ಕನ್ನಡಪ್ರಭ ವಾರ್ತೆ ಕುಮಟಾ
ತಾಲೂಕಿನ ಶೇಡಿಗದ್ದೆಯಲ್ಲಿ ತಾಲೂಕು ಮಟ್ಟದ ಕುಂಬ್ರಿ ಮರಾಠಿ ಸಮಾಜದ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ.೮೦ಕ್ಕಿಂತ ಹೆಚ್ಚು ಅಂಕ ಪಡೆದ ಒಟ್ಟು ೧೮ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಜ್ಞಾನಕ್ಕೆ ಸಾಟಿ ಬೇರೆ ಇಲ್ಲ. ಸಾಧನೆಯೆಡೆಗೆ ಪ್ರಯತ್ನಶೀಲ ವ್ಯಕ್ತಿ ನಿರಂತರ ಸಾಗುತ್ತಿದ್ದರೆ ಕಾಲಕೂಡಿ ಬಂದಾಗ ವಿಜಯಶಾಲಿಯಾಗುತ್ತಾನೆ. ಎಲ್ಲದಕ್ಕೂ ಇಚ್ಛಾಶಕ್ತಿ ಬೇಕು. ಸಾಧನೆಯ ಹಾದಿಯಲ್ಲಿ ನೆಪಗಳನ್ನು ಬದಿಗೊತ್ತಿ ಸಾಗಬೇಕು. ಕಷ್ಟಗಳನ್ನು ಮೀರಿ ಬೆಳೆಯುವ ಇಚ್ಛಾ ಶಕ್ತಿಯಿಂದ ಹೋರಾಡಿದರೆ ಗೆಲವು ನಮ್ಮನ್ನೇ ಹುಡುಕಿಕೊಂಡು ಬರುತ್ತದೆ. ಮುಖ್ಯವಾಗಿ ಶಿಕ್ಷಣವೆಂಬುದು ಮಹಿಳೆಯರಿಗೆ ಶಕ್ತಿ ಹಾಗೂ ಸಬಲ ಅಸ್ತ್ರ. ಮಾಡುವ ಕೆಲಸ ಯಾವುದಾದರೂ ವೃತ್ತಿಪರತೆ ಮುಖ್ಯ ಎಂದರು.ಒಗ್ಗಟ್ಟು ಸಮುದಾಯದ ಅಭಿವೃದ್ಧಿಗೆ ಕಾರಣ. ನಮ್ಮ ಯೋಚನೆ, ಮಾತು, ವರ್ತನೆ ಮುಖ್ಯ ಮತ್ತು ಅದೇ ನಮ್ಮ ಗುರುತಿನ ಚೀಟಿಯಾಗಿದ್ದು, ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಿ, ನಮ್ಮ ಬೇರಿನ ಅಭಿಮಾನವೇ ನಮಗೆ ಶ್ರೀರಕ್ಷೆ. ಮಾನವೀಯತೆ ಮತ್ತು ತೃಪ್ತಿಯಿಂದ ಬದುಕು ಸುಂದರವಾಗುತ್ತದೆ ಎಂದರು.
ಅತಿಥಿಗಳಾಗಿ ವನವಾಸಿ ಯುವ ಆಯಾಮ ಪ್ರಮುಖರಾದ ಕೇಶವ ಮರಾಠಿ. ಗ್ರಾಪಂ ಸದಸ್ಯ ರಾಜೀವ ಭಟ್, ಕುಂಬ್ರಿ ಮರಾಠಿ ಸಂಘದ ಜಿಲ್ಲಾ ಉಪಾಧ್ಯಕ್ಷ ವೆಂಕಟ್ರಮಣ ಮರಾಠಿ, ಹರಿಚ್ಚಂದ್ರ ಮರಾಠಿ, ಸೋಮ ಮರಾಠಿ, ತ್ರಿವೇಣಿ ಮಾರಾಠಿ, ತಾಲೂಕಾ ಉಪಾಧ್ಯಕ್ಷರಾದ ಈಶ್ವರ ಮರಾಠಿ, ಜಯಂತ ಮರಾಠಿ, ಹೇಮಾವತಿ ಮರಾಠಿ ಇತರರಿದ್ದರು.