ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಬೋಗಾದಿಯಲ್ಲಿರುವ ಹರಿ ವಿದ್ಯಾಲಯ ಶಾಲೆಯಲ್ಲಿ ನಡೆದ ಪದಕ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು. ಹಾಗೆಯೇ ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಗಳಾಗಿ ರೂಪುಗೊಳ್ಳಬೇಕು. ಪದಕಗಳು ಉತ್ತಮ ಸಾಧನೆಗೆ ಪ್ರೇರಣೆ ಒದಗಿಸುತ್ತದೆ ಎಂದರು.
ಹರಿ ವಿದ್ಯಾಲಯ ಶಾಲೆಯ 2025- 26ನೇ ಸಾಲಿನ ವಿದ್ಯಾರ್ಥಿ ಪರಿಷತ್ ಗೆ ಚುನಾವಣೆಯ ಮೂಲಕ ವಿದ್ಯಾರ್ಥಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಅವರಿಗೆ ಪದಕ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳ ಕವಾಯತು ಆಕರ್ಷಕವಾಗಿತ್ತು.ಸಂಸ್ಥೆಯ ಕಾರ್ಯದರ್ಶಿ ಭಗವಾನ್, ಪಿಯು ಕಾಲೇಜಿನ ಡೀನ್ ಬ್ರಿಜೇಶ್ ಪಟೇಲ್, ವಿಜ್ಞಾನ ವಿಭಾಗದ ಸಂಯೋಜಕ ಡಾ. ಭಾರ್ಗವ ರಾಮು, ಶಾಲೆಯ ಶೈಕ್ಷಣಿಕ ಸಲಹೆಗಾರ ಜನಾರ್ಧನ್, ಪ್ರಾಂಶುಪಾಲರು ಹಾಗೂ ಶಿಕ್ಷಕರು ಇದ್ದರು.