ಕನ್ನಡಪ್ರಭವಾರ್ತೆ ಶಹಾಬಾದ
ಅವರು ನಗರದ ಸಹಾರಾ ಸಭಾಗೃಹದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ, ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರದಲ್ಲಿ ರಾಜ್ಯಸಭೆ ಸದಸ್ಯರು, ಎಐಸಿಸಿ ಅಧ್ಯಕ್ಷರಾಗಿ ಡಾ.ಮಲ್ಲಿಕಾರ್ಜುನ ಖರ್ಗೆ, ಲೋಕ ಸಭೆಯಲ್ಲಿ ರಾಧಾಕೃಷ್ಣ, ಜಿಲ್ಲೆಯಲ್ಲಿ ನಾವು ನೀವೆಲ್ಲಾ ಸೇರಿ ಜಿಲ್ಲೆ ಅಭಿವೃದ್ಧಿ ಮಾಡೋಣ ಎಂದರು.
ಕಳೆದ ಬಾರಿ ಕಲಬುರಗಿ ಲೋಕ ಸಭಾ ಚುನಾವಣೆಯಿಲ್ಲಿ ಬಿಜೆಪಿ, ಆರ್‌ಎಸ್‍ಎಸ್ ಕುತಂತ್ರಿದಿಂದ ಖರ್ಗೆ ಸೋಲಾಗಿದೆ. ಈ ಸೋಲಿನಿಂದಾಗ ಕಲಬುರಗಿಗೆ ಖರ್ಗೆ ಅದ್ಹೇಗೆ ಅನಿವಾರ್ಯ ಎಂಬುವುದು ಜನತೆಗೆ ಗೊತ್ತಾಗಿದೆ ಎಂದರು.ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕತ್ವವನ್ನು ಡಾ.ಖರ್ಗೆ ವಹಿಸಿದ್ದು, ಕೇಂದ್ರದಲ್ಲಿ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕೆಂದು ಸಂಕಲ್ಪ ಮಾಡಿದ್ದಾರೆ. ಅವರ ಸಂಕಲ್ಪ ಕಲಬುರಗಿಯಿಂದಲೇ ಈಡೇರಬೇಕೆಂದರು.
ಕೆಪಿಸಿಸಿ ವಕ್ತಾರ ವಸಂತಕುಮಾರ, ಮಾಜಿ ಸಚಿವ ರೇವುನಾಯಕ ಬೆಳಮಗಿ ಮಾತನಾಡಿದರು, ತಿಪ್ಪಣ್ಣಪ್ಪ ಕಮಕನೂರ, ಡಿ.ಜಿ.ಸಾಗರ, ಜಿಲ್ಲಾ ಅಧ್ಯಕ್ಷ ಜಗದೇವ ಗುತ್ತೇದಾರ, ಶಿವಾನಂದ ಪಾಟೀಲ, ರಾಯಚೂರು ಶಾಸಕ ಹಂಪನಗೌಡ, ಶ್ಯಾಮ ನಾಟೀಕಾರ, ಚಂದ್ರಿಕಾ ಪರಮೇಶ್ವರ, ದೇವೆಂದ್ರಪ್ಪ ಮರತೂರ, ರೇಣುಕಾ, ಸುರೇಶ ನಾಯಕ, ಕಿಶನ್ ನಾಯಕ ವಿಜಯಕುಮಾರ ಮುಟ್ಟತ್ತಿ, ಅರವಿಂದ ಚವ್ಹಾಣ, ಸೇರಿದಂತೆ ಇತರರು ಇದ್ದರು. ಡಾ.ಎಂ.ಎ.ರಶೀದ ಅಧ್ಯಕ್ಷತೆ ವಹಿಸಿದ್ದರು.