ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸಿದ ಏಕೈಕ ಕನ್ನಡಿಗ ದೇವೇಗೌಡರು: ಸಿ.ಶಿವಕುಮಾರ್

KannadaprabhaNewsNetwork |  
Published : May 19, 2026, 01:45 AM IST
18ಕೆಎಂಎನ್ ಡಿ13 | Kannada Prabha

ಸಾರಾಂಶ

ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿ ದೆಹಲಿ ಕೆಂಪುಕೋಟೆ ಮೇಲೆನಿಂತು ರಾಷ್ಟ್ರಧ್ವಜ ಹಾರಿಸಿದ ನಾಡಿನ ಏಕೈಕ ಕನ್ನಡಿಗ, ಪ್ರಧಾನಮಂತ್ರಿ, ಮುಖ್ಯಮಂತ್ರಿಯಾಗಿ ರಾಷ್ಟ್ರ, ನಾಡಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ನೀರಾವರಿ, ಕೃಷಿ ಕ್ಷೇತ್ರಕ್ಕೆ ಹೆಚ್ಚು ಹೊತ್ತು ಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ನೇತೃತ್ವದಲ್ಲಿ ಹಣ್ಣುಹಂಪಲು ವಿತರಿಸಿದರು.

ಬಳಿಕ ಮಾತನಾಡಿದ ಸಿ.ಶಿವಕುಮಾರ್, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪಿಎಂ ದೇವೇಗೌಡರು ಹುಟ್ಟು ಹೋರಾಟಗಾರರಾಗಿ ಸದಾ ರೈತರು, ದುರ್ಬಲರು, ಅಲ್ಪಸಂಖ್ಯಾದರು, ದೀನದಲಿತರ ಪರವಾಗಿ ಚಿಂತಿಸುವ ಮುತ್ಸದ್ದಿ ನಾಯಕರಾಗಿದ್ದಾರೆ ಎಂದರು.

ಪ್ರಧಾನಿಯಾಗಿ ದೆಹಲಿ ಕೆಂಪುಕೋಟೆ ಮೇಲೆನಿಂತು ರಾಷ್ಟ್ರಧ್ವಜ ಹಾರಿಸಿದ ನಾಡಿನ ಏಕೈಕ ಕನ್ನಡಿಗ, ಪ್ರಧಾನಮಂತ್ರಿ, ಮುಖ್ಯಮಂತ್ರಿಯಾಗಿ ರಾಷ್ಟ್ರ, ನಾಡಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ನೀರಾವರಿ, ಕೃಷಿ ಕ್ಷೇತ್ರಕ್ಕೆ ಹೆಚ್ಚು ಹೊತ್ತು ಕೊಟ್ಟಿದ್ದಾರೆ ಎಂದರು.

94 ವರ್ಷವಾದರೂ ಇಂದಿಗೂ ಸಹ ಅವರಲ್ಲಿ ಹೋರಾಟದ ಕಿಚ್ಚುಕಡಿಮೆಯಾಗಿಲ್ಲ. ರಾಜ್ಯ ಪರಿಷತ್‌ನಲ್ಲಿ ನಿಂತು ನಾಡಿನ ಪರ, ನೀರಾವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಧ್ವನಿಎತ್ತುವ ಕೆಲಸ ಮಾಡಿದ್ದಾರೆ. ಇವರ ಸೇವೆ ಇನ್ನೂ ನಾಡು, ರಾಷ್ಟ್ರಕ್ಕೆ ಇನ್ನು ಬೇಕಿದೆ. ಅವರಿಗೆ ಮತ್ತಷ್ಟು ಆಯಸ್ಸು ಆರೋಗ್ಯಕೊಟ್ಟಿ ಕಾಪಾಡಲೆಂದು ಶುಭಹಾರೈಸಿದರು.

ಈ ವೇಳೆ ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಚಿಕ್ಕಾಡೆ ಗಿರೀಶ್, ಮಾಜಿ ಅಧ್ಯಕ್ಷ ಡಿ.ಶ್ರೀನಿವಾಸ್, ನಿರ್ದೇಶಕರಾದ ರಾಮಕೃಷ್ಣೇಗೌಡ, ವಿ.ಎಸ್.ನಿಂಗೇಗೌಡ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕರಾದ ಗುರುಸ್ವಾಮಿ, ಶ್ಯಾದನಹಳ್ಳಿ ಚಲುವರಾಜ್, ವಿಎಸ್‌ಎಸ್‌ಎನ್‌ಬಿ ಅಧ್ಯಕ್ಷ ಹೆಗ್ಗಡಹಳ್ಳಿ ರಾಮಕೃಷ್ಣ, ಪುರಸಭೆ ಸದಸ್ಯರಾದ ಆರ್. ಸೋಮಶೇಖರ್, ಗಿರೀಶ್, ಮಾಣಿಕ್ಯನಹಳ್ಳಿ ಅಶೋಕ್, ಹೇಮಾವತಿ ರಾಜೇಶ್, ಕೆಂಚನಹಳ್ಳಿ ಕುಮಾರ್, ಹಿರೇಮರಳಿ ಎಚ್‌ಎಸ್‌ವಿ ಸ್ವಾಮೀಗೌಡ, ಸತೀಶ್, ಅಲ್ಪಳ್ಳಿಗೋವಿಂದಯ್ಯ, ಟೌನ್‌ಚಂದ್ರು, ಪ್ರಶಾಂತ್, ಪುರಸಭೆ ಮಾಜಿ ಸದಸ್ಯರಾದ ಶಿವಕುಮಾರ್, ಚಂದ್ರು, ಆರುಮುಗಂ, ಗುರು, ಬಕೋಡಿ, ಪವನ್, ಅರವಿಂದ್, ಮೋಹನ್, ಅಬ್ದುಲ್‌ವಾಹಿದ್, ಇಸ್ರತ್ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂತ್ರಜ್ಞಾನ ಸರಿಯಾಗಿ ಬಳಸಿ ಕ್ರಿಯಾಶೀಲತೆ ಮೆರೆಯಿರಿ
.ಗ್ರಾಮ ಒನ್ ಸುಲಿಗೆ ಅಡ್ಡೆ ಮೇಲೆ ಅಧಿಕಾರಿಗಳ ದಾಳಿ