ಸಹಕಾರ ಮನೋಭಾವದಿಂದ ಅಭಿವೃದ್ಧಿ ಸಾಧ್ಯ: ಏಕದಂಡಗಿ ಶ್ರೀ

KannadaprabhaNewsNetwork | Published : Sep 24, 2024 1:49 AM

ಸಾರಾಂಶ

Development is possible with cooperative spirit: Ekdandagi Shri

-ಸಹಕಾರ ಸಂಘದ 19ನೇ ವಾರ್ಷಿಕ ಮಹಾಸಭೆ । ಹಲವು ಸಾಧಕರಿಗೆ ಸನ್ಮಾನ

--------

ಕನ್ನಡಪ್ರಭ ವಾರ್ತೆ ಶಹಾಪುರ

ಕೊಡು, ಕೊಳ್ಳುವಿಕೆಯೆಂಬುದು ನಮ್ಮ ಮನೆಯಿಂದಲೇ ಆರಂಭವಾಗುತ್ತದೆ. ಸಂಘ-ಸಂಸ್ಥೆಗಳು ಸಾಧನೆಯೆಡೆಗೆ ಮುನ್ನಡೆಯಬೇಕಾದರೆ ಆಯಾ ಸಂಘದ ಪದಾಧಿಕಾರಿಗಳು, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಪರಸ್ಪರರಲ್ಲಿ ಸೇವಾ ಮನೋಭಾವ ಮತ್ತು ಸಂಘದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯವಿದೆ ಎಂದು ಏಕದಂಡಗಿ ಮಠದ ಅಜೇಂದ್ರ ಮಹಾಸ್ವಾಮೀಜಿ ತಿಳಿಸಿದರು.

ನಗರದ ಕಾಳಿಕಾದೇವಿ ಸಭಾಂಗಣದಲ್ಲಿ ನಡೆದ ಕಾಳಿಕಾ ದೇವಿ ಕರಕುಶಲಗಾರರ ಸಹಕಾರ ಸಂಘದ 19ನೇ ವರ್ಷದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ಅಭಿವೃದ್ಧಿಗೆ ಸಮಾಜದವರು ಹಾಗೂ ಸಿಬ್ಬಂದಿಯ ಸಹಕಾರ ಕಾರಣ ಎಂದು ಹೇಳಿದರು.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಮಾತನಾಡಿ, ಸಂಘ-ಸಂಸ್ಥೆಗಳು ಎಂದಾಗ ಸಮಸ್ಯೆಗಳು ಬರುವುದು ಸಹಜ. ಅವುಗಳನ್ನು ಸಮರ್ಪಕವಾಗಿ ನಿಭಾಯಿಸಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿದಾಗ ಮಾತ್ರ ಬೆಳವಣಿಗೆ ಸಾಧ್ಯ ಎಂದು ಹೇಳಿದರು.

ಹಿರಿಯ ಪತ್ರಕರ್ತ ನಾರಾಯಣಾಚಾರ್ಯ ಸಗರ ಮಾತನಾಡಿದರು. ಲೆಕ್ಕ ಪರಿಶೋಧಕರಾದ ಶರಣಬಸವ ಬ್ಯಾಂಕ್‌ನ ಸಮಗ್ರ ವಹಿವಾಟು ಕುರಿತು ತಿಳಿಸಿದರು. ದೇವಿಂದ್ರಪ್ಪ ವಿಶ್ವಕರ್ಮ ಕನ್ಯಾಕೋಳೂರ ಮಾತನಾಡಿದರು. ಬ್ಯಾಂಕಿನ ಕಾರ್ಯದರ್ಶಿ ದೇವಿಂದ್ರಪ್ಪಗೌಡ ವಾರ್ಷಿಕ ಮಹಾಸಭೆಯ ಪತ್ರವನ್ನು ಓದಿದರು.

ಅಧ್ಯಕ್ಷ ಶಂಕರಲಿಂಗ ಪತ್ತಾರ ಸಮಾರಂಭದ ಅಧ್ಯಕ್ಷ ತೆವಹಿಸಿದ್ದರು. ಏಕದಂಡಿಗಿ ಮಠದ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಈ ವೇಳೆ ವಿದ್ಯಾರ್ಥಿನಿ ದೀಪಿಕಾ ಪತ್ತಾರ ಎಂಬಿಬಿಎಸ್ ಉಚಿತ ಸ್ಥಾನ ಪಡೆದ ಹಿನ್ನೆಲೆ ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಧನ ನೀಡಿ ಗೌರವಿಸಲಾಯಿತು.

-----

ಪೋಟೋ 22ವೈಡಿಆರ್10:

ಶಹಾಪುರ ನಗರದ ಕಾಳಿಕಾದೇವಿ ಕರಕುಶಲಗಾರರ ಸಹಕಾರ ಸಂಘದ 19ನೇ ವಾರ್ಷಿಕೋತ್ಸವ ಮಹಾಸಭೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಸನ್ಮಾನ ಸಮಾರಂಭವನ್ನು ಏಕದಂಡಗಿ ಮಠದ ಅಜೇಂದ್ರ ಮಹಾಸ್ವಾಮೀಜಿ ಉದ್ಘಾಟಿಸಿದರು.

Share this article