ಹದಗೆಟ್ಟ ಹೆದ್ದಾರಿ: ಪ್ರಯಾಣ ಅಪಾಯಕಾರಿ

KannadaprabhaNewsNetwork |  
Published : Oct 26, 2025, 02:00 AM IST
24 ಬೀರೂರು 1ಕಡೂರಿನಿಂದ ತರೀಕೆರೆ, ಶಿವಮೊಗ್ಗಕ್ಕೆ ತೆರಳುವ ಅಂರ‍್ಪಾಸ್ ಬಳಿ ರಸ್ತೆ ಹದಗೆಟ್ಟಿದೆ | Kannada Prabha

ಸಾರಾಂಶ

ಬೀರೂರುಕಡೂರು-ಬೀರೂರು ನಡುವೆ ಇರುವ ಹೆದ್ದಾರಿಯ ಬೀರೂರು ಹೊರವಲಯದಲ್ಲಿ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಈ ರಸ್ತೆ ಮೇಲೆ ಓಡಾಡುವವರ ಆರೋಗ್ಯಕ್ಕೂ ಸಮಸ್ಯೆ ಆಗುತ್ತಿದೆ.

ಕಡೂರು: ಬೈಪಾಸ್ ಕಾಮಗಾರಿ ವಿಳಂಬ, ನಿರಂತರ ಮಳೆ- ಪ್ರಯಾಣಿಕರ ಪರದಾಟ

ಕನ್ನಡಪ್ರಭ ವಾರ್ತೆ ,ಬೀರೂರು

ಕಡೂರು-ಬೀರೂರು ನಡುವೆ ಇರುವ ಹೆದ್ದಾರಿಯ ಬೀರೂರು ಹೊರವಲಯದಲ್ಲಿ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಈ ರಸ್ತೆ ಮೇಲೆ ಓಡಾಡುವವರ ಆರೋಗ್ಯಕ್ಕೂ ಸಮಸ್ಯೆ ಆಗುತ್ತಿದೆ.ಬೀರೂರು ಹೊರವಲಯದಲ್ಲಿ ಆರಂಭಗೊಂಡು ಕಡೂರು ಹೊರ ವಲಯದ ಬಳ್ಳೇಕೆರೆ ಸಂಪರ್ಕಿಸುವ ಹೆದ್ದಾರಿ ಪ್ರವೇಶಕ್ಕೂ ಮೊದಲು ಹೆದ್ದಾರಿ 206ರಲ್ಲಿ ಇರುವ, ಕಡೂರು ಕಡೆಗಿನ ಅಂರ‍್ಪಾಸ್ ಪಕ್ಕ ಇರುವ ರಸ್ತೆಯೂ ಗುಂಡಿ ಬಿದ್ದಿದೆ. ಈ ರಸ್ತೆ ಕಿರಿದಾಗಿದ್ದು, ಪಕ್ಕದಲ್ಲಿ ಬೈಪಾಸ್ ತಡೆಗೋಡೆ ಇರುವ ಕಾರಣ ಗುಂಡಿ ತಪ್ಪಿಸಲು ಸಾಧ್ಯವಾಗುತ್ತಿಲ್ಲ.ರಸ್ತೆ ಗುಂಡಿ ಸಮಸ್ಯೆ ಜತೆಗೆ ಅವೈಜ್ಞಾನಿಕ ಸರ‍್ವಿಸ್ ರಸ್ತೆಗಳು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಕಡೂರು ತಿರುವಿನಲ್ಲಿ ಪ್ಲೈ ಓವರ್ ಪಕ್ಕದಲ್ಲಿ ಮೂರು ರಸ್ತೆಗಳು ಒಂದು ಕಡೆ ಕಡೂರು ಹೆದ್ದಾರಿ ತಲುಪಿದರೆ, ಇನ್ನೊಂದು ಶಿವಮೊಗ್ಗ ಕಡೆಗೆ, ಮತ್ತೊಂದು ತಂಗಲಿ ಕಡೆ ತೆರಳುವ ರಸ್ತೆಗಳಲ್ಲಿ ಪ್ರಯಾಣಿಸುವವರ ಸ್ಥಿತಿ ಅಯೋಮಯವಾಗಿದೆ. ಇಲ್ಲಿ ಆಗಾಗ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತವೆ. ವಾಹನ ದಟ್ಟಣೆ ಹೆಚ್ಚಿದರೆ ಪ್ರಾಣಾಪಾಯ ಸಂಭವಿಸುವ ಸ್ಥಿತಿಯೂ ಇದೆ. ಅಜ್ಜಂಪುರ ರಸ್ತೆ ಕಡೆಯಿಂದ ಬೈಪಾಸ್ ಮೂಲಕ ಹೆದ್ದಾರಿಗೆ ಸಂಪರ್ಕ ಕಲ್ಪಿಸಿದ್ದು, ಬೀರೂರು ಕಡೆಯಿಂದ ಬರುವವರು ಅಥವಾ ಕಡೂರಿನಿಂದ ಶಿವಮೊಗ್ಗ ಕಡೆ ತೆರಳು ವವರು ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತಕ್ಕೆ ತುತ್ತಾಗಬೇಕಾದ ಸ್ಥಿತಿ ಇದೆ ಎನ್ನುತ್ತಾರೆ ವಾಹನ ಸವಾರರು.ಮಳೆ ಹೆಚ್ಚಾಗುತ್ತಿರುವುದರಿಂದ ಬೀರೂರು ಪ್ರಥಮ ದರ್ಜೆ ಕಾಲೇಜು ಬಳಿ ಹೆದ್ದಾರಿ ಗುಂಡಿ ಬಿದ್ದಿದೆ. ಬೀರೂರು-ಅಜ್ಜಂಪುರ ರಸ್ತೆಯಲ್ಲಿ ಯುಜಿಡಿ ಮ್ಯಾನ್‌ ಹೋಲ್‌ಗಳು ರಸ್ತೆಯ ಮಧ್ಯೆಯೇ ಇದ್ದು ರಸ್ತೆಯನ್ನೇ ಹದಗೆಡಿಸಿವೆ. ಆಳುಗುಂಡಿ ಇರುವ ಎಲ್ಲ ಕಡೆ ಗುಂಡಿ ಬಿದ್ದು ರಸ್ತೆ ಸಂಚಾರ ಅಪಾಯಕಾರಿ ಆಗುತ್ತಿದೆ.ಬೈಪಾಸ್ ರಸ್ತೆ ಆರಂಭವಾಗುವ ಮುನ್ನ ಕಡೂರು-ಬೀರೂರು ರಸ್ತೆಗೆ ಏಕಮುಖ ಸಂಚಾರ ನೀಡಿದ್ದ ಹಿನ್ನಲೆಯಲ್ಲಿ ಅನೇಕ ಅಫಘಾತಗಳು ನಡೆದ ಹಿನ್ನಲೆಯಲ್ಲಿ ಈ ಪಕ್ಕದ ರಸ್ತೆಯಲ್ಲಿ ಪೊಲೀಸರ ಸಹಕಾರ ದಿಂದ ಸದ್ಯ ಎರಡು ಕಡೆ ಸಂಚಾರ ವಾಗುತ್ತಿದೆ. ಆದರೆ ಗುಂಡಿಗಳು ಬಿದ್ದ ಹಿನ್ನಲೆಯಲ್ಲಿ ಅಪಘಾತಗಳು ಹೆಚ್ಚಾಗುವ ಸಾಧ್ಯತೆ ಇದೆ. ಬಿ.ಟಿ.ಚಂದ್ರಶೇಖರ್. ಪುರಸಭೆ ಆಶ್ರಯ ಕಮಿಟಿ ಸದಸ್ಯ. ಅವೈಜ್ಞಾನಿಕ ಸರ‍್ವಿಸ್ ರಸ್ತೆಗಳ ಬಳಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ರಸ್ತೆಗಳನ್ನು ದುರಸ್ತಿಪಡಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

‘ಕ್ರಮಕ್ಕೆ ಸೂಚನೆ’ಕಡೂರು ಮತ್ತು ಬೀರೂರು ಪಟ್ಟಣದ ಮುಖ್ಯ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಯಿಂದ ಈಚೆಗೆ ದುರಸ್ತಿ ಪಡಿಸಲಾಗಿದೆ. ಗ್ರಾಮೀಣ ರಸ್ತೆಗಳಿಗೂ ಕಾಯಕಲ್ಪ ಒದಗಿಸಿ ಕ್ಷೇತ್ರದಾದ್ಯಂತ ರಸ್ತೆ ಸಂಪರ್ಕ ಉತ್ತಮ ಗೊಳಿಸಲಾಗುತ್ತಿದೆ. ಹೆದ್ದಾರಿ ಅಥವಾ ಬೈಪಾಸ್ ಕಾಮಗಾರಿಗೆ ಸಂಬಂಧಿಸಿ ವಿಭಾಗಕ್ಕೆ ಪತ್ರ ವ್ಯವಹಾರ ನಡೆಸಲಾಗುವುದು. ರ‍್ವಿಸ್ ರಸ್ತೆಗಳಲ್ಲಿ ಸೂಕ್ತ ತಿರುವಿಗೆ ಬ್ಯಾರಿಕೇಡ್ ಅಳವಡಿಸುವಂತೆ ಸೂಚಿಸಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.24 ಬೀರೂರು 1ಕಡೂರಿನಿಂದ ತರೀಕೆರೆ, ಶಿವಮೊಗ್ಗಕ್ಕೆ ತೆರಳುವ ಅಂರ‍್ಪಾಸ್ ಬಳಿ ರಸ್ತೆ ಹದಗೆಟ್ಟಿದೆ24 ಬೀರೂರು 2ಬೀರೂರು-ಕಡೂರು ಸಂರ‍್ಕಿಸುವ ಹೆದ್ದಾರಿಯ ಬೈಪಾಸ್ ಬಳಿ ಗುಂಡಿ ಬಿದ್ದಿರುವುದು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನಕ್ಷರತೆ ಬಾಲ್ಯ ವಿವಾಹ ಕೇಸ್‌ ರದ್ದತಿಗೆ ಆಧಾರವಾಗದು: ಕೋರ್ಟ್‌
ಕೆಎಸ್‌ಡಿಎಲ್‌ನಿಂದ ₹400ನ ಮಲ್ಲಿಗೆ ಸೋಪ್‌!