ಪತ್ರಿಕೆಗಳಿಂದ ಮಕ್ಕಳಲ್ಲಿ ಭಾಷಾ ಕೌಶಲ್ಯ ವೃದ್ಧಿ

KannadaprabhaNewsNetwork |  
Published : Aug 27, 2026, 02:30 AM IST
ಕನ್ನಡ ದಿನಪತ್ರಿಕೆ ಓದುವ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ಪಡೆದ ವಿದ್ಯಾರ್ಥಿಗಳು. | Kannada Prabha

ಸಾರಾಂಶ

ದಿನಪತ್ರಿಕೆ ಓದು ಕೇವಲ ಪ್ರಾರ್ಥನಾ ಸಮಯದ ಚಟುವಟಿಕೆಯಾಗಿರದೆ ಮಕ್ಕಳು ನಿತ್ಯದ ಓದುವ ರೂಢಿ ಇಟ್ಟುಕೊಳ್ಳಬೇಕು. ಇದು ಬರೀ ಜ್ಞಾನಾರ್ಜನೆಯಲ್ಲದೇ ಭಾಷಾ ಕೌಶಲ್ಯ ಬೆಳೆಸಲು ಸಹಕಾರಿಯಾಗುತ್ತದೆ.

ಧಾರವಾಡ:

ದಿನಪತ್ರಿಕೆ ಓದು ಕೇವಲ ಪ್ರಾರ್ಥನಾ ಸಮಯದ ಚಟುವಟಿಕೆಯಾಗಿರದೆ ಮಕ್ಕಳು ನಿತ್ಯದ ಓದುವ ರೂಢಿ ಇಟ್ಟುಕೊಳ್ಳಬೇಕು. ಇದು ಬರೀ ಜ್ಞಾನಾರ್ಜನೆಯಲ್ಲದೇ ಭಾಷಾ ಕೌಶಲ್ಯ ಬೆಳೆಸಲು ಸಹಕಾರಿಯಾಗುತ್ತದೆ ಎಂದು ಶಿಕ್ಷಕ, ಸಾಹಿತಿ ಡಾ. ಲಿಂಗರಾಜ ರಾಮಾಪುರ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಶಿವಗಂಗಾ ಶ್ರೀವೀರಪ್ಪ ರಾಮಾಪೂರ ದತ್ತಿ ಅಂಗವಾಗಿ ನವಲಗುಂದ ತಾಲೂಕಿನ ಮೊರಬ ಗ್ರಾಮದ ಅಕ್ಕಮಹಾದೇವಿ ಹಂಚಿನಾಳ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕನ್ನಡ ದಿನಪತ್ರಿಕೆ ಓದುವ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ನವಲಗುಂದ ಕಸಾಪ ಅಧ್ಯಕ್ಷ ಸಿದ್ದಯ್ಯ ಹಿರೇಮಠ, ಪತ್ರಿಕೆ ಓದುವುದರಿಂದ ಜಗತ್ತಿನ ಜ್ಞಾನ ದೊರೆಯುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಆತ್ಮಸ್ಥೈರ್ಯ ಸಿಗುತ್ತದೆ ಎಂದರು.

ಮೊರಬ ಹೋಬಳಿ ಘಟಕ ಕಸಾಪ ಅಧ್ಯಕ್ಷ ಭೀಮರಾಶಿ ಹೂಗಾರ, ಗ್ರಾಮ ಘಟಕ ಅಧ್ಯಕ್ಷ ವಿ.ಎಸ್. ಶಿರಗುಪ್ಪಿ, ಮಾಜಿ ಅಧ್ಯಕ್ಷ ಎಸ್.ಎಂ. ಮೆಣಸಿನಕಾಯಿ, ಎಸ್‌ಡಿಎಂಸಿಗಳಾದ ನಾಗರತ್ನಾ ಕೆರಿಮನಿ, ಹನುಮಂತ ಗರಗ, ಚಂದ್ರಶೇಖರ ಸಗರದ, ಸದಸ್ಯರಾದ ಜಗದೀಶ್ವರಿ ವಡೇಯರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಾಲ್ಕು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಮೊರಬ ಒಳಗೊಂಡಂತೆ ಧಾರವಾಡ, ಜಾವೂರು, ತಿರ್ಲಾಪೂರ ಮೊದಲಾದ ಸುತ್ತಮುತ್ತಲಿನ ಗ್ರಾಮಗಳ ೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಿರ್ಣಾಯಕರಾಗಿ ಶಿಕ್ಷಕರಾದ ಎಚ್‌.ಎಸ್. ಚೆನ್ನಪ್ಪಗೌಡ್ರ, ಮಂಜುನಾಥ ಮನಮಿ, ಸವಿತಾ ಕಳಸಣ್ಣವರ, ಶರಣು ಕುರಿ, ಮಧುಮತಿ ಬಾಸುತ್ಕರ, ಶಾಂತಾ ಜಾಲಿಕಟ್ಟಿ ಕಾರ್ಯ ನಿರ್ವಹಿಸಿದರು. ಮುಖ್ಯ ಶಿಕ್ಷಕ ಲಿಂಗರಾಜ ಕಮತ ಸ್ವಾಗತ, ಸವಿತಾ ಕಳಸಣ್ಣವರ ನಿರೂಪಣೆ, ಮಹಾಂತೇಶ ಇಟಗಿ ವಂದಿಸಿದರು. ಫಲಿತಾಂಶ:ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಮೇಘಾ ನಾಯಕ, ಪವನ ಮಾಸ್ತಿ, ಆದ್ಯಾ ಬಡಿಗೇರ, ಅನ್ವಿತಾ ಬೆಟಸೂರ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಲಕ್ಷ್ಮಿ ದೇಸಾಯಿ, ಪೂಜಾ ಜಾಲಿಹಾಳ, ತನುಶ್ರೀ ಪಾಟೀಲ, ಪೃಥ್ವಿ ತುಕ್ಕಪ್ಪನವರ, ಪ್ರೌಢಶಾಲೆ ವಿಭಾಗದಲ್ಲಿ ಸವಿತಾ ಕೊಪ್ಪದ, ಐಶ್ವರ್ಯ ತಡಕೋಡ, ಅಕ್ಷತಾ ರಾಯ್ಕರ, ರಕ್ಷಿತಾ ಕುರಿ, ಕಾಲೇಜು ವಿಭಾಗದಲ್ಲಿ ಶಿಲ್ಪಾ ಚೆನ್ನಣ್ಣನವರ, ಶಿವರಾಜ ಮುಳಮುತ್ತಲ, ಭೂಮಿಕಾ ಮರಿಗೌಡ್ರ, ತ್ರಿವೇಣಿ ಜಲರಡ್ಡಿ ಅನುಕ್ರಮವಾಗಿ ಪ್ರಶಸ್ತಿ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಕ್ತದಾನದಿಂದ ಜೀವ ಉಳಿಸುವ ಪುಣ್ಯ ಪ್ರಾಪ್ತಿ
ಭಾರತೀಯರಲ್ಲಿ ಸಹಬಾಳ್ವೆ ಬಾಂಧವ್ಯ ಮುಖ್ಯ