ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಗ್ರಾಮಗಳ ಅಭಿವೃದ್ಧಿ ಶೀಘ್ರವಾಗಿ ಆಗುತ್ತದೆ ಎಂದು ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರೂಪಶ್ರೀ ಹೇಳಿದರು.
ತಾಲೂಕಿನ ಕಂಪಲಾಪುರ ಗ್ರಾಪಂ ಆವರಣದಲ್ಲಿ ಆಯೋಜಿಸಿದ್ದ 2022-23ನೇ ಸಾಲಿನ ಸಾಮಾಜಿಕ ಪರಿಶೋಧನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
2022-23ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ 239 ಕಾಮಗಾರಿಗಳು ಅನುಷ್ಠಾನಗೊಂಡಿದ್ದು, 1.42 ಕೋಟಿ ಬಳಕೆ ಮಾಡಲಾಗಿದೆ.
15ನೇ ಹಣಕಾಸು ಯೋಜನೆ ಅಡಿ 25 ಕಾಮಗಾರಿಗಳು ಅನುಷ್ಠಾನ ಗೊಂಡಿದ್ದು, 20.60 ಲಕ್ಷ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗಿದೆ. ತೆಗೆದ ಕೊಟ್ಟಿಗೆ ಅಭಿವೃದ್ಧಿ, ಕುರಿ, ಮೇಕೆ, ಕೋಳಿ, ಮೀನು ಸಾಕಣೆ, ದರ್ಸರಿ ನಿಂಗುಗುಂಡಿ ಕೆರೆ ಹೂಳೆತ್ತುವುದು, ಕೆರೆ ಅಭಿವೃದ್ಧಿ ರಸ್ತೆ ಅಭಿವೃದ್ಧಿ ಚರಂಡಿ ಅಭಿವೃದ್ಧಿಯೇ ಜಮೀನಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಲುದಾರಿ ಅಭಿವೃದ್ಧಿ ಸಾಲ ಕಾಂಪೌಂಡ್ ತೀರ್ಮಾನ ಜಮೀನುಗೆ ಬದು ನಿರ್ಮಿಸುವುದು, ಹೇಗೆ ಹತ್ತು ಹಲವು ಕಾರ್ಯಕ್ರಮಗಳು ಅನುಷ್ಠಾನದಲ್ಲಿದ್ದು, ಇದನ್ನು ಸರಿಯಾದ ರೀತಿಯಲ್ಲಿ ಪಂಚಾಯಿತಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಬಳಸಿಕೊಂಡಲ್ಲಿ ಹಳ್ಳಿಗಳ ಅಭಿವೃದ್ಧಿ ಸಾಧ್ಯ ಎಂದರು.
ತಾಲೂಕು ಸಾಮಾಜಿಕ ಪರಿಶೋಧನ ವ್ಯವಸ್ಥಾಪಕ ಎಸ್. ಮಂಜುನಾಥ್ ಮಾತನಾಡಿ, ನರೇಗಾ ಯೋಜನೆ ಅಡಿ ಮಾನವ ದಿನಗಳನ್ನು ಸೃಜನೇ ಮಾಡಿಕೊಂಡಾಗ ಹೆಚ್ಚೆಚ್ಚು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತದೆ ನೀವು ಹೇಳುವಂತೆ ಬೆಳಿಗ್ಗೆ ಮತ್ತೆ ಸಂಜೆ ನೌಕರರ ಜಿಪಿಎಸ್ ಮಾಡುವುದು ಕಡ್ಡಾಯವಾಗಿದ್ದು, ಇದು ನಿಮಗೆ ಕಷ್ಟ ಅನಿಸಿದರೂ ಕೆಲಸವಿಲ್ಲದವರಿಗೆ ಹಾಗೂ ಊಟಕ್ಕೆ ಕಷ್ಟಪಡುವ ಬಡವರಿಗೆ ಇದು ಊಟ ನೀಡುತ್ತದೆ ಎಂದು ತಿಳಿಸಿದರು.
ಪಿಡಿಒ ಪರಮೇಶ್ ಮಾತನಾಡಿ, ಪಂಚಾಯ್ತಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಳ್ಳಲು ಎಲ್ಲ ವರ್ಗದವರಿಗೂ 57 ಸಾವಿರ ರು. ನೀಡುತ್ತಿದ್ದು, ವಾರ್ಡ್ ಸಭೆ ಹಾಗೂ ಗ್ರಾಮ ಸಭೆಯಲ್ಲಿ ಹೆಸರು ನೋಂದಾಯಿಸಿದವರಿಗೆ ಮೊದಲನೇ ಆದ್ಯತೆ ನೀಡಲಾಗುವುದು ಎಂದರು.
ಸಾರ್ವಜನಿಕರು ಕೂಡ ಹೆಚ್ಚು ಭಾಗವಹಿಸಿ ಸರ್ಕಾರದಿಂದ ಅನುಷ್ಠಾನಗೊಂಡ ಕಾಮಗಾರಿಗಳ ಬಗ್ಗೆ ತಿಳಿದುಕೊಳ್ಳಬೇಕು. ತಮ್ಮ ಮನೆ ಕಂದಾಯ, ನೀರಿನ ತೆರಿಗೆ ಹಣವನ್ನು ಸಕಾಲದಲ್ಲಿ ಪಾವತಿಸಿ ಪಂಚಾಯಿತಿ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಜಾನಕಿ ವೆಂಕಟರಾಮು, ಉಪಾಧ್ಯಕ್ಷೆ ಸುಮ ಶಿವಕುಮಾರ್, ಪಂಚಾಯತಿ ಸದಸ್ಯರಾದ ರಾಣಿ, ಶೀಲಾ ಪ್ರತಿಭಾ, ರಾಮಲಿಂಗು, ಸಣ್ಣ ತಮ್ಮಯ್ಯ, ನರೇಗಾ ತಾಂತ್ರಿಕ ಎಂಜಿನಿಯರ್ ರಕ್ಷಿತ್, ಗ್ರಾಮ ಸಂಪನ್ಮೂಲ ವ್ಯಕ್ತಿ ಅಶ್ವಿನಿ ಇದ್ದರು.