ದೇವಾಂಗ ಸಮಾಜಕ್ಕಿದೆ ಸರಕಾರ ಬದಲಿಸುವ ಶಕ್ತಿ: ಸಚಿವ ತಿಮ್ಮಾಪೂರ

KannadaprabhaNewsNetwork |  
Published : May 10, 2026, 02:45 AM IST
ಬನಶಂಕರಿಯಲ್ಲಿ ಶನಿವಾರ ದಯಾನಂದ ಪುರಿ ಶ್ರೀಗಳ 36ನೇ ಪಟ್ಟಾಧಿಕಾರ ಸಮಾರಂಭ ಅದ್ಧೂರಿಯಾಗಿ ನಡೆಯಿತು. | Kannada Prabha

ಸಾರಾಂಶ

ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರು ಇದ್ದಾರೆ ಎಂದು ತೋರಿಸಲು ದೊಡ್ಡ ಪ್ರಯತ್ನ ನಡೆದಿದೆ. ಧರ್ಮ, ಜಾತಿಯ ರಾಜಕೀಯ ಮಾಡಲು ನಾವು ತಯಾರಿದ್ದೇವೆ ಎಂದು ರಾಜ್ಯಕ್ಕೆ ದೇವಾಂಗ ಸಮಾಜ ತೋರುತ್ತಿದೆ. ದೇವರಿಗೆ ಉಡುಪು ಕೊಟ್ಟ ದೇವಾಂಗ ಸಮಾಜ, ಸರಕಾರವನ್ನು ಬದಲಿಸುವ ಶಕ್ತಿ ಹೊಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರು ಇದ್ದಾರೆ ಎಂದು ತೋರಿಸಲು ದೊಡ್ಡ ಪ್ರಯತ್ನ ನಡೆದಿದೆ. ಧರ್ಮ, ಜಾತಿಯ ರಾಜಕೀಯ ಮಾಡಲು ನಾವು ತಯಾರಿದ್ದೇವೆ ಎಂದು ರಾಜ್ಯಕ್ಕೆ ದೇವಾಂಗ ಸಮಾಜ ತೋರುತ್ತಿದೆ. ದೇವರಿಗೆ ಉಡುಪು ಕೊಟ್ಟ ದೇವಾಂಗ ಸಮಾಜ, ಸರಕಾರವನ್ನು ಬದಲಿಸುವ ಶಕ್ತಿ ಹೊಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಸಮೀಪದ ಬನಶಂಕರಿಯಲ್ಲಿ ಶನಿವಾರ ರಾಜ್ಯ ದೇವಾಂಗ(ನೇಕಾರ) ಸಮಾಜದ ಜಾಗೃತಿ ಸಮಾವೇಶ, ದಯಾನಂದ ಪುರಿ ಶ್ರೀಗಳ 36ನೇ ಪಟ್ಟಾಧಿಕಾರ, ತುಲಾಭಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಿಮ್ಮ ಸಮಾಜದ ವಿವಿಧ ಬೇಡಿಕೆಗಳನ್ನು ಸರಕಾರದ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದು ಬೇಡಿಕೆ ಈಡೇರಿಕೆಗೆ ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನ್ನವರ ಮಾತನಾಡಿ, ಧರ್ಮದ ಹೆಸರಲ್ಲಿ ನಿಮ್ಮನ್ನು ಬಲಿಕೊಡುವ ಕೆಲಸ ನಡೆದಿದೆ. ಹಳೆಯ ಸಂಪ್ರದಾಯ, ಮೂಢನಂಬಿಕೆಯಿಂದ ದೂರ ಇರಿ, ಯಾವುದೇ ಆಮಿಷಗಳಿಗೆ ಒಳಗಾಗದೆ, ಮತ ಚಲಾಯಿಸಿ. ಸಮಾಜ ಸಂಘಟಿಸುವ ಕೆಲಸ ಮಾಡಿದ್ದು ಒಳೆಯದು ಕಾರ್ಯ ಎಂದು ಹೇಳಿದರು.

ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಬೆಳಗಾವಿ ಬಿಡಿಸಿಸಿ ಬ್ಯಾಂಕ್ ನಾಮನಿರ್ದೇಶಕ ಸದಸ್ಯ ರಾಹುಲ್‌ ಜಾರಕಿಹೊಳಿ ಮಾತನಾಡಿದರು.

ರಾಜ್ಯ ನೇಕಾರ ಒಕ್ಕೂಟದ ಅಧ್ಯಕ್ಷ ರವೀಂದ್ರ ಕಲಬುರ್ಗಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖಂಡ ಎಂ.ಬಿ. ಹಂಗರಗಿ, ಸಮಾಜದ ಮುಖಂಡರಾದ ಗೋ ತಿಪ್ಪೇಶ, ಬಿ.ಜೆ. ಗಣೇಶ, ಪಿ.ಆರ್. ಗಿರಿಯಪ್ಪ, ಮುಖಂಡರಾದ ಸಿ.ಎಲ್. ಧನಪಾಲ್, ಟಿ. ರಾಜೇಶ, ಎಚ್. ಪರಮೇಶ್ವರಪ್ಪ, ಕೆ.ಸಿ. ತಿಮ್ಮಶೆಟ್ಟಿ, ಸಂಕಣ್ಣ ಕರಡಿಗುಡ್ಡ, ಟಿ.ಆರ್. ಉಮಾಪತಿ, ಚುಡಾಮನಿ ಕೇಶವಮೂರ್ತಿ, ಕುಮಾರ ಶೇಬಿನಕಟ್ಟಿ, ಮಹೇಶ ಶೇಬಿನಕಟ್ಟಿ, ಗವಿರಂಗಯ್ಯ, ಶ್ರೀಧರ ದೇವಾಂಗ, ಸತೀಶ ಸಪ್ಪರದ, ಭಾರತಿ ರಮೇಶ, ಉಮೇಶ ಕಂದಗಲ್, ದಿನೇಶ ಗಿಡ್ನಂದಿ, ಆರ್.ಜೆ. ರಾಮದುರ್ಗ, ರವಿ ಬಳಿಗೇರ, ಬಸವರಾಜ ಕುದರಿ, ಸತೀಶ ಸಪ್ಪರದ, ಹೇಮಾದ್ರೆಪ್ಪ ಕೊಪ್ಪಳ, ಬಸವರಾಜ ವಡ್ಡೊಡಗಿ, ಟಿ.ಎಂ. ಜಲೇಂದ್ರ, ನಾಗಪ್ಪ ಭಾವಿಕಟ್ಟಿ ಸೇರಿದಂತೆ ವಿವಿದ ಜಿಲ್ಲೆಗಳಿಂದ ಆಗಮಿಸಿದ ನೇಕಾರ ಸಮುದಾಯದ ಮುಖಂಡರು ಹಾಜರಿದ್ದರು.

ಅದ್ಧೂರಿ ಕುಂಭ ಮೆರವಣಿಗೆ: ಬೆಳಗ್ಗೆ ನಗರದ ಬಸವೇಶ್ವರ ವೃತ್ತದಿಂದ ಮುಖ್ಯರಸ್ತೆಯ ಮೂಲಕ ಅಂಬೇಡ್ಕರ್‌ ಸರ್ಕಲ್ ವರೆಗೆ ವಿವಿಧ ಸಂಗೀತ ವಾದ್ಯಗಳೊಂದಿಗೆ ಸಹಸ್ರಾರು ಮಹಿಳೆಯರ ಕುಂಭಗಳೊಂದಿಗೆ ದಯಾನಂದ ಪುರಿ ಮಹಾಸ್ವಾಮಿಗಳ ಸಾರೋಟದಲ್ಲಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಮೆರವಣಿಗೆಯಲ್ಲಿ ನೇಕಾರ ಸಮಾಜದ ಮುಖಂಡರು, ಮಹಿಳಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಧ್ಯಸ್ಥಿಕೆ ವಹಿಸಿ: ರಾಜ್ಯಪಾಲರಿಗೆ ಪಿಡಿಒಗಳ ಸಂಘ ಮನವಿ
ಕಾಂಗ್ರೆಸ್ ಕೇವಲ ರಾಜಕೀಯಕ್ಕಲ್ಲ, ಯೋಜನೆಗಳ ಕೊಡುವ ಪಕ್ಷ: ಎಸ್.ಜಿ. ನಂಜಯ್ಯನಮಠ