ಕನ್ನಡಪ್ರಭ ವಾರ್ತೆ ದಾಂಡೇಲಿ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಶಿಬಿರ ಉದ್ಘಾಟಿಸಿ ಮಾತನಾಡಿ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರ ಜನ್ಮ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡಿರುವ ಈ ರಕ್ತದಾನ ಶಿಬಿರ ಅತ್ಯಂತ ಉಪಯುಕ್ತ ಕಾರ್ಯಕ್ರಮವಾಗಿದೆ. ಇನ್ನೊಬ್ಬರ ಜೀವ ಉಳಿಸುವ ನಿಟ್ಟಿನಲ್ಲಿ ರಕ್ತದಾನ ಮಾಡುವುದು ಅಗತ್ಯ ಎಂದರು.
ಈ ಸಂದರ್ಭ ರಕ್ತನಿಧಿ ಕೇಂದ್ರದ ನವೀನ, ಕೆನರಾ ಬ್ಯಾಂಕ್ ಆರ್‌ಸೆಟಿ ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ, ಆರ್‌ಜೆಡಿ ಸಂಸ್ಥೆಯ ದಾಂಡೇಲಿ ಘಟಕದ ಯೋಜನಾಧಿಕಾರಿ ಸಂಜೀವ ಜೋಶಿ, ಸಂಸ್ಥೆಯ ಅಧಿಕಾರಿಗಳಾದ ನಾರಾಯಣ ವಾಡಕರ, ಅಂದಾನಪ್ಪ ಅಂಗಡಿ ಹಾಗೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ದಾಂಡೇಲಿ ಬ್ಲಾಕ್ ಕಾಂಗ್ರೆಸ್‌ನಿಂದ ರೋಗಿಗಳಿಗೆ ಹಣ್ಣುಹಂಪಲು ವಿತರಣೆಶಾಸಕ ಆರ್.ವಿ. ದೇಶಪಾಂಡೆಯವರ ೭೯ನೇ ಜನ್ಮದಿನಾಚರಣೆಯ ಅಂಗವಾಗಿ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲನ್ನು ವಿತರಿಸಲಾಯಿತು. ಇದಕ್ಕೂ ಮುನ್ನ ಕೇಕ್ ಕತ್ತರಿಸಿ ಸಿಹಿಯನ್ನು ಹಂಚಿ ಆರ್.ವಿ.ದೇಶಪಾಂಡೆಯವರ ಜನ್ಮದಿನ ಆಚರಿಸಲಾಯಿತು.ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ, ಉಪಾಧ್ಯಕ್ಷರಾದ ಬಸೀರ ಗಿರಿಯಾಳ, ಅಡಿವೆಪ್ಪ ಭದ್ರಕಾಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಪಿ. ನಾಯ್ಕ, ಕೆಪಿಸಿಸಿ ಸದಸ್ಯ ಕರೀಮ ಅಜ್ರೇಕರ, ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಅಧ್ಯಕ್ಷ ರಿಯಾಜ ಬಾಬು ಸಯ್ಯದ, ಕೆಪಿಸಿಸಿ ಸದಸ್ಯ ಕರೀಮ ಅಜ್ರೇಕರ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಬಂದಮ್, ಮುಖಂಡರಾದ ಯಾಸ್ಮೀನ ಕಿತ್ತೂರ, ಸರಸ್ವತಿ ರಜಪೂತ, ದಿವಾಕರ ನಾಯ್ಕ, ದಾದಾಪೀರ ನದಿಮುಲ್ಲಾ, ಪ್ರತಾಪಸಿಂಗ ರಜಪೂತ, ರಾಜಾಸಾಬ ಸುಂಕದ, ಇಮ್ತಿಯಾಜ ಅತ್ತಾರ, ರಾಫೀಕ ಖಾನ, ಅವಿನಾಶ ಘೋಟಕೆ, ರವಿಕುಮಾರು ಚವ್ಹಾಣ, ಕಿರಣಸಿಂಗ ರಜಪೂತ, ಪ್ರಭಾರ ಗೊನಾ, ರವಿ ಚಾಟ್ಲಾ, ಸಂಜಯ ನಂದ್ಯಾಳಕರ, ಅನಿಲ ದಂಡಗಲ, ಸರಸ್ವತಿ ಚವ್ಹಾಣ, ಆಯಿಶಾ ಪಠಾಣ, ವೆಂಕಟರಮನಮ್ಮ ಮೈತಕೂರಿ, ಸುಧಾ ರಾಮಲಿಂಜ ಜಾಧವ, ಮಂಜು ರಾಥೋಡ, ರೇಣುಕಾ ಮಾದರ, ರೇಣುಕಾ ಭಜಂತ್ರಿ, ಅಫ್ರೀನ ಕಿತ್ತೂರ, ರೇಶ್ಮಾ ಮಾಲ್ದಾರ, ಸುಜಾತಾ ಸಂದಮ್, ಅನಿಲ ನಾಯ್ಕ, ಆಸಿಫ್ ಮುಜಾವರ, ಫ್ರಾನ್ಸಿಸ್ ಜೆವಿಯರ, ಸಪುರಾ ಯರಗಟ್ಟಿ, ವಿನಾಯಕ ಬಾರಿಕೇರ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.