ಧಾರವಾಡ: ಹದಿಹರೆಯದಲ್ಲಿ ಮಕ್ಕಳು ತಾವು ಕಂಡ ಕನಸು,ಆಸೆಯನ್ನು ಈಡೇರಿಸುವ ಬರದಲ್ಲಿ ದಾರಿ ತಪ್ಪುವ ಸಾಧ್ಯತೆ ಹೆಚ್ಚು.ಈ ಹದಿಹರೆಯ ಮಕ್ಕಳ ಪಾಲಿಗೆ ಸಂಕ್ರಮಣ ಕಾಲ ಎಂದು ಹಿರಿಯ ವೈದ್ಯ ಡಾ. ಸಂಜೀವ ಕುಲಕರ್ಣಿ ಹೇಳಿದರು.
ಹದಿಹರೆಯದಲ್ಲಿ ಮಕ್ಕಳ ಮೇಲೆ ಯಾವುದೇ ರೀತಿಯ ಒತ್ತಡವಾಗಲಿ,ಅತಿಯಾದ ಸ್ವಾತಂತ್ರ‍್ಯ ನೀಡುವುದೂ ಸಹ ಕಷ್ಟ. ಇಂದು ಭಾರತದಲ್ಲಿ ಹದಿಹರೆಯದಲ್ಲಿ ಸ್ವೇಚ್ಛಾಚಾರ ಪ್ರವೃತ್ತಿಯಿಂದ, ಬೇಡವಾದ ಗರ್ಭಪಾತದಿಂದ ಒಂದು ವರ್ಷಕ್ಕೆ ಐವತ್ತು ಲಕ್ಷ ಗರ್ಭಪಾತಗಳಾಗುತ್ತಿದ್ದು ಆತಂಕಕಾರಿ.ಈ ಎಲ್ಲ ಸಮಸ್ಯೆ ಪರಿಹಾರಕ್ಕೆ ಶಾಲಾ ಹಂತದಲ್ಲಿ ಲೈಂಗಿಕ ಶಿಕ್ಷಣ ನೀಡುವುದು ಅಗತ್ಯ ಎಂದು ಹೇಳಿದರು.
ವಿಶ್ರಾಂತ ಪೊಲೀಸ್ ಅಧೀಕ್ಷಕ ಡಿ.ಎಂ.ನಾಯಕ ಮಾತನಾಡಿ, ಭಾಷೆಗಿಂತ ಭಾವನೆ ಮುಖ್ಯ. ಇದೊಂದು ಭಾವನಾತ್ಮಕ ಕಾರ್ಯಕ್ರಮ ಎಂದರು.ಹಿರಿಯ ರಂಗಕರ್ಮಿ ಡಾ.ಶಶಿಧರ ನರೇಂದ್ರ ಅಧ್ಯಕ್ಷತೆ ವಹಿಸಿದ್ದರು. 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕೆ.ಇ.ಬೋರ್ಡ್ ಆಂಗ್ಲ ಮಾಧ್ಯಮ ಶಾಲೆಯ ಸಮರ್ಥ ಉಮರ್ಜಿ ಅವರಿಗೆ ವಿದ್ಯಾರಶ್ಮಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕೆ.ಎಚ್.ನಾಯಕ, ಶಂಕರ ಹಲಗತ್ತಿ ಸ್ವಾಗತಿಸಿ, ಶಂಕರ ಕುಂಬಿ, ಶಶಿಧರ ತೊಡಕರ ಇದ್ದರು.