ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ನಗರದ ಮಂಗಳವಾರ ಪೇಟೆಯ ವೃತ್ತದಿಂದ ಗಾಂಧಿವೃತ್ತ, ವೀರಭದ್ರೇಶ್ವರ ಲೇನ್‌ದವರೆಗೆ ವಾಸಿಸುವ ಅನೇಕ ಕುಟುಂಬಗಳು ಈ ಪಟಾಕಿಯ ಸದ್ದು ಹಾಗೂ ಹೊಗೆಯಿಂದ ಬೇಸತ್ತು ತಮ್ಮ ತಮ್ಮ ಮನೆ ಬಾಗಿಲ ಹಾಕಿಕೊಂಡಿದ್ದರು. ಅನೇಕ ಅಧಿಕಾರಿಗಳು ಈ ಪಟಾಕಿ ಸುಡುವುದನ್ನು ನಿಲ್ಲಸಬೇಕೆಂದು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಭಕ್ತರು ತಮ್ಮ ಇಷ್ಟಾರ್ಥಕ್ಕಾಗಿ ಪಟಾಕಿ ಸಿಡಿಸುವುದು ವಾಡಿಕೆಯಾಗಿದೆ. ಧಾರ್ಮಿಕತೆಗೆ ಧಕ್ಕೆ ಬಾರದಿರಲಿ ಎಂಬ ಸದುದ್ದೇಶದಿಂದ ಕೆಲವು ಅಧಿಕಾರಿಗಳು ಮೌನರಾಗಿದ್ದಾರೆಂದು ಹೇಳಲಾಗುತ್ತಿದೆ.
ಸುಟ್ಟ ಪಟಾಕಿಗಳ ಮದ್ದಿನ ಕಾಗದದ ಚೂರುಗಳು ೩ ಟ್ರ್ಯಾಕ್ಟರ್‌ನ ಟ್ರ್ಯಾಲಿಗಳಷ್ಟು ರಸ್ತೆ ಮೇಲೆ ಬಿದ್ದಿರುವುದನ್ನು ಸ್ವತಃ ಪೌರಾಯುಕ್ತ ಜಗದೀಶ ಈಟಿ ರಸ್ತೆಗಳಿದು ನೂರಾರು ಸಿಬ್ಬಂದಿಗಳಿಂದ ಸ್ವಚ್ಛತೆಯಲ್ಲಿ ಭಾಗಿಯಾಗಿದ್ದರು.