ಹಾವೇರಿಯಲ್ಲಿ ಸಸಿ ನೆಟ್ಟು ವಿಕಸಿತ ಭಾರತ ಕಾರ್ಯಕ್ರಮಕ್ಕೆ ಚಾಲನೆ

KannadaprabhaNewsNetwork |  
Published : Jun 21, 2025, 12:49 AM IST
ಹಾವೇರಿಯ ಬಸವೇಶ್ವರ ನಗರ ರಾಣಿ ಚೆನ್ನಮ್ಮ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ವಿಕಸಿತ ಭಾರತ ಕಾರ್ಯಕ್ರಮಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಆಡಳಿತ ಚುಕ್ಕಾಣಿ ಹಿಡಿದ ನಂತರ ದೇಶದಲ್ಲಿ ಸಮಗ್ರ ಬದಲಾವಣೆಗಳು ಕಾಣಲಾರಂಭಿಸಿದೆ ಎಂದರು.

ಹಾವೇರಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 11 ವರ್ಷಗಳ ಸಾಧನೆ ಭಾರತದ ಇತಿಹಾಸದಲ್ಲಿ ವಿಕಸಿತ ಭಾರತವಾಗಿದೆ. ಇದು ದೇಶದ ಮಟ್ಟಿಗೆ ಅಮೃತ ಕಾಲ ಎಂದರೆ ತಪ್ಪಾಗಲಾರದು ಎಂದು ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ತಿಳಿಸಿದರು.ಇಲ್ಲಿಯ ಬಸವೇಶ್ವರ ನಗರ ಸಿ ಬ್ಲಾಕ್ ಗಣೇಶ ದೇವಸ್ಥಾನ ಹತ್ತಿರ ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನವನ ಸೇರಿದಂತೆ ವಿವಿಧೆಡೆ ಶುಕ್ರವಾರ ವಿಕಸಿತ ಭಾರತ ಕಾರ್ಯಕ್ರಮದಡಿಯಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಕಸಿತ ಭಾರತಕ್ಕೆ ಪರಿಸರ ಕೊಡುಗೆ ಅನನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಸಿ ನೆಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ ಎಂದರು.ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಆಡಳಿತ ಚುಕ್ಕಾಣಿ ಹಿಡಿದ ನಂತರ ದೇಶದಲ್ಲಿ ಸಮಗ್ರ ಬದಲಾವಣೆಗಳು ಕಾಣಲಾರಂಭಿಸಿದೆ. ಐದಾರು ದಶಕಗಳಿಂದ ದೇಶವನ್ನು ನರಳುವಂತೆ ಮಾಡಿದ್ದ ಭಯೋತ್ಪಾದನೆ ಮತ್ತು ಅದಕ್ಕೆ ನೆಲೆಯಾಗಿದ್ದ ಕಾಶ್ಮೀರದಲ್ಲಿ ಆರ್ಟಿಕಲ್ 370ರ ರದ್ಧತಿ ಮೂಲಕ ದೇಶವನ್ನು ಸುರಕ್ಷತೆಗೆ ಸಜ್ಜುಗೊಳಿಸಿದ್ದಾರೆ. ಅಲ್ಲದೇ ದೇಶದ ಮೇಲೆ ಭಯೋತ್ಪಾದನೆಯ ನೆರಳು ಬೀಳದಂತೆ ನೋಡಿಕೊಂಡಿದ್ದು, ಅಂಥ ಪ್ರಯತ್ನ ಮಾಡಿದವರಿಗೆ ಏರ್ ಸ್ಟ್ರೈಕ್ ಮತ್ತು ಇತ್ತೀಚಿನ ದಿನಗಳಲ್ಲಿ ಆದ ಆಪರೇಷನ್ ಸಿಂದೂರ ಮೂಲಕ ಉತ್ತರ ನೀಡಿದ್ದಾರೆ. ಇದು ಹೀಗೆಯೇ ಮುಂದುವರಿಯಲಿದೆ ಎಂದರು.ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಸಿದ್ದರಾಜು ಕಲಕೋಟಿ, ಪ್ರಧಾನ ಕಾರ್ಯದರ್ಶಿಗಳಾದ ನಂಜುಂಡೇಶ ಕಳ್ಳೇರ, ಡಾ. ಸಂತೋಷ ಆಲದಕಟ್ಟಿ, ವೆಂಕಟೇಶ ನಾರಾಯಣಿ, ನಗರ ಮಂಡಳದ ಅಧ್ಯಕ್ಷ ಗಿರೀಶ ತುಪ್ಪದ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ನಾಗೇಂದ್ರ ಕಡಕೋಳ, ಪರಮೇಶಪ್ಪ ಮೇಗಳಮನಿ, ನಗರಸಭೆ ಸದಸ್ಯರಾದ ಶಿವಯೋಗಿ ಹುಲಿಕಂತಿಮಠ, ಚೆನ್ನಮ್ಮ ಬ್ಯಾಡಗಿ, ಪ್ರಮುಖರಾದ ಕಿರಣ ಕೋಣನವರ, ರುದ್ರೇಶ ಚಿನ್ನಣ್ಣವರ, ಲಲಿತಾ ಗುಂಡೇನಳ್ಳಿ, ರಾಜೇಶ್ವರಿ ವಿಷ್ಣುಗೌಡ್ರು, ರೋಹಿಣಿ ಪಾಟೀಲ, ಲತಾ ಬಡ್ನಿಮಠ, ಚೆನ್ನಮ್ಮ ಪಾಟೀಲ, ನಾಗರಾಜ ಹರಿಗೋಲ, ಮಹಾಲಿಂಗಯ್ಯ ಹಿರೇಮಠ, ಗಿರೀಶ ಶೆಟ್ಟರ, ನಿಖಿಲ್ ಡೊಗ್ಗಳ್ಳಿ ಇತರರು ಇದ್ದರು.ಇಂದು ಅಂಚೆ ಕಚೇರಿಗಳಲ್ಲಿ ವಹಿವಾಟು ಇರಲ್ಲ

ಹಾವೇರಿ: ಹಾವೇರಿ ಅಂಚೆ ವಿಭಾಗದ ವ್ಯಾಪ್ತಿಯ ಪ್ರಧಾನ ಅಂಚೆ ಕಚೇರಿ, ಉಪ ಹಾಗೂ ಶಾಖಾ ಅಂಚೆ ಕಚೇರಿಗಳಲ್ಲಿ ಜೂ. 23ರಂದು ಹೊಸ ತಂತ್ರಾಂಶ ಅಳವಡಿಕೆ ಜಾರಿಯಾಗುತ್ತಿರುವ ಹಿನ್ನೆಲೆ, ತಯಾರಿಯಾಗಿ ಜೂ. 21ರಂದು ಹಾವೇರಿ ಪ್ರಧಾನ ಅಂಚೆ ಕಚೇರಿಯ ವ್ಯಾಪ್ತಿಯ ಎಲ್ಲ ಅಂಚೆ ಕಚೇರಿಗಳಲ್ಲಿ ಎಲ್ಲ ರೀತಿಯ ವಹಿವಾಟುಗಳು ಸ್ಥಗಿತಗೊಳ್ಳಲಿವೆ.

ಜೂ. 23ರಿಂದ ಹೊಸ ತಂತ್ರಾಂಶದಲ್ಲಿ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಗ್ರಾಹಕರು ಸಹಕರಿಸಬೇಕು ಎಂದು ಹಾವೇರಿ ವಿಭಾಗದ ಅಂಚೆ ಅಧೀಕ್ಷಕ ಮಂಜುನಾಥ ಹುಬ್ಬಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ