ಕಿಮ್‌ನಂತಹ ಸಂಸ್ಥೆಗಳಿದ್ದರೆ ಅಭಿವೃದ್ಧಿ ಸಾಧ್ಯ

KannadaprabhaNewsNetwork |  
Published : Feb 25, 2025, 12:47 AM IST
24 ಎಚ್‍ಆರ್‍ಆರ್ 01-01ಎಹರಿಹರದ ಕಿರ್ಲೋಸ್ಕರ್ ಇನ್ಸ್ಟಿಟೂಟ್ ಆಪ್ ಮ್ಯಾನೇಜ್‍ಮೆಂಟ್ ವತಿಯಿಂದ ನಿರ್ಮಿಸಲಾಗಿದ್ದ ಜೋಡು ಬಸವೇಶ್ವರ ದೇವಸ್ಥಾನದಿಂದ ಸುಮಾರು ಅರ್ಧ ಕಿಲೋಮೀಟರ್ ರಸ್ತೆಯನ್ನು ಶಾಸಕ ಬಿ.ಪಿ. ಹರೀಶ್ ಉದ್ಘಾಟಿಸಿದರು. ಕಿಮ್ ನಿರ್ದೇಶಕ ಪ್ರದೀಪ್ ಕೊಪರ್ಡೆಕರ್ ಹಾಗೂ ಇತರರು ಭಾಗವಹಿಸಿದ್ದರು. | Kannada Prabha

ಸಾರಾಂಶ

ಕಿಮ್‌ನಂಥ ಸಂಸ್ಥೆಗಳು ಹೆಚ್ಚಾದಷ್ಟು ನಗರ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಆಗಲು ಸಾಧ್ಯವಾಗಲಿದೆ ಎಂದು ಶಾಸಕ ಬಿ.ಪಿ. ಹರೀಶ್ ಹರಿಹರದಲ್ಲಿ ಹೇಳಿದ್ದಾರೆ.

- ಅರ್ಧ ಕಿಲೋ ಮೀಟರ್ ರಸ್ತೆ ಉದ್ಘಾಟಿಸಿ ಹರಿಹರ ಶಾಸಕ ಬಿ.ಪಿ.ಹರೀಶ್‌ - - - ಕನ್ನಡಪ್ರಭ ವಾರ್ತೆ ಹರಿಹರ ಕಿಮ್‌ನಂಥ ಸಂಸ್ಥೆಗಳು ಹೆಚ್ಚಾದಷ್ಟು ನಗರ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಆಗಲು ಸಾಧ್ಯವಾಗಲಿದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದ ಕಿರ್ಲೋಸ್ಕರ್ ಇನ್ಸ್‌ಟಿಟೂಟ್ ಆರ್ಫ ಮ್ಯಾನೇಜ್‍ಮೆಂಟ್ ವತಿಯಿಂದ ನಿರ್ಮಿಸಲಾಗಿದ್ದ ರಾಘವೇಂದ್ರ ಮಠದ ಜೋಡು ಬಸವೇಶ್ವರ ದೇವಸ್ಥಾನದಿಂದ ಸುಮಾರು ಅರ್ಧ ಕಿಲೋ ಮೀಟರ್ ರಸ್ತೆ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಸಂಸ್ಥೆಯೊಂದು ಸಾಮಾಜಿಕ ಜವಾಬ್ದಾರಿಯಿಂದ ರಸ್ತೆ ನಿರ್ಮಣ ಮಾಡುವ ಮೂಲಕ ಕಳಕಳಿ ತೋರಿಸಿದೆ. ಹರಿಹರದ ಹರಿಹರೇಶ್ವರ ದೇವಸ್ಥಾನ ಹಾಗೂ ಸುತ್ತಮುತ್ತಲಿಂದ ಗುತ್ತೂರು ಸಂಪರ್ಕಿಸಲು ಅತಿ ಹತ್ತಿರದ ರಸ್ತೆ ಇದಾಗಿದೆ. ಸುತ್ತಮುತ್ತಲಿನ ಜನರಿಗೆ ಇದರಿಂದ ಅನುಕೂಲವಾಗುತ್ತದೆ ಎಂದರು.

ಅಲ್ಲದೇ, ಹರಪನಹಳ್ಳಿಯಿಂದ ಹರಿಹರಕ್ಕೆ ಸಂಕಲ್ಪ ಕಲ್ಪಿಸುವ ಮುಖ್ಯ ರಸ್ತೆ ಮಳೆ, ಟ್ರಾಫಿಕ್ ಜಾಂ ಹಾಗೂ ಇತರೆ ಸಮಸ್ಯೆಗಳಾದಾಗ ಈ ಹಾದಿ ಸಮೀಪವಾಗುತ್ತಿತ್ತು. ರಸ್ತೆ ಹದಗೆಟ್ಟ ಪರಿಣಾಮ ಸಂಚಾರ ಯೋಗ್ಯವಾಗಿರಲಿಲ್ಲ. ಕಿಮ್ ಮುಂದಿನ ರಸ್ತೆ ನಗರಸಭೆಯಿಂದ ಸರಿಪಡಿಸಿದರೆ ಅನಿವಾರ್ಯ ಕಾರಣಗಳಲ್ಲಿ ಈ ರಸ್ತೆ ವಾಹನ ಸಂಚಾರಕ್ಕೆ ಯೋಗ್ಯವಾಗುತ್ತದೆ ಎಂದರು.

ಕಿಲೋಸ್ಕರ್ ಮ್ಯಾನೇಜ್‍ಮೆಂಟ್ ಸರ್ವಿಸ್ ಲಿಮಿಟೆಡ್ ನಿರ್ದೇಶಕ ಪ್ರದೀಪ್ ಕೊಪರ್ಡೆಕರ್ ಮಾತನಾಡಿ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ಸಂಸ್ಥೆಯ ಆಶಯವಾಗಿದೆ. ರಸ್ತೆ ಡಾಂಬರೀಕರಣ ಹಾಗೂ ಎರಡೂ ಬದಿ ಕಾಂಕ್ರೀಟ್ ಚರಂಡಿ ನಿರ್ಮಿಸಿದ್ದು, ಸುಮಾರು ₹36.5 ಲಕ್ಷ ವ್ಯಹಿಸಲಾಗಿದೆ. ಇಲ್ಲಿನ ವಿದ್ಯಾರ್ಥಿಗಳೊಂದಿಗೆ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಇಂಥ ಸಾಮಾಜಿಕ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದರು.

ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಎಂ. ಜಂಬಣ್ಣ, ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ, ವಾರ್ಡ್ ಸದಸ್ಯರಾದ ವಿರೂಪಾಕ್ಷಿ, ಇಬ್ರಾಹಿಂ ಖುರೇಶಿ, ಸಂಸ್ಥೆ ನಿರ್ದೇಶಕ ಡಾ. ನಂದೀಶ್ ವಿ. ಹಿರೇಮಠ್, ಡಿನ್ ಡಾ. ಬಿ.ವಿ. ನಾಗರಾಜ್, ಡಾ. ವಿನಯ್ ಭೂಷಣ್, ಮ್ಯಾನೇಜರ್ ರಾಘವೇಂದ್ರ ದೀಕ್ಷಿತ್, ಎಂ.ಪಿ. ಪರಮೇಶ್ವರಪ್ಪ, ಗುತ್ತಿಗೆದಾರ ವಾಮನಾಯಸ್ ಕುಲಕರ್ಣಿ, ಪಂಚವಟಿ ಎಂಟರ್‌ಪ್ರೈಸಸ್ ಕೆ.ಟಿ. ವೀರಪ್ಪ ಕಾಲೇಜಿನ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

- - -

-24ಎಚ್‍ಆರ್‍ಆರ್01-01ಎ:

ಹರಿಹರದ ಕಿರ್ಲೋಸ್ಕರ್ ಇನ್‌ಸ್ಟಿಟೂಟ್ ಆಫ್‌ ಮ್ಯಾನೇಜ್‍ಮೆಂಟ್ ವತಿಯಿಂದ ನಿರ್ಮಿಸಲಾಗಿದ್ದ ಜೋಡು ಬಸವೇಶ್ವರ ದೇವಸ್ಥಾನದಿಂದ ಸುಮಾರು ಅರ್ಧ ಕಿಲೋಮೀಟರ್ ರಸ್ತೆಯನ್ನು ಶಾಸಕ ಬಿ.ಪಿ. ಹರೀಶ್ ಉದ್ಘಾಟಿಸಿದರು. ಕಿಮ್ ನಿರ್ದೇಶಕ ಪ್ರದೀಪ್ ಕೊಪರ್ಡೆಕರ್ ಇತರರು ಇದ್ದರು.

PREV

Recommended Stories

ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು
ಚೈತಾಲಿ ಹತ್ಯೆ ಖಂಡಿಸಿ ಪ್ರತಿಭಟನೆ