ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಅಸಾಧ್ಯ: ಆರ್.ಅಶೋಕ್

KannadaprabhaNewsNetwork |  
Published : Apr 01, 2026, 01:45 AM IST
ಚಿತ್ರ 1 | Kannada Prabha

ಸಾರಾಂಶ

ಚಿತ್ರದುರ್ಗದಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್ ವಾಗ್ದಾಳಿ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಈ ಸರ್ಕಾರ ದುರಾಡಳಿತ, ಭ್ರಷ್ಟಾಚಾರ, ಶೇ.60ರಷ್ಟು ಕಮೀಷನ್‍ನಲ್ಲಿ ಮುಳುಗಿದೆ. ಈ ಸರ್ಕಾರದಿಂದ ಅಭಿವೃದ್ಧಿ ಮರೀಚಿಕೆಯಾಗಿದ್ದು ಸಿಎಂ ಸಿದ್ದರಾಮಯ್ಯ ಸಾಲದರಾಮಯ್ಯ ಆಗಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಶೋಕ್ ವಾಗ್ದಾಳಿ ನಡೆಸಿದರು.

ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ 1 ಲಕ್ಷ 32 ಸಾವಿರ ಕೋಟಿ ರು. ಸಾಲದಲ್ಲಿ ಮುಳುಗಿದೆ. ಸಿದ್ದರಾಮಯ್ಯ ಒಬ್ಬನೇ 4 ಲಕ್ಷ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ. ಒಬ್ಬರ ತಲೆ ಮೇಲೆ 80 ಸಾವಿರ ಸಾಲದ ಹೊರೆ ಏರಿದೆ. ಈ ಸರ್ಕಾರ ನಂಬಿ ಕುಳಿತರೆ ಅಧೋಗತಿ ಆಗಲಿದೆ. ಅನ್ನಭಾಗ್ಯದ್ದು 750 ಕೋಟಿ ಕೊಟ್ಟಿಲ್ಲ. ಸಿದ್ದರಾಮಯ್ಯ ಸಾಲಗಾರ ಆಗಿದ್ದಾನೆ ಎಂದು ಅವರು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ಈ ಸರ್ಕಾರ ಮುಂದೆ ಗೆಲ್ಲಲ್ಲ. ಜನರು ಈ ಸರ್ಕಾರವನ್ನು ಕಿತ್ತೊಗೆಯುತ್ತಾರೆ. ಇವೆಲ್ಲವೂ ಚುನಾವಣೆಗೆ ಪ್ರತಿಬಿಂಬ ಆಗಲಿವೆ. ಇದನ್ನೆಲ್ಲಾ ಪರಿಗಣಿಸಿ ಜನರು ಬಿಜೆಪಿ ಬೆಂಬಲಿಸಿ ಮತ ಹಾಕ್ತಾರೆ. ಬಿಜೆಪಿಯ ಕಳ್ಳೆತ್ತುಗಳಿಗೆ ವೋಟ್ ಹಾಕಬೇಡಿ ಎಂಬ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಡಿಕೆಶಿ, ಸಿದ್ದರಾಮಯ್ಯ ಜೋಡೆತ್ತುಗಳಲ್ಲ, ಕುಂಟೆತ್ತುಗಳು. ಡಿಕೆಶಿ, ಸಿದ್ದರಾಮಯ್ಯ ಇಬ್ಬರು ಸಹ ಒಬ್ಬರ ದಾರಿಗೆ ಮತ್ತೊಬ್ಬರು ಬರುವುದಿಲ್ಲ. ಅಧಿಕಾರಕ್ಕಾಗಿ ಡಿಕೆಶಿ ಬಕಪಕ್ಷಿಯಂತೆ ಕಾಯುತ್ತಿದ್ದಾರೆ. ಕುಂಟೆತ್ತುಗಳು ಬೇಡವೆಂದು ಜನ ತೀರ್ಮಾನಿಸಿದ್ದಾರೆ.

ನಾವು ಅಧಿಕಾರದಲ್ಲಿದ್ದಾಗ ಹೆಚ್ಚು ಸಾಲ ಮಾಡದೇ ಅಭಿವೃದ್ಧಿಗೆ ಒತ್ತು ನೀಡಲಾಗಿತ್ತು. ಆದರೆ ಈ ಸರ್ಕಾರ ಮೂರು ವರ್ಷಗಳಿಂದ ಯಾವುದೇ ಅಭಿವೃದ್ಧಿ ಮಾಡಿಲ್ಲ. ಏನೇನು ಉದ್ಘಾಟನೆ ಮಾಡ್ತಿದ್ದಾರೆ ಅವೆಲ್ಲವೂ ಬಿಜೆಪಿ ಅವಧಿಯವು. ಕೇಂದ್ರ ಸರ್ಕಾರ ಜನರ ಮೇಲೆ ಬೆಲೆ ಏರಿಕೆ ಯುದ್ಧ ಮಾಡ್ತಿದೆ ಎಂಬ ಡಿಕೆಶಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ತುಪ್ಪದ ಬೆಲೆ, ಜಿಎಸ್.ಟಿ ಕಡಿಮೆ ಮಾಡಿದೆ. ಕೇಂದ್ರ ಕಡಿಮೆ ಮಾಡಿದ್ರೆ, ರಾಜ್ಯ ಸರ್ಕಾರ ಎಲ್ಲವನ್ನು ಜಾಸ್ತಿ ಮಾಡಿದೆ. ಎರಡು ಉಪಚುನಾವಣೆ ಬಳಿಕ ಜನರ ಮೇಲೆ ಎಲ್ಲಾ ತೆರಿಗೆ ಹಾಕ್ತಾರೆ. ಇನ್ಮುಂದೆ ರಾಜ್ಯ ಸರ್ಕಾರ ಮಾರಿಹಬ್ಬ ಶುರು ಮಾಡಲಿದೆ. ಜನರು ಕಾಂಗ್ರೆಸ್ ಸರ್ಕಾರಕ್ಕೆ ಈಗ ಬುದ್ಧಿ ಕಲಿಸಬೇಕಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಮೂಲ್‌ ಸೌಲಭ್ಯಗಳ ಪ್ರಯೋಜನ ಪಡೆಯಿರಿ
ನೆಲಮಂಗಲ ರೋಟರಿ ಸಂಸ್ಥೆಗೆ ಸಮುದಾಯ ಸೇವಾ ಪ್ರಶಸ್ತಿ