ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸಿ

KannadaprabhaNewsNetwork |  
Published : Apr 20, 2026, 03:00 AM IST
ಸಮ್ಮಿಲನ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ ಹೊಸ ತಂತ್ರಜ್ಞಾನದ ಇಂದಿನ ಕಾಲದಲ್ಲಿ ನಮ್ಮ ಶಿಕ್ಷಣ ಪದ್ಧತಿ ಕೇವಲ ಮಾಹಿತಿ ಕೊಡುತ್ತಿದ್ದು, ಇದರ ಜೊತೆಗೆ ವಿದ್ಯಾರ್ಥಿಗಳ ಮೆದುಳಿಗೆ ತರಬೇತಿ ನೀಡುವ ಶಿಕ್ಷಣ ಅಗತ್ಯ, ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರಿಯಾತ್ಮಕ ಮನೋಭಾವ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಹೊಸ ತಂತ್ರಜ್ಞಾನದ ಇಂದಿನ ಕಾಲದಲ್ಲಿ ನಮ್ಮ ಶಿಕ್ಷಣ ಪದ್ಧತಿ ಕೇವಲ ಮಾಹಿತಿ ಕೊಡುತ್ತಿದ್ದು, ಇದರ ಜೊತೆಗೆ ವಿದ್ಯಾರ್ಥಿಗಳ ಮೆದುಳಿಗೆ ತರಬೇತಿ ನೀಡುವ ಶಿಕ್ಷಣ ಅಗತ್ಯ, ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರಿಯಾತ್ಮಕ ಮನೋಭಾವ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ಜಾದವಜಿ ಶಿಕ್ಷಣ ಸಂಸ್ಥೆಯ ಕೆ.ಎ.ಲೋಕಾಪುರ ಪದವಿ ಮಹಾವಿದ್ಯಾಲಯದ ಹಿಂದಿನ ವಿದ್ಯಾರ್ಥಿಗಳ ಸಮ್ಮಿಲನ ಸ್ಮೃತಿ ಸುಮನ-2026 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆಲವು ಮುಂದುವರಿದ ದೇಶಗಳಿಗೆ ಹೋಲಿಸಿದಾಗ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಕೆಲವು ಲೋಪದೋಷಗಳಿದ್ದು, ಅವುಗಳನ್ನ ಇಂತಹ ಸಮ್ಮೇಳನಗಳಲ್ಲಿ ಚಿಂತನ ಮಂಥನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ನಮಗೆ ಇಂದು ಮಾಹಿತಿ ನೀಡುವ ಶಿಕ್ಷಣ ಬೇಕಾಗಿಲ್ಲ, ದೇಶಾಭಿಮಾನ, ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಸುಂದರ ಬದುಕು ಕಟ್ಟಿಕೊಳ್ಳುವ ಶಿಕ್ಷಣ ಬೇಕು. ದೇಶಕ್ಕಾಗಿ ಇಲ್ಲವೇ ಜಗತ್ತಿಗೆ ಅಗತ್ಯವಿರುವ ವಿಶೇಷ ಕೊಡುಗೆ ನೀಡುವ ವ್ಯಕ್ತಿಗಳನ್ನು ರೂಪಿಸುವ ಶಿಕ್ಷಣ ಅಗತ್ಯ. ಮೂರನೇ ತರಗತಿ ಕಲಿತ ಅಲ್ವಾ ಎಡಿಸನ್ ಸತತ ಪ್ರಯತ್ನದಿಂದ ಬಲ್ಬ್ ಕಂಡುಹಿಡಿದು ಜಗತ್ತಿಗೆ ಬೆಳಕು ನೀಡಿದ. ಯಾವುದೇ ಶಿಕ್ಷಣ ಇಲ್ಲದೆ ರೈತರು ಚನ್ನಾಗಿ ಉಳಿಮೆ ಮಾಡುತ್ತಾರೆ, ಇಂದು ಉನ್ನತ ಶಿಕ್ಷಣ ಪಡೆದ ಅನೇಕ ಗೋಲ್ಡ್ ಮೆಡಲ್‌ ಪಡೆದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮವಿಶ್ವಾಸ ಮೂಡಿಸುವ ಶಿಕ್ಷಣ ನಮಗೆ ಬೇಕು. ಏನಾದರೂ ಹೊಸದನ್ನು ಕ್ರಿಯೇಟಿವ್ ಮಾಡುವ ಮನಸ್ಸು ನಮ್ಮದಾಗಬೇಕು ಎಂದರು.

ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅರವಿಂದರಾವ ದೇಶಪಾಂಡೆ ಮಾತನಾಡಿ, ಇಂದಿನ ಹಳೆಯ ವಿದ್ಯಾರ್ಥಿಗಳೇ ನಮ್ಮ ಸಂಸ್ಥೆಯ ಅಸ್ತಿ, ಅನೇಕ ಹಳೆಯ ವಿದ್ಯಾರ್ಥಿಗಳು ಈ ಸಂಸ್ಥೆಗೆ ದೇಣಿಗೆ ನೀಡುವ ಮೂಲಕ ಪಟ್ಟಣ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ಈ ಕಾಲೇಜಿನಲ್ಲಿ ಕಲಿತ ಕಳೆದ 20 ವರ್ಷದ ವಿದ್ಯಾರ್ಥಿಗಳು ಇಲ್ಲಿ ಸೇರಿದ್ದು, ತಾವು ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳಿಂದ ನೀವು ಕಲಿತ ಕಾಲೇಜಿಗೆ, ವಿದ್ಯಾರ್ಥಿಗಳ ಶಿಕ್ಷಣದ ದೃಷ್ಟಿಯಿಂದ ಸಮಾಜಕ್ಕೆ ಸೇವೆ ನೀಡಬೇಕೆಂದು ಕರೆ ನೀಡಿದರು.

ಧಾರವಾಡದ ಶಿಕ್ಷಣ ತಜ್ಞ ಮಹೇಶ ಮಾಶಾಳ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯಧ್ಯಕ್ಷ ಡಾ.ರಾಮ ಕುಲಕರ್ಣಿ ಹಾಗೂ ಮುಖ್ಯ ಅತಿಥಿ ರಾಜು ಲೋಕಾಪುರ ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಎಂ.ದೇವರೆಡ್ಡಿ ಸ್ವಾಗತಿಸಿದರು. ಶ್ರೀಶೈಲ ಯಡಹಳ್ಳಿ ಅತಿಥಿಗಳನ್ನ ಪರಿಚಯಿಸಿದರು. ಸಂತೋಷ ಬಡಕಂಬಿ, ಅಮೃತಾ ಧೂಪ ನಿರೂಪಿಸಿದರು. ಭಾಗ್ಯಶ್ರೀ ಗುಂಡಾ ವಂದಿಸಿದರು.

ಜಗತ್ತಿನ ಅನೇಕ ರಾಷ್ಟ್ರಗಳ ಮಣ್ಣನ್ನು ನೋಡಿದಾಗ ಭಾರತದ ಭೂಮಿಯೇ ಅತ್ಯಂತ ಶ್ರೇಷ್ಠ. ಇಲ್ಲಿ ಫಲವತ್ತವಾದ ಮಣ್ಣಿರುವುದರಿಂದ ಬಂಗಾರದ ಪುಡಿಯಂತಿದೆ. ಈ ಭೂಮಿಯನ್ನು ನಾವು ರಾಸಾಯನಿಕ ಮತ್ತು ಕೀಟನಾಶಕಗಳನ್ನು ಬಳಸಿ ಕಲುಷಿತ ಮಾಡಬಾರದು. ಇಲ್ಲಿ ಸಮೃದ್ಧ ಬೆಳೆಯನ್ನ ಬೆಳೆಯಬೇಕಾದರೆ ನಮ್ಮ ಮಕ್ಕಳಿಗೆ ಅಗತ್ಯ ತರಬೇತಿ ಅವಶ್ಯಕತೆ ಇದೆ. ಇಂದಿನ ಶಿಕ್ಷಣ ಪದ್ಧತಿ, ಭಾರತೀಯ ಕೃಷಿ ಪದ್ಧತಿ, ದೇಶದ ಮತ್ತು ಜಗತ್ತಿನ ಆಗುಹೋಗುಗಳ ಬಗ್ಗೆ ಚಿಂತನ ಮಂಥನ ಮಾಡಬೇಕಿದೆ.

- ನಿರ್ಭಯಾನಂದ ಸ್ವಾಮೀಜಿ, ವಿವೇಕಾನಂದ ಆಶ್ರಮ, ಗದಗ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವೀಯ ಮೌಲ್ಯಗಳೊಡನೆ ಬದುಕಿದರೆ ಜೀವನ ಸಾರ್ಥಕ
ಸಾಹಿತ್ಯ ಕ್ಷೇತ್ರಕ್ಕೆ ಪಿ.ಲಂಕೇಶ ಕೊಡುಗೆ ಅಪಾರ