ಲೇ ಕಳೆಯುತ್ತಿದ್ದರು.

ನಂತರ ಸಂಸಾರ ತ್ಯಜಿಸಿ ಕಠಿಣ ತಪ್ಪಸ್ಸು ಆಚರಿಸಿ ಅತ್ಮ ಸಾಕ್ಷಾತ್ಕಾರ ಮಾಡಿಕೊಳ್ಳವಲ್ಲಿ ಯಶಸ್ವಿಯಾದರು. ಜನರಿಗೆ ಅರ್ಥವಾಗುವ ರೀತಿಯಲ್ಲಿ ಜ್ಞಾನ, ಭಕ್ತಿ ಭೋದಿಸಿದರು. ಅವರು ಕನ್ನಡ ಮತ್ತು ತೆಲುಗಿನಲ್ಲಿ ಅನೇಕ ಗ್ರಂಥ ರಚಿಸಿದ್ದಾರೆ. ಬಲಿಜ ಸಮಾಜದ ಏಳಿಗೆಗೆ ಮಹನೀಯರಾದ ಸಾವಿತ್ರಿಬಾ ಫುಲೆ, ಪರಿಯಾರ್‌ ರಾಮಸ್ವಾಮಿ, ಕೃಷ್ಣದೇವರಾಯ ಸೇರಿದಂತೆ ಅನೇಕರು ಕೊಡುಗೆ ನೀಡಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ತಾಲೂಕು ಬಲಿಜ ಸಂಘದ ಅಧ್ಯಕ್ಷ ಎನ್.ಪದ್ಮನಾಭ್, ಉಪಾಧ್ಯಕ್ಷ ವೆಂಕಟೇಗೌಡ, ಕಾರ್ಯದರ್ಶಿ ನವೀನ್‌ಕುಮಾರ್, ಜಿಲ್ಲಾಸಂಘದ ಪ್ರತಿನಿಧಿ ಕೆ.ಎಲ್.ಆನಂದ್, ಪತ್ರಕರ್ತ ಕೆ.ಬಿ,ಲೋಕೇಶ್, ದೇವರಾಜು, ಸಂಜಯ್, ವಿಜಯ್‌ಕುಮಾರ್, ನಿವೃತ್ತ ಶಿಕ್ಷಕ ನಾರಾಯಣ್, ಹಾಗೂ ರವಿಕುಮಾರ್, ಮುಖಂಡರಾದ ತೆಮಿಳ್‌ ಅಶ್ವತ್ತ್, ಕುಂಭಿನರ ಸಿಂಹಯ್ಯ, ಉಮೇಶ್(ಗೂಟು), ಜಯರಾಮಯ್ಯ, ಶ್ರೀನಿವಾಸ್, ಕೇಶವಮೂರ್ತಿ, ಮಹಿಳಾ ಸಂಘದ ಗೌರಧ್ಯಕ್ಷರಾದ ಮಂಜುಳಾ ಗೋವಿಂದರಾಜು, ಅಧ್ಯಕ್ಷೆ ಗಿರಿಜಮ್ಮ ಕೃಷ್ಣಪ್ಪ, ಗೀತಾ, ಶಶಿಕಳಾ, ಮಧುಶ್ರೀ, ಸುಚಿತ್ರ, ಲಲಿತಮ್ಮ, ಪೂರ್ಣಿಮಾ, ಮಂಜುಳಾ ಸಂಜಯ್, ಕಂದಾಯ ಇಲಾಖೆ ಶಿರಸ್ದೇದಾರ್ ಮಂಜುನಾಥ್, ವೆಂಕಟರಂಗನ್, ವೆಂಕೇಶ್, ಆರ್.ಐ. ಬಸವರಾಜು, ನಕುಲ್, ನಟರಾಜು ಸೇರಿ ಇತರರಿದ್ದರು.

Share this article