ಕನ್ನಡಪ್ರಭ ವಾರ್ತೆ ರಾಮನಗರ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಬ್ರದರ್ಸ್, ನಾನು ಸೇರಿದಂತೆ ಹಲವರು ಇದೆ ಜಿಲ್ಲೆಯವರು. ಈ ಜಿಲ್ಲೆ ಪರಿಸ್ಥಿತಿ ಬಗ್ಗೆ ನಮಗೆ ಗೊತ್ತು. ನೀವು ಈ ಜಿಲ್ಲೆಯವರಲ್ಲ. ಈ ಜಿಲ್ಲೆ, ಕ್ಷೇತ್ರದ ಬಗ್ಗೆ ಸರಿಯಾದ ಮಾಹಿತಿ, ಅರಿವು ಇಲ್ಲ. ಮಾಹಿತಿ ಇದ್ದಿದ್ದರೆ ಹೀಗೆಲ್ಲ ಮಾತನಾಡುತ್ತಿರಲಿಲ್ಲ. ಈವರೆಗೂ ಜಿಲ್ಲೆಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಕಲ್ಪಿಸಲಾಗಿಲ್ಲ. ರಾಮನಗರವನ್ನು ಜಿಲ್ಲೆಯಾಗಿ ನೋಡಲು ಆಗುತ್ತಿಲ್ಲ ಎಂದರು.
ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರು ನಾಮಕರಣಗೊಂಡ ಮೇಲೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅವಕಾಶಗಳಿವೆ. ಹೀಗಾಗಿಯೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಎಲ್ಲ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.ಮುಖ್ಯಮಂತ್ರಿಗಳು ಅಭಿವೃದ್ಧಿ ಕೆಲಸ ಬಿಟ್ಟು ಅನಗತ್ಯ ಕಾರಣಗಳ ಚರ್ಚೆಗೆ ಆಸ್ಪದ ಕೊಟ್ಟವರಲ್ಲ. ನಮ್ಮ ಮನವಿಗೆ ಮನ್ನಣೆ ನೀಡಿ 5 ತಾಲೂಕುಗಳು ಸೇರಿ ಬೆಂಗಳೂರು ದಕ್ಷಿಣ ಜಿಲ್ಲೆ ಮಾಡುತ್ತಾರೆ. ಅಭಿವೃದ್ಧಿ ವಿಚಾರದಲ್ಲಿ ಮುಂದೆ ಕಾದು ನೋಡಿ ಎಂದರು.
ಕಾಂಗ್ರೆಸ್ಸಿಗರಿಗೆ ರಾಮನ ಹೆಸರು ಕಂಡರೆ ಆಗುವುದಿಲ್ಲ. ಹೀಗಾಗಿ ಜಿಲ್ಲೆ ಹೆಸರು ಬದಲಾವಣೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಇಕ್ಬಾಲ್ ಹುಸೇನ್ , ಸೃಷ್ಟಿಕರ್ತ ರಾಮ. ನಾವೆಲ್ಲ ರಾಮನ ಭಕ್ತರು, ಈ ಬಗ್ಗೆ ಮೊದಲು ಹೇಳಿದ್ದೇನೆ. ಈಗಲೂ ಹೇಳುತ್ತಿದ್ದೇನೆ. ಇವರಿಗೆಲ್ಲ ರಾಮ ಈಗ ಕಾಣುತ್ತಿದ್ದಾರೆ. ನಾವು ಸಾವಿರಾರು ವರ್ಷಗಳಿಂದ ರಾಮನ ಪೂಜೆ ಮಾಡಿಕೊಂಡು ಬಂದಿದ್ದೇವೆ ಎಂದು ತಿರುಗೇಟು ನೀಡಿದರು.
ಗ್ರೆಟರ್ ಬೆಂಗಳೂರು ಮಾಡೋ ವಿಚಾರ ಏನಾಯ್ತು ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಕಾದು ನೋಡಿದರೆ ಗ್ರೇಟರ್ ಬೆಂಗಳೂರು ಏನು ಎಂಬುದು ಅರ್ಥ ಆಗುತ್ತದೆ. ಗ್ರೇಟರ್ ಬೆಂಗಳೂರು ಎಂಬುದರ ಅರ್ಥನೇ ಇವರಿಗೆ ಗೊತ್ತಿಲ್ಲ. ಓದಿ ಅದರ ಕಾನ್ಸೆಪ್ಟ್ ಏನು ಅಂತ ಅರ್ಥ ಮಾಡಿಕೊಳ್ಳಲಿ ಎಂದು ಇಕ್ಬಾಲ್ ಹುಸೇನ್ ತಿರುಗೇಟು ನೀಡಿದರು.