ದೇಶಮುಖ ಪ್ರೀಮಿಯರ್ ಲೀಗ್‌ಗೆ ಭರ್ಜರಿ ಚಾಲನೆ

KannadaprabhaNewsNetwork |  
Published : Apr 17, 2026, 04:00 AM IST
15ನಾಲತವಾಡ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ನಾಲತವಾಡ ಪಟ್ಟಣದ ಜೆ.ಎಸ್. ದೇಶಮುಖ ಕ್ರೀಡಾಂಗಣದಲ್ಲಿ ಮಂಗಳವಾರ ಸಾಯಂಕಾಲ ದೇಶಮುಖ ಪ್ರೀಮಿಯರ್ ಲೀಗ್ ಉದ್ಘಾಟನೆ ಕಾರ್ಯಕ್ರಮ ವೈಭವದಿಂದ ಜರುಗಿತು. ಮಹಾರಾಷ್ಟ್ರದ ಯಾವತಮಲ್ ಮಾಜಿ ಶಾಸಕಿ ದೇಶಮುಖ ಅವರ ಪುತ್ರಿ ನಂದಿನಿ ದೇಶಮುಖ ಕಾರ್ಯಕ್ರಮವನ್ನು ಉದ್ಘಾಟಿಸಿ ಟೂರ್ನಾಮೆಂಟ್‌ಗೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ನಾಲತವಾಡ

ಪಟ್ಟಣದ ಜೆ.ಎಸ್. ದೇಶಮುಖ ಕ್ರೀಡಾಂಗಣದಲ್ಲಿ ಮಂಗಳವಾರ ಸಾಯಂಕಾಲ ದೇಶಮುಖ ಪ್ರೀಮಿಯರ್ ಲೀಗ್ ಉದ್ಘಾಟನೆ ಕಾರ್ಯಕ್ರಮ ವೈಭವದಿಂದ ಜರುಗಿತು.

ಮಹಾರಾಷ್ಟ್ರದ ಯಾವತಮಲ್ ಮಾಜಿ ಶಾಸಕಿ ದೇಶಮುಖ ಅವರ ಪುತ್ರಿ ನಂದಿನಿ ದೇಶಮುಖ ಕಾರ್ಯಕ್ರಮವನ್ನು ಉದ್ಘಾಟಿಸಿ ಟೂರ್ನಾಮೆಂಟ್‌ಗೆ ಚಾಲನೆ ನೀಡಿದರು.

ಉದ್ಘಾಟನೆ ಬಳಿಕ ಮಾತನಾಡಿದ ಸಿದ್ದಣ್ಣ ಆಲಕೊಪ್ಪರ, ದೇಶಮುಖ ಕುಟುಂಬದ ಪ್ರೋತ್ಸಾಹದಿಂದಲೇ ಯುವಕರ ಬೇಡಿಕೆಯ ಮೇರೆಗೆ ಈ ಕ್ರಿಕೆಟ್ ಟೂರ್ನಾಮೆಂಟ್ ಆಯೋಜನೆ ಸಾಧ್ಯವಾಗಿದೆ ಎಂದರು.

ನಂದಿನಿ ದೇಶಮುಖ ಅವರು ಪ್ರಥಮ ಬಹುಮಾನವಾಗಿ ₹1 ಲಕ್ಷ ರೂ. ಹಾಗೂ ದ್ವಿತೀಯ ಬಹುಮಾನವಾಗಿ ₹ 50 ಸಾವಿರ ರೂ. ಘೋಷಿಸಿದ್ದು, ಯುವಕರಿಗೆ ಸದಾ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ. ಟೂರ್ನಾಮೆಂಟ್ ಮುಂಚೆಯೇ ಆರಂಭವಾಗಬೇಕಾಗಿದ್ದರೂ ಕೆಲವು ಕಾರಣಗಳಿಂದ ತಡವಾಗಿದ್ದು, ಈಗ ಅದ್ಧೂರಿಯಾಗಿ ಪ್ರಾರಂಭವಾಗಿದೆ ಎಂದು ಹೇಳಿದರು.ಲೋಟಗೇರಿ ಗ್ರಾಮದ ಗುರುಮೂರ್ತಿ ಕಣಕಾಲಮಠ ಮಾತನಾಡಿ, ದೇಶಮುಖ ಕುಟುಂಬವು ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಪ್ರಭಾವಿ ಸ್ಥಾನ ಹೊಂದಿದ್ದು, ಇಂತಹ ಕುಟುಂಬದಿಂದ ಕ್ರೀಡಾ ಟೂರ್ನಾಮೆಂಟ್ ಆಯೋಜನೆ ಮಾಡಿರುವುದು ಸಂತೋಷದ ಸಂಗತಿ ಎಂದರು. ಈ ಲೀಗ್ ಮೂಲಕ ನಾಲತವಾಡದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ಪ.ಪಂ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಪೃಥ್ವಿರಾಜ್ ನಾಡಗೌಡ, ಮುಖಂಡರಾದ ಶಂಕರರಾವ ದೇಶಮುಖ, ಗುರು ಪ್ರಸಾದ ದೇಶಮುಖ, ಅಮರ ದೇಶಮುಖ, ಚಂದ್ರಶೇಖರ ಮೇಟಿ, ಮಹಾಂತೇಶ ಗಂಗನಗೌಡರ, ಪ.ಪಂ ಉಪಾಧ್ಯಕ್ಷ ಬಸವರಾಜ ಗಂಗನಗೌಡರ, ಶಿಕ್ಷಕ ಬಸವರಾಜ ಮೇಲಶೀಮಿ, ಪ.ಪಂ ಸದಸ್ಯ ರಮೇಶ್ ಆಲಕೊಪ್ಪರ, ಮಾರುತಿ ಗುರಿಕಾರ, ಗುರು ತಂಗಡಗಿ, ಅಬುಬಕರ ರಕ್ಕಸಗಿ, ಮುತ್ತು ಗಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ ಅಕ್ಕಮಹಾದೇವಿ
ಭಾಗ್ಯವಂತಿ ಶಿಕ್ಷಣ ಸಂಸ್ಥೆಗೆ ಒಲಿದ ಹ್ಯಾಟ್ರಿಕ್!