ಕೊಟ್ಟೂರೇಶ್ವರ ತೇರು ಗಡ್ಡೆ ಹೊರಗೆ ಎಳೆದ ಭಕ್ತರು

KannadaprabhaNewsNetwork |  
Published : Jan 24, 2026, 03:30 AM IST
ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮೀಯ  ಬೃಹತ್ ತೇರು ಗಡ್ಡೆಯನ್ನು ಹೊರಗಿ ಹಾಕುವ ಕಾರ್ಯಕ್ರಮ  ವಿಜೃಂಭನೆಯಿಂದ ಸಾಗಿತು | Kannada Prabha

ಸಾರಾಂಶ

ಪ್ರಕ್ರಿಯೆಯೊಂದಿಗೆ ಫೆ.12ರಂದು ನಡೆಯಲಿರುವ ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವಕ್ಕೆ ಅತಿ ಎತ್ತರದ ರಥ ನಿರ್ಮಿಸುವ ಕಾರ್ಯಕ್ಕೆ ಚಾಲನೆ ಪಡೆಯಿತು.

ಕೊಟ್ಟೂರು: ಹೆಸರಾಂತ ಕೊಟ್ಟೂರು ಗುರು ಕೊಟ್ಟೂರೇಶ್ವರ ಸ್ವಾಮಿಯ ಬೃಹತ್ ತೇರು ಗಡ್ಡೆಯ ಗಾಲಿಗಳನ್ನು ಹೊರಗೆ ಹಾಕುವ ಧಾರ್ಮಿಕ ಕಾರ್ಯಕ್ರಮ ಶುಕ್ರವಾರ ಸಂಜೆ ಸಾವಿರಾರು ಭಕ್ತರು ಪಾಲ್ಗೊಳ್ಳುವಿಕೆಯಲ್ಲಿ ಶ್ರದ್ಧಾ ಭಕ್ತಿಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.ಈ ಪ್ರಕ್ರಿಯೆಯೊಂದಿಗೆ ಫೆ.12ರಂದು ನಡೆಯಲಿರುವ ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವಕ್ಕೆ ಅತಿ ಎತ್ತರದ ರಥ ನಿರ್ಮಿಸುವ ಕಾರ್ಯಕ್ಕೆ ಚಾಲನೆ ಪಡೆಯಿತು. ಶುಕ್ರವಾರ ಮಧ್ಯಾಹ್ನ ಕೊಟ್ಟೂರೇಶ್ವರ ಹೀರೆಮಠದಲ್ಲಿ ಮಧ್ಯಾಹ್ನನದ ಮೂರ್ತಿಗೆ ಪೂಜೆ ನೆರವೇರಿಸಿದ ಕೆಲ ಹೊತ್ತಿನಲ್ಲಿ ಕ್ರಿಯಾ ಮೂರ್ತಿ ಪ್ರಕಾಶ್ ಕೊಟ್ಟೂರು ದೇವರು ಸಾನ್ನಿಧ್ಯದಲ್ಲಿ ಧರ್ಮಕರ್ತ ಎಂ.ಕೆ. ಶೇಖರಯ್ಯ ಮತ್ತಿತರ ಪೂಜ ಬಳಗದವರು ಮಠದಿಂದ ಹೊರ ಬಂದು ಮೆರವಣಿಗೆಯೊಂದಿಗೆ ತೇರು ಗಡ್ಡೆವರೆಗೆ ಸಾಗಿ ಬಂದರು.

ನಂತರ ತೇರು ಗಡ್ಡೆಯಲ್ಲಿದ್ದ ಬೃಹತ್ ಗಡ್ಡೆಯ ಮೇಲೆ ಪ್ರಕಾಶ್ ಕೊಟ್ಟೂರು ದೇವರು ಮತ್ತಿತರ ಪೂಜ ಬಳಗದವರು ಆಸೀನರಾಗಿ ತೇರು ಗಡ್ಡೆಯನ್ನು ಎಳೆದೊಯ್ಯಲು ನೆರದಿದ್ದ ಭಕ್ತರಿಗೆ ಕೈಸನ್ನೆ ತೋರಿದರು. ಭಕ್ತರು ಕೊಟ್ಟೂರೇಶ್ವರಗೆ ಜೈಕಾರಗಳನ್ನು ಕೂಗುತ್ತ ಸಂಜೆ 4:30ರ ವೇಳೆಗೆ ತೇರು ಗಡ್ಡೆಯನ್ನು ಎಳೆಯಲು ಮುಂದಾದರು. ಮುಖ್ಯ ರಸ್ತೆ ಮೂಲಕ ತೇರು ಗಡ್ಡೆ ಸಾಗಿ ತೇರು ಸಾಗುವ ಜಾಗಕ್ಕೆ ಕೆಲ ನಿಮಿಷದಲ್ಲೇ ಬಂದು ಸೇರಿತು. ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ನೆರೆದಿದ್ದವರು ಕೈಮುಗಿದು ನಮಸ್ಕರಿಸಿ ಭಕ್ತಿ ಪ್ರದರ್ಶಿಸಿದರು.

ತೇರು ಗಡ್ಡೆ ಹೊರ ಬಂದ ದಿನವಾದ ಶುಕ್ರವಾರದ ರಾತ್ರಿ 10ರ ಸುಮಾರಿಗೆ ತೇರಿನಲ್ಲಿ ಚೌಡಮ್ಮದೇವಿ ಮೂರ್ತಿಗೆ ಪೂಜೆಯನ್ನು ರಾತ್ರಿ 10ರ ನಂತರ ಕ್ರಿಯಾಮೂರ್ತಿ ಮತ್ತಿತರ ನೇತೃತ್ವದಲ್ಲಿ ಕಮ್ಮಾರರು ನೆರವೇರಿಸಲಿದ್ದು, ನಂತರ ಗುಗ್ಗರಿಯನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ.

ತೇರು ಗಡ್ಡೆಯನ್ನು ಹೊರತಂದ ಹಿನ್ನೆಲ್ಲೆಯಲ್ಲಿ ಅತಿ ಎತ್ತರದ ಕೊಟ್ಟೂರೇಶ್ವರ ರಥದ ನಿರ್ಮಾಣ ಕಾರ್ಯ ಭರತ ಹುಣ್ಣಿಮೆಯ ನಂತರ ದಿನದಿಂದ ಆರಂಭಗೊಳ್ಳಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ